ಬೆಂಗಳೂರು: ನಗರದಲ್ಲಿ ಬೈಕ್ ಹ್ಯಾಂಡಲ್ ತಗುಲಿ, ಗಲಾಟೆಯಲ್ಲಿ ಹತ್ಯೆಯಾದಂತ ಚಂದ್ರ ಹತ್ಯೆ ಪ್ರಕರಣ ಸಂಬಂಧ, ಸಿಐಡಿ ತನಿಖೆಗೆ ವಹಿಸುತ್ತಿರೋದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಘೋಷಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಚಂದ್ರು ಹತ್ಯೆ ಪ್ರಕರಣ ಸತ್ಯ ಹೊರಗಡೆ ಬರಬೇಕು. ನಿನ್ನೆ ಕಮಿಷನರ್ ಮತ್ತು ಡಿಜಿ ಜೊತೆ ನಾನು ಕರೆಸಿ ಮಾತನಾಡಿದ್ದೇನೆ. ಈ ಪ್ರಕರಣವನ್ನ ಸಿಐಡಿಗೆ ಕೊಡಲು ತೀರ್ಮಾನ ಮಾಡಿದ್ದೇನೆ ಎಂಬುದಾಗಿ ಘೋಷಿಸಿದ್ದಾರೆ.
ಚಂದ್ರು ಹತ್ಯೆ ಕೇಸ್ ಬಗ್ಗೆ ಕಮಿಷನರ್ ಸ್ಪಷ್ಟನೆ ಕೊಡುತ್ತಾರೆ.ಯಾರ್ ವಾಗ್ದಾಳಿ ಮಾಡ್ತಾರೋ ಯಾರ್ ಹೇಳಿಕೆ ಕೊಡ್ತಾರೋ ಅದು ಮುಖ್ಯವಲ್ಲ. ಸತ್ಯ ಹೊರಗಡೆ ಬರಬೇಕು ಅಷ್ಟೇ. ಈ ಹಿನ್ನೆಲೆಯಲ್ಲಿ ನಿನ್ನೆ ನಾನು ಕಮಿಷನರ್ ಮತ್ತು ಡಿಜಿಯವರ ಬಳಿ ಮಾತನಾಡಿದ್ದೇನೆ. ಈ ಪ್ರಕರಣವನ್ನ ಸಿಐಡಿಗೆ ಕೊಡಬೇಕು ಎಂದು ತೀರ್ಮಾನ ಮಾಡಿದ್ದೇನೆ. ನಿಷ್ಪಕ್ಷಪಾತವಾಗಿ ತೆನಿಖೆಯಾಗಲಿ ಸತ್ಯ ಹೊರಗಡೆ ಬರಲಿ. ಮೂರನೇ ಪಾರ್ಟಿಯಿಂದ ತೆನಿಖೆಯಾಗ್ಲಿ. ಸತ್ಯ ಹೊರಗಡೆ ಬರ್ಲಿ. ಹೀಗಾಗಿ ಸಿಐಡಿ ತೆನಿಖೆಗೆ ಕೊಡಬೇಕು ಎಂದು ಹೇಳಿದ್ದೇನೆ. ಇವತ್ತು ಬಹುತೇಕವಾಗಿ ಕಮಿಷನರ್ನವರು ಡಿಜೆಗೆ ಪತ್ರ ಬರೆದು ಸಿಐಡಿಗೆ ಕೊಡ್ತಾರೆ ಎಂದು ತಿಳಿಸಿದರು.
ರಾಜ್ಯ ಪ್ರವಾಸ ವಿಚಾರವಾಗಿ ಮಾತನಾಡಿದ ಅವರು, ಮೂರು ತಂಡದಲ್ಲಿ ರಾಜ್ಯ ಪ್ರವಾಸ ಮಾಡ್ತೀವಿ. ಬೂತು ಜಿಲ್ಲಾ ಮಂಡಲ ಮಟ್ಟದಲ್ಲಿ ಪ್ರವಾಸ ಕೈಗೊಳ್ಳಲಾಗುತ್ತದೆ. ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ಮಾಡ್ತೀವಿ. ಎಲ್ಲರೂ ಎರಡೆರಡು ದಿನ ಮೂರು ವಿಭಾಗದಲ್ಲಿ ಮೂರು ತಂಡದಿಂದ ಪ್ರವಾಸ ಮಾಡಲಾಗುತ್ತದೆ. ಈ ಪ್ರವಾಸದಲ್ಲಿ ಯಡಿಯೂರಪ್ಪ ಅರುಣ್ ಸಿಂಗ್ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಎಲ್ಲಾ ನಾಯಕರು ಇರ್ತಾರೆ ಎಂದು ಹೇಳಿದರು.




