‘‘ಕಾಣೆಯಾದವರ ಬಗ್ಗೆ’’ ಚಂದನ್ ಮತ್ತು ಆಲ್ ಓಕೆ ಪ್ರಕಟಣೆ

ಸ್ಯಾಂಡಲ್ ವುಡ್ ಸಂಗೀತ ಲೋಕದಲ್ಲಿ ಱಪ್ ಹಾಡುಗಳ ಬಗ್ಗೆ ಹುಚ್ಚು ಹಚ್ಚಿಸಿದವರಲ್ಲಿ ಪ್ರಮುಖರು ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಖ್ಯಾತಿಯ ಅಲೋಕ್ ಕುಮಾರ್.. ಈ ಇಬ್ಬರು ಒಂದು ಕಾಲದಲ್ಲಿ ಒಟ್ಟಿಗೆ ಕನ್ನಡ ಱಪ್ ಸಾಂಗ್ ಗಳನ್ನ ಸೃಷ್ಟಿಸಲು ಮುಂದವರು.. ಆದ್ರೆ ಕ್ರಮೆಣ ಅವರೊಂದು ದಾರಿ ಇವ್ರೊಂದು ದಾರಿಯಲ್ಲಿ ತಮ್ಮದೆ ಶೈಲಿಯಲ್ಲಿ ಱಪ್ ಸಾಂಗ್ಸ್ ಗಳನ್ನ ಕನ್ನಡಿಗರಿಗೆ ಕೊಟ್ಟವರು ಕನ್ನಡದ ಜೊತೆಗೆ ಸಖಲ ಸಂಗೀತ ಪ್ರೀಯರಿಗೂ ಇಷ್ಟವಾದವರು..

ಈಗ ಇದೇ ಆಲ್ ಓಕೆ ಮತ್ತು ಚಂದನ್ ಶೆಟ್ಟಿ ಒಟ್ಟಿಗೆ ಸೇರಿ ಒಂದು ಹೊಸ ಱಪ್ ಸಾಂಗ್ ಅನ್ನ ಬಿಡುಗಡೆ ಮಾಡಲು ಮುಂದಾಗಿದ್ದಾರೆ.. ಹಾಗಾದ್ರೆ ಯಾವುದು ಆ ಱಪ್ ಸಾಂಗ್ ಅನ್ನೊ ಪ್ರಶ್ನೆಗೆ ಉತ್ತರ ಕಾಣೆಯಾದವರ ಬಗ್ಗೆ ಪ್ರಕಟಣೆ..

ಕಾಣೆಯಾದವರ ಬಗ್ಗೆ ಪ್ರಕಟಣೆ.. ವಿಶಿಷ್ಠ ಟೈಟಲ್ ನಿಂದ ಗಮನ ಸೇಳೆದಿರೋ ಸಿನಿಮಾ ಇದು.. ಱಂಬೋ 2 , ಕೃಷ್ಣ ರುಕ್ಕು ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನದ ಜೊತೆಗೆ ಫಸ್ಟ್ ಟೈಮ್ ಆ್ಯಕ್ಟಿಂಗ್ ಮಾಡಿರೋ ಸಿನಿಮಾ ಇದು.. ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ಪೋಷಕ ಕಲಾವಿದರಾದ ರಂಗಾಯಣ ರಘು ,ಆರ್ಮುಗಂ ರವಿಶಂಕರ್, ತಬಲ ನಾಣಿ ಹಾಗೂ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ ಈ ‘‘ಕಾಣೆಯಾದವರ ಬಗ್ಗೆ ಪ್ರಕಟಣೆ’’ ಸಿನಿಮಾದಲ್ಲಿ..

ವೆನಿಲಾ ಐಸ್ ಕ್ರೀಮ್ ಮೇಲೆ ಕಾಣೋ ಚರಿಯಂತೆ ಈ ಸಿನಿಮಾದಲ್ಲಿ ಚುಟು ಚುಟು ಬೆಡಗಿ , ಪಠಾಕಿ ಪೋರಿ ಆಶಿಕಾ ರಂಗನಾಥ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.. ಕೆಲ ದಿನಗಳ ಹಿಂದೆ ಒಂದು ಇಂಟರಸ್ಟಿಂಗ್ ಟ್ರೈಲರ್ ಬಿಟ್ಟು ಗಮ ಗಮನ ಸೇಳಿದ್ದಿದ್ದ ಕಾಣೆಯಾದವರ ಬಗ್ಗೆ ಪ್ರಕಟಣೆ ಟೀಮ್ ಈ ಬಾರಿ ಇಬ್ಬರು ಸ್ಟಾರ್ ರಾಪ್ ಸ್ಟಾರ್ಸ್ ಗಳನ್ನ ಒಟ್ಟು ಸೇರಿಸಿ ಹಾಡಿಸಿದ್ದಾರೆ..

ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಕ್ರಾಂತಿ ಕುಮಾರ್ ಸಾಹಿತ್ಯದ ಸಿರಿಯಲ್ಲಿ ಒಂದು ಪಾರ್ಟಿ ಸಾಂಗ್ ಅನ್ನ ಆಲ್ ಓಕೆ ಮತ್ತು ಚಂದನ್ ಶೆಟ್ಟಿ ಅವರಿಂದ ಹಾಡಿಸಿದೆ ಚಿತ್ರತಂಡ..

ಈ ಹಾಡಿನಲ್ಲಿ ರಂಗಯಾಣ ರಘು , ತಬಲ ನಾಣಿ , ರವಿಶಂಕರ್ ಹಾಗೂ ಚಿಕ್ಕಣ ರಾಪ್ ಸ್ಟಾರ್ ಗಳಂತೆ ಕುಣಿದಿರೋದು ವಿಶೇಷ.. ಈ ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾ ರಿಲೀಸ್ ಸಿದ್ಧವಾಗುತ್ತಿದ್ದು ಮುಂದಿನ ದಿನಗಳಲ್ಲಿ ಒಂದೊಳ್ಳೆ ಡೇಟ್ ನೋಡ್ಕೊಂಡು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ..

About The Author