Charanjeet Singh : ಪ್ರಧಾನ ಮಂತ್ರಿಯ ರಕ್ಷಣೆಗಾಗಿ ನನ್ನ ಪ್ರಾಣವನ್ನೇ ಕೊಡುತ್ತೇನೆ

ಚಂಡೀಗಢ, ಜನವರಿ 06: ಭದ್ರತಾ ಲೋಪ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸುಮಾರು 15-20 ನಿಮಿಷಗಳ ಕಾಲ ಪ್ರಧಾನಿ ಪಂಜಾಬ್‌ನ ಫ್ಲೈ ಓವರ್‌ನಲ್ಲಿ ಸಿಲುಕಿರುವ ಘಟನೆಯು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರವು ರಾಜಕೀಯ ಬಣ್ಣವನ್ನು ಪಡೆಯುತ್ತಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಪ್ರಧಾನ ಮಂತ್ರಿಯ ರಕ್ಷಣೆಗಾಗಿ ನಾನು ನನ್ನ ಪ್ರಾಣವನ್ನೇ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ ಪಂಜಾಬ್‌ ಸಿಎಂ, “ಪ್ರಧಾನಿಯನ್ನು ರಕ್ಷಿಸಲು ನಾನು ನನ್ನ ಪ್ರಾಣವನ್ನು ತ್ಯಜಿಸುತ್ತೇನೆ. ಆದರೆ ನಿಜವಾಗಿಯೂ ಹೇಳುವುದಾದರೆ ಯಾವುದೇ ಭದ್ರತಾ ಲೋಪವಾಗಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುರಕ್ಷಿತವಾಗಿದ್ದರು, ಅವರಿಗೆ ಯಾವುದೇ ಅಪಾಯವಾಗಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಈ ರ್‍ಯಾಲಿಯನ್ನು ಭದ್ರತೆ ವೈಫಲ್ಯ ಆರೋಪ ಮಾಡಿ ರದ್ದು ಮಾಡಿ ಪ್ರಧಾನಿ ವಾಪಾಸ್‌ ಹೋಗಿರುವುದಕ್ಕೆ ಚನ್ನಿ ಸೇರಿದಂತೆ ಕಾಂಗ್ರೆಸ್‌ ಮುಖಂಡರು ವ್ಯಂಗ್ಯವಾಡಿದ್ದಾರೆ. “70,000 ಕುರ್ಚಿಗಳನ್ನು ಜೋಡಿಸಲಾಗಿದೆ ಆದರೆ 700 ವ್ಯಕ್ತಿಗಳು ಮಾತ್ರ ಬಂದಿದ್ದರು. ಅದಕ್ಕೆ ಏನು ಮಾಡುವುದು,” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

About The Author