- Advertisement -
www.karnatakatv.net : ಮೈಸೂರು: ನಗರದ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ ಆದಾಯದಲ್ಲಿ ಈ ಬಾರಿ ತುಂಬಾ ಇಳಿಕೆಯು ಕಂಡುಬಂದಿದೆ. ಪ್ರತಿ ಸಲ ದೇಗುಲದ ಭಕ್ತರ ಹುಂಡಿಯ ಹಣ ಕೋಟಿ ರೂ ದಾಟುತಿತ್ತು. ಆದರೆ ಈಗ 18 ಲಕ್ಷರೂಗಳಷ್ಟು ಆದಾಯ ಇಳಿಕೆಯಾಗಿದೆ.
ಮಹಾಮಾರಿ ಕೊರೊನಾ ಹಿನ್ನಲೇ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹಾಕಿರುವ ಕಾರಣ ಆದಾಯದಲ್ಲಿ ಇಳಿಕೆ ಕಂಡುಬಂದಿದೆ. ಚಾಮುಂಡೇಶ್ವರಿ ದೇವಾಲಯದಲ್ಲಿನ ಹುಂಡಿಹಣ ಎಣಿಕಯನ್ನು ಮಾಡಿದಾಗ ಒಂದು ತಿಂಗಳಲ್ಲಿ 82,16,754 ರೂ. ಸಂಗ್ರಹವಾಗಿದೆ. ಹಾಗೇ 2 ಸಾವಿರ ಮುಖ ಬೆಲೆಯ 81 ನೋಟುಗಳು. ಐನೂರು ಮುಖ ಬೆಲೆಯ 6754 ನೋಟುಗಳು. ಇನ್ನೂರು ಮುಖಬೆಲೆಯ 2291 ನೋಟುಗಳು. ನೂರು ರೂ. ಮುಖಬೆಲೆಯ 26,048 ನೋಟುಗಳು, ನಾಣ್ಯಗಳು ಸೇರಿದಂತೆ ಒಟ್ಟು 82,16,754 ರೂ. ಸಂಗ್ರಹವಾಗಿದೆ.
ಕರ್ನಾಟಕ ಟಿವಿ- ಮೈಸೂರು
- Advertisement -

