Friday, November 22, 2024

Latest Posts

ಜ್ಯೋತಿಷ್ಯದ ಪ್ರಕಾರ ಶನಿವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

- Advertisement -

Astrology:

ಹಿಂದೂ ಪಂಚಾಂಗದ ಪ್ರಕಾರ ಶನಿವಾರ ,ವಾರದ 7ನೇ ದಿನ. ಈ ದಿನವು ಶನಿ ದೇವ ಹಾಗೂ ಶನಿಗ್ರಹಕ್ಕೆ ಮೀಸಲಾದ ದಿನ ಎಂದು ಹೇಳಲಾಗುವುದು. ಶನಿವಾರ ಜನಿಸಿದ ವ್ಯಕ್ತಿಯ ಜೀವನವೂ ಸಾಕಷ್ಟು ಕಠಿಣ ಸ್ಥಿತಿಗಳಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ವಾರದಂದು ಜನಿಸಿದವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ.

ಶನಿವಾರ ಜನಿಸಿದ ವ್ಯಕ್ತಿಯ ಮೇಲೆ ಶನಿಯ ಪ್ರಭಾವ ಇರುತ್ತದೆ. ಅವರು ಜೀವನದಲ್ಲಿ ಸದಾ ನಿಶ್ಚಿತ ಮನೋಭಾವದಿಂದ ಕೂಡಿರುತ್ತಾರೆ. ಇವರು ನಿಧಾನವಾಗಿ ಸ್ಥಿರತೆಯುಳ್ಳ ಹಾಗೂ ಕಟ್ಟು ನಿಟ್ಟಾದ ಭಾವನೆಯನ್ನು ಹೊಂದಿರುತ್ತಾರೆ. ಆದರೆ ಇವರು ಭಾವನೆ ಹಾಗೂ ಮನೋಭಿಲಾಷೆಗಳನ್ನು ನೇರವಾಗಿಯೇ ವ್ಯಕ್ತಪಡಿಸುವರು. ಕೆಲವು ಸಂದರ್ಭಗಳಲ್ಲಿ ಅಚಲ ಮತ್ತು ಅನುಮಾನಾಸ್ಪದವಾದ ವರ್ತನೆಯನ್ನು ತೋರುವರು, ಇವರು ತಮ್ಮ ಎಲ್ಲ ವಿಷಯದಲ್ಲಿ ಅತ್ಯಂತ ಜವಾಬ್ದಾರಿಯುತ ವ್ಯಕ್ತಿಗಳಾಗಿ ಇರುತ್ತಾರೆ ಹಾಗೂ ಇವರು ಅತ್ಯಂತ ಗಂಭೀರ ವ್ಯಕ್ತಿಗಳಂತೆ ತೋರುವರು. ಆದರೆ ಅವರೊಂದಿಗೆ ಬೆರೆತವರಿಗೆ ಮಾತ್ರ ಅವರು ಅದ್ಭುತ ವ್ಯಕ್ತಿಗಳು ಎನ್ನುವ ಭಾವನೆಯನ್ನು ಹೊಂದುತ್ತಾರೆ.ಸಮಯ ನಿರ್ವಹಣೆ ಹಾಗೂ ಕರ್ತವ್ಯ ಪಾಲನೆಯಯನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಇವರು ಎಲ್ಲಾ ವಿಷಯದಲ್ಲೂ ಕಲಿಯುವ ಆಸಕ್ತಿ ಹೊಂದಿರುತ್ತಾರೆ, ಹಾಗಾಗಿಯೇ ಅವರು ಆಯ್ಕೆ ಮಾಡಿಕೊಂಡಿರುವ ಗುರಿಯನ್ನು ಸುಲಭವಾಗಿ ತಲಪುತ್ತಾರೆ.

ಶನಿವಾರ ಜನಿಸಿದವರು ಅತ್ಯಂತ ಬುದ್ಧಿವಂತರು ಹಾಗೂ ವ್ಯವಹಾರದ ವಿಷಯದಲ್ಲಿ ಅತ್ಯುತ್ತಮ ಯಶಸ್ಸನ್ನು ಪಡೆದುಕೊಳ್ಳುತ್ತಾರೆ .ಆಂತರಿಕವಾದ ಇಚ್ಛೆ ವ್ಯವಹಾರವನ್ನು ನಡೆಸಿ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಾರೆ. ಇವರಿಗೆ ಯಾವ ರೀತಿಯ ವ್ಯವಹಾರಗಳನ್ನು ನೀಡಿದರೂ ಅದನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. ಇವರು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಲು ಅವಕಾಶಗಳನ್ನು ಬಳಸಿಕೊಳ್ಳುವ ಜಾಣ್ಮೆ ತೋರಬೇಕು. ಇವರು ಯಾವುದೇ ಕೆಲಸವನ್ನು ಅತಿಬೇಗ ಮುಗಿಸುವ ಮನೋಭಾವ ಹೊಂದಿರುತ್ತಾರೆ. ವೃತ್ತಿ ಜೀವನದಲ್ಲಿ ಒಳ್ಳೆಯ ಸ್ಥಾನ ಮಾನವನ್ನು ಪಡೆದುಕೊಳ್ಳುತ್ತಾರೆ .

ಶನಿವಾರ ಹುಟ್ಟಿದವರು ನಾಚಿಕೆಯ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ತಮ್ಮ ಪ್ರೀತಿಯ ಜೀವನದಲ್ಲಿ ಸಂತೋಷ ಪಡೆದುಕೊಳ್ಳಲು ತಮ್ಮ ಪರಿವರ್ಥನೆಯನ್ನು ಬದಲಿಸಿ ಕೊಳ್ಳಬೇಕು. ವಿಶಾಲವಾದ ಹೃದಯವನ್ನು ಹೊಂದಿರುವ ಇವರು ತಮ್ಮ ಸಂಗಾತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಹಾಗೂ ಅವರಿಗೆ ಸಹಾಯ ಮತ್ತು ರಕ್ಷಣೆಯನ್ನು ನೀಡುತ್ತಾರೆ .ಇವರು ತಮ್ಮ ಸಂಗಾತಿ ಅಥವಾ ಪ್ರೇಮಿಯನ್ನು ಹುಡುಕಲು ಸಾಕಷ್ಟು ಹುಡುಕಾಟ ಹಾಗೂ ಪರಿಶೀಲನೆಯನ್ನು ನಡೆಸುವರು. ಸ್ವತಂತ್ರರಾಗಿರಲು ಬಯಸುವ ಇವರು ಎಲ್ಲಾ ವಿಷಯದಲ್ಲೂ ಸ್ಪಷ್ಟತೆ ಹಾಗೂ ಪ್ರಾಮಾಣಿಕತೆಯನ್ನು ಬಯಸುವರು. ತಮ್ಮ ಸಂಗಾತಿಯ ಅಗತ್ಯತೆಗಳನ್ನು ಅರಿತುಕೊಳ್ಳಲು ಪ್ರಯತ್ನಿಸುವರು. ಇವರು ಇತರರ ಸಲಹೆ ಹಾಗೂ ನಿರ್ಧಾರಗಳನ್ನು ಅನುಸರಿಸಲು ಬಯಸುವುದಿಲ್ಲ. ತಮ್ಮ ಹೃದಯ ಏನನ್ನು ಹೇಳುತ್ತದೆಯೋ ಹಾಗೆ ಇರಲು ಬಯಸುವರು,ತಮ್ಮ ಇಷ್ಟಗಳಿಗೆ ಅನುಸಾರವಾಗಿಯೇ ತಮ್ಮ ಪ್ರೀತಿಯ ಜೀವನ ನಡೆಸಲು ಮುಂದಾಗುವರು.

ಶನಿವಾರ ಜನಿಸಿದ ವ್ಯಕ್ತಿಗಳ ಕುಟುಂಬ ಜೀವನ ಕೆಲವೊಮ್ಮೆ ಗೊಂದಲ ಹಾಗೂ ವೈಮನಸ್ಸಿನಿಂದ ಕೂಡಿರುತ್ತದೆ . ಇವರು ಕುಟುಂಬದ ವಿಷಯದಲ್ಲಿ ಕ್ರಮಬದ್ಧತೆಯನ್ನು ಬಯಸುತ್ತಾರೆ. ಅದು ಇತರರಿಗೆ ತೊಂದರೆ ಉಂಟುಮಾಡ ಬಹುದು .ಇವರು ತಮ್ಮ ಕುಟುಂಬದ ರಕ್ಷಣೆಗೆ ಸಾಕಷ್ಟು ಶ್ರಮ ಪಡುತ್ತಾರೆ. ಇವರು ತಮ್ಮ ಸಂಗಾತಿ ಹಾಗೂ ಕುಟುಂಬದ ನಡುವೆ ಉತ್ತಮ ಬಾಂಧವ್ಯ ಹೊಂದಬೇಕು ಎಂದಾದರೆ ಮೊದಲು ನಿಮ್ಮ ಸ್ವಭಾವವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಸಂಗಾತಿಯನ್ನು ಅನುಮಾನಿಸುವುದು ಹಾಗೂ ಕೆಲವು ಆಜ್ಞೆಗಳನ್ನು ಪರಿಪಾಲಿಸುವಂತೆ ವತ್ತಾಯಿಸುವ ಕೆಲಸ ಮಾಡಬಾರದು ಆಗ ಕುಟುಂಬದ ಜೀವನವು ಸಂತೋಷದಿಂದ ಕೂಡಿರುತ್ತದೆ. ಅನುಮಾನ ಪಡುವ ಸ್ವಭಾವ ಎಂದೆಂದಿಗೂ ನಿಮ್ಮ ಶತ್ರುವಾಗಿಯೇ ಉಳಿಯುತ್ತದೆ ಎನ್ನುವುದನ್ನು ಮರೆಯಬಾರದು. ನಾಚಿಕೆ ಹಾಗೂ ಅಂಜುಬುರುಕು ಸ್ವಭಾವವನ್ನು ಬದಿಗಿಟ್ಟು, ನಿಮ್ಮವರನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಕುಟುಂಬ ಜೀವನವು ಸುಂದರವಾಗಿ ಇರುತ್ತದೆ.

ಈ ವಾರದಂದು ಜನಿಸಿದವರ ಅದೃಷ್ಟ ಸಂಖ್ಯೆ8 ಇವರು ಶನಿವಾರದಂದು ಶಿವನ ದೇವಾಲಯಕ್ಕೆ ಭೇಟಿ ನೀಡುವುದು, ಅಗತ್ಯ ವ್ಯಕ್ತಿಗಳಿಗೆ ಧಾನ ಧರ್ಮ ಮಾಡುವುದರಿಂದ ಅದ್ಭುತವಾದ ಫಲಿತಾಂಶಗಳನ್ನು ಪಡೆದುಕೊಳ್ಳುವರು.

ಜ್ಯೋತಿಷ್ಯದ ಪ್ರಕಾರ ಬುಧವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

ಜ್ಯೋತಿಷ್ಯದ ಪ್ರಕಾರ ಗುರುವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

ಜ್ಯೋತಿಷ್ಯದ ಪ್ರಕಾರ ಶುಕ್ರವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

 

- Advertisement -

Latest Posts

Don't Miss