www.karnatakatv.net :ಲೂನಾರ್ ಸೈನ್ಸ್ ವರ್ಕ್ ಶಾಪ್ ನಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ ಶಿವನ್, ಚಂದ್ರಯಾನ-2 ಕ್ಕೆ ಎರಡು ವರ್ಷ ಪೂರ್ಣಗೊಂಡಿದ್ದು, ಅದರೊಂದಿಗೆ ಹಾರಿಬಿಡಲಾಗಿರುವ 8 ವಿವಿಧ ಉಪಕರಣಗಳು ರಿವೋಟ್ ಸೆನ್ಸಿಂಗ್, ಇನ್ ಸೈಟ್ ಅಬ್ಸರ್ವೇಷನ್ ಗಳು ಇನ್ನೂ ಕೆಲಸವನ್ನು ಮಾಡುತ್ತಿವೆ.
ಈ ನೌಕೆಯು 9 ಸಾವಿರಕ್ಕೂ ಹೆಚ್ಚು ಚಂದ್ರನ ಸುತ್ತ ಸುತ್ತುಹಾಕಿ, ಒಳ್ಳೆಯ ಮಾಹಿತಿ ಮತ್ತು ಅನೇಕ ಫೋಟೋಗಳನ್ನು ಕಳುಹಿಸಿದೆ ಎಂದು ತಿಳಿಸಿದ್ರು. 2019 ರಲ್ಲಿ ಶ್ರೀಹರಿಕೋಟ ರಾಕೆಟ್ ಉಡಾವಣೆ ಕೇಂದ್ರದಿಂದ ಬಾಹುಬಲಿ ಹೆಸರಿನ ಜಿಎಸ್ ಎಲ್ ವಿ ರಾಕೆಟ್ ಅನ್ನು ಚಂದ್ರನಲ್ಲಿಗೆ ಕಳುಹಿಸಲಾಗಿತ್ತು. ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೆ ಭೂಸ್ಪರ್ಶಕವನ್ನು ಇಳಿಸುವ ಮೊದಲ ಯೋಜನೆ ಇದಾಗಿದೆ. ಇದಕ್ಕೆ ಅಂತನಾ ಸುಮಾರು 425 ಕೋಟಿ ರೂ. ವೆಚ್ಚ ವಾಗಿದೆ ಎನ್ನಲಾಗಿದೆ. ಚಂದ್ರಯಾನ-1 ಅಭಿಯಾನದ ಯಶಸ್ಸಿಗೆ ಕಾರಣರಾದ ಮೈಲ್ಸ್ವಾಮಿ ಅಣ್ಣಾದೊರೈ ನೇತೃತ್ವದ ತಂಡವು ಚಂದ್ರಯಾನ-2 ಅಭಿಯಾನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.