Astrology:
ವಾರದಲ್ಲಿ ಆರನೇಯವಾರ ಶುಕ್ರವಾರ ಹಾಗೂ ಈ ವಾರವನ್ನು ಆಳುವವನು ಶುಕ್ರ. ಶುಕ್ರವಾರ ಶುಕ್ರನ ದಿನವಾಗಿದೆ ಹೀಗಾಗಿ ಈ ದಿನ ಜನಿಸಿದವರಿಗೆ ಶುಕ್ರನ ಅನುಗ್ರಹ ಇರಲಿದೆ. ಶುಕ್ರನು ಪ್ರೀತಿ, ವಿಶ್ವಾಸ, ಸೌಂದರ್ಯ, ಪ್ರಣಯ, ಕಲೆ, ಹರ್ಷ, ಶ್ರೀಮಂತಿಕೆ, ನೆಮ್ಮದಿಯನ್ನು ಪ್ರತಿನಿಧಿಸುತ್ತಾನೆ. ಶುಕ್ರವಾರ ಜನಿಸಿದವರು ಬೇರೆಯವರ ದೃಷ್ಟಿಕೋನ ಹಾಗೂ ಅಭಿಪ್ರಾಯಗಳನ್ನು ಹೆಚ್ಚು ಅವಲಂಬಿಸುತ್ತಾರೆ. ಇವರು ಪ್ರೀತಿಯಲ್ಲಿ ನೆಮ್ಮದಿಯನ್ನು ಕಾಣುತ್ತಾರೆ.ಈ ದಿನ ಜನಿಸಿದವರು ಸೌಂದರ್ಯವಂತರಾಗಿದ್ದು, ಅಲಂಕಾರಪ್ರಿಯರೂ ಪ್ರತಿಭಾವಂತರೂ ಆಗಿರುತ್ತಾರೆ.ಇವರಲ್ಲಿರುವ ಪ್ರತಿಭೆಯನ್ನು ಪ್ರೀತಿಯಿಂದ ಪೋಷಿಸಬೇಕು ಹಾಗೂ ಇವರಲ್ಲಿ ಅಡಗಿರುವಂತಹ ಪ್ರತಿಭೆಯನ್ನುಹೊರಗೆ ತರಬೇಕು.
ಮನೆಯು ಸುಂದರವಾಗಿರಬೇಕೆನ್ನುವ ನಿಮ್ಮ ಕನಸುಗಳಿಂದಾಗಿ ವಿಶಾಲವಾದ ಪರಿಸರ ಹಾಗೂ ಐಷಾರಾಮಿ ಸೌಕರ್ಯಗಳನ್ನು ನೀವು ಬಯಸುತ್ತೀರಿ. ನಿಮಗೆ ಸಂತೋಷ ನೀಡುವಂತಹ, ಸಂಪತ್ತು ವೃದ್ಧಿಸುವಂತಹ ಪಾಲುದಾರರನ್ನು ಹುಡುಕಿ.ಸಂತೋಷದಾಯಕ ಹಾಗೂ ಆಹ್ಲಾದಕರ ಜೀವನವು ನಿಮ್ಮದಾಗಿರುತ್ತದೆ.ಈ ದಿನ ಜನಸಿದವರು ಸೋಷಿಯಲ್ ಆಗಿರುವುದಲ್ಲದೆ, ಸಾಮಾಜಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇದರ ಜೊತೆಗೆ ಕಲಾತ್ಮಕ ಪ್ರತಿಭೆಯನ್ನು ಹೊಂದಿರುವ ಇವರು, ಸ್ವಲ್ಪ ಸೋಮಾರಿಗಳೂ ಆಗಿರುತ್ತಾರೆ. ಜೊತೆಗೆ ಆರಾಮ್ ಲೈಫ್ಅನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ, ಬೇರೆಯವರ ಅಭಿಪ್ರಾಯಗಳಿಗೆ ಹೆಚ್ಚು ಮನ್ನಣೆಕೊಡುತ್ತಾರೆ.
ಶುಕ್ರವಾರ ಜನಿಸಿದವರು ಆಕರ್ಷಕ ವ್ಯಕ್ತಿತ್ವ ಉಳ್ಳವರು:
ಯಾರನ್ನಾದರೂ ಆಕರ್ಷಿಸುವ, ಮೋಡಿ ಮಾಡುವ ಕಲೆ ಇವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ, ಸ್ಪರ್ಧಾತ್ಮಕ ವಿಷಯಕ್ಕೆ ಬಂದರೆ ಕೆಲವೊಮ್ಮೆ ಎದುರಾಳಿಯನ್ನು ಕಂಡು ಅಸೂಯೆಪಡುವ ಮನಸ್ಥಿತಿ ಇವರದ್ದಾಗಿರುತ್ತದೆ. ಇವರು ಕೈ ಹಾಕಿದ ಕ್ಷೇತ್ರಗಳಲ್ಲಿ ಯಶಸ್ಸನ್ನು ಸುಲಭವಾಗಿ ಕಾಣಬಹುದಾಗಿದ್ದು, ಹಣದ ಕೊರತೆ ಇವರಿಗೆ ಇರುವುದಿಲ್ಲ. ಇದೇ ವೇಳೆ ಸಂಗಾತಿಯ ಆಯ್ಕೆಯಲ್ಲಿಯೂ ಇವರು ಉತ್ತಮರಾಗಿರುತ್ತಾರೆ ಅದೃಷ್ಟವನ್ನು ಸರಿಯಾಗಿ ಬಳಸಿಕೊಳ್ಳುವುದನ್ನು ತಿಳಿದುಕೊಳ್ಳಬೇಕು.
ಈ ವಾರದಂದು ಜನಿಸಿದವರ ವೃತ್ತಿ ಜೀವನ ಉತ್ತಮವಾಗಿಯೇ ಇರಲಿದೆ;
ಹಣದ ವಿಷಯ ಸೇರಿದಂತೆ ಇನ್ನಿತರ ಸಂದರ್ಭದಲ್ಲಿ ದುಡುಕುವ ನಿರ್ಧಾರವನ್ನು ಮಾಡಬಾರದು. ಇವರು ಬಹಳ ಸಾಮರ್ಥ್ಯವನ್ನು ಹೊಂದಿದ್ದು, ಎಂತಹ ಕೆಲಸವನ್ನಾದರೂ ಸಾಧಿಸುವವರು. ಇವರಿಗೆ ಸೃಜನಶೀಲತೆ ಮತ್ತು ನಾವಿನ್ಯತೆಯ ಮನೋಭಾವವೂ ಇದೆ. ಜೊತೆಗೆ ನಿರ್ಧಾರದಲ್ಲಿ ಸ್ವಂತಿಕೆ ಇದೆ. ಇತರರಿಗೆ ಸಹಾಯ ಮಾಡುವ ಮನೋಭಾವ ಹೊಂದಿರುವವರು.
ಶುಕ್ರವಾರ ಜನಿಸಿದವರ ಪ್ರೀತಿ-ಪ್ರೇಮ:
ಶುಕ್ರವಾರ ಜನಿಸಿದವರು ಹೆಚ್ಚು ಭಾವನಾತ್ಮಕ ವ್ಯಕ್ತಿ, ನೀವು ಯಾವಾಗಲೂ ಜನರೊಂದಿಗೆ ಒಡನಾಟ ಬೆಳೆಸಿಕೊಳ್ಳಲು ಇಷ್ಟಪಡುತ್ತೀರಿ. ಆದ್ದರಿಂದ ನಿಮ್ಮ ಸಂಗಾತಿಯನ್ನು ಆರಿಸಿಕೊಳ್ಳುವುದು ತುಂಬಾ ಸುಲಭ. ನಿಮ್ಮ ಪ್ರೀತಿಯ ಸಂಗಾತಿಯನ್ನು ಸರಿಯಾಗಿಯೇ ಆಯ್ಕೆ ಮಾಡುತ್ತಿರಿ. ನೀವು ಸಂಗಾತಿಯನ್ನು ಆಯ್ಕೆ ಮಾಡುವಾಗ ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತೀರಿ. ನೀವು ಯಾರನ್ನಾದರೂ ಪ್ರೀತಿಸಿದಲ್ಲಿ ಅವರ ಪ್ರೀತಿಯಲ್ಲಿ ಸಂಪೂರ್ಣವಾಗಿ ಕಳೆದುಹೋಗುತ್ತೀರಿ. ಪ್ರೇಮ ವೈಫಲ್ಯ ಕಂಡಾಗ, ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ಶುಕ್ರವಾರ ಜನಿಸಿದವರ ವೈವಾಹಿಕ ಜೀವನ :
ಶುಕ್ರವಾರ ಜನಿಸಿದವರ ವೈವಾಹಿಕ ಜೀವನ ಭೂಮಿಯ ಮೇಲಿರುವ ಸ್ವರ್ಗದಂತಿರುತ್ತದೆ ಯಾಕೆಂದರೆ ನೀವು ಹೆಚ್ಚು ಪ್ರೀತಿಸುವವರು ಹಾಗೂ ಸಹಾನುಭೂತಿ ಇರುವಂತವರು. ನಿಮ್ಮ ಲೈಂಗಿಕ ಜೀವನವೂ ಚೆನ್ನಾಗಿರುತ್ತದೆ. ನಿಮ್ಮ ಸಂಗಾತಿಯ ಇಚ್ಛೆಗೆ ಅನುಗುಣವಾಗಿ ನಡೆದುಕೊಳ್ಳುತ್ತೀರಿ. ಸಂಬಂಧಗಳಲ್ಲಿ ಸಾಮರಸ್ಯವನ್ನು ಕಾಯ್ದುಕೊಳ್ಳಲು ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳುವುದು ಮುಖ್ಯ .ನಿಮ್ಮ ಮನೆಯಲ್ಲಿ ಎಲ್ಲಾ ಆಧುನಿಕ ಸೌಕರ್ಯಗಳು ಹಾಗೂ ಅನುಕೂಲತೆಯನ್ನು ಹೊಂದಿಸಲು ಕೆಲಸ ಮಾಡುವಿರಿ. ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ಅವರ ಬಗ್ಗೆ ಕಾಳಜಿ ವಹಿಸಿ. ಇದರಿಂದಾಗಿ ನಿಮ್ಮ ದಾಂಪತ್ಯ ಜೀವನವು ಸುಂದರವಾಗಿರುವುದು.
ಶುಕ್ರವಾರ ಜನಿಸಿದವರಿಗೆ ಕೆಲವು ಸಲಹೆಗಳು ಶುಕ್ರವಾರ ಜನಿಸಿದವರು ತಮ್ಮ ಅದೃಷ್ಟ ಸಂಖ್ಯೆ 6 ಆಗಿರುವುದರಿಂದ ಈ ದಿನ ಹೊಸ ಉದ್ಯಮಗಳನ್ನು ಪ್ರಾರಂಭಿಸಬಹುದು ಮತ್ತು ಅದು ಅವರಿಗೆ ಅದೃಷ್ಟ ಮತ್ತು ಯಶಸ್ವಿಯಾಗಬಹುದು. ಆ ದಿನಗಳಲ್ಲಿ ಸಹಾಯ ಮತ್ತು ದಾನಗಳನ್ನು ಮಾಡಬಹುದು, ಅಡೆತಡೆಗಳನ್ನು ನಿವಾರಿಸಲು, ಅದೃಷ್ಟವನ್ನು ಪಡೆಯಲು ಮತ್ತು ಯೋಗಕ್ಷೇಮದ ಜೀವನವನ್ನು ನಡೆಸಬಹುದು.
ಜ್ಯೋತಿಷ್ಯದ ಪ್ರಕಾರ ಮಂಗಳವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?
ಜ್ಯೋತಿಷ್ಯದ ಪ್ರಕಾರ ಬುಧವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?
ಜ್ಯೋತಿಷ್ಯದ ಪ್ರಕಾರ ಗುರುವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?