Sunday, September 8, 2024

Latest Posts

ಪಾರ್ಸಲ್ ವೆಜ್ ಆಹಾರದಲ್ಲಿ ಸಿಕ್ಕಿತು ಇಲಿ ತಲೆಬುರುಡೆ…!

- Advertisement -

Chennai News:

ಪಾರ್ಸಲ್  ಆಹಾರದಲ್ಲಿ ಇಲಿಯ ತಲೆಬುರುಡೆ ಪತ್ತೆಯಾದ ಹಿನ್ನೆಲೆ  ಸಸ್ಯಹಾರಿ ರೆಸ್ಟೋರೆಂಟ್ ಅನ್ನು ಸೀಲ್ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ ಎಂದು  ತಿಳಿದು ಬಂದಿದೆ. ತಮಿಳುನಾಡಿನ ತಿರುವಣ್ಣಾ ಮಲೈನ ಅರಣಿ ಪ್ರದೇಶದಲ್ಲಿರುವ ಸಸ್ಯಹಾರಿ ರೆಸ್ಟೋರೆಂಟ್‍ನಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಆಹಾರ ಸುರಕ್ಷತಾ ಇಲಾಖೆಯವರು ರೆಸ್ಟೋರೆಂಟ್‍ನ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು  ಹೇಳಲಾಗಿದೆ. ಆರ್. ಮುರುಳಿ ಎಂಬಾತ ಸಸ್ಯಹಾರಿ ರೆಸ್ಟೋರೆಂಟ್‍ನಿಂದ 100 ಕ್ಕೂ ಹೆಚ್ಚು ಜನರಿಗೆ ಆಹಾರವನ್ನು ತರಿಸಿದ್ದ. ಇದನ್ನು ಆ ರೆಸ್ಟೋರೆಂಟ್ ಅವರ ಮನೆಗೆ ತಲುಪಿಸಿತ್ತು. ಇದಾದ ನಂತರ ಅಲ್ಲಿದ್ದ ಅತಿಥಿಗಳಲ್ಲಿ ಒಬ್ಬಾತನಿಗೆ, ಬೀಟ್‍ರೂಟ್‍ನಿಂದ ಮಾಡಿದ್ದ ತಿಂಡಿಯಲ್ಲಿ ಇಲಿಯ ತಲೆ ಬುರುಡೆ ಸಿಕ್ಕಿದೆ. ಇದರಿಂದಾಗಿ ಆ ಅಡುಗೆಯನ್ನು ಹೋಟೆಲ್‍ಗೆ ತೆಗೆದುಕೊಂಡು ಬಂದು ದೂರು ನೀಡಿದ್ದಾರೆ. ಆದರೆ ಆಡಳಿತ ಮಂಡಳಿ ಈ ದೂರನ್ನು ಸ್ವೀಕರಿಸಲು ನಿರಾಕರಿಸಿದೆ.. ಈ ಹಿನ್ನೆಲೆಯಲ್ಲಿ ಮುರುಳಿ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾನೆ, ಎಂದು ತಿಳಿದು ಬಂದಿದೆ.

“ತಪ್ಪು ಮಾಡಿದರೆ ನಾವೇ ಹಗ್ಗ ಕಳುಹಿಸಿಕೊಡುತ್ತೇವೆ”: ಡಿ.ಕೆ.ಶಿ

ಬಳ್ಳಾರಿಯಲ್ಲಿ ವಿದ್ಯುತ್ ವ್ಯತ್ಯಯದಿಂದ ರೋಗಿಗಳ ಸಾವು: ಸದನ ಕಲಾಪದಲ್ಲಿ ವಿಚಾರ ಚರ್ಚೆ

ಮಂಡ್ಯ: ಸೌಡಿ ನೌಕರರು ಹಾಗೂ ವಾಹನ ಚಾಲಕರ ಪ್ರತಿಭಟನೆ

- Advertisement -

Latest Posts

Don't Miss