Political News: ಚೆನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿದಿದ್ದು, ಜೆಡಿಎಸ್- ಬಿಜೆಪಿ ಅಭ್ಯರ್ಥಿ ನಿಖಿಲ್ ಕುಮಾರ್ ಫಿಕ್ಸ್ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಘೋಷಣೆ ಮಾಡಿದ್ದಾರೆ.
ಈ ಮೊದಲು ಸಿ.ಪಿ.ಯೋಗೇಶ್ವರ್‌ಗೆ ಬಿಜೆಪಿಯಿಂದ ಟಿಕೇಟ್ ನೀಡಬೇಕು ಎನ್ನುವ ಒತ್ತಾಯವಿತ್ತು. ಆದರೆ ಕೇಂದ್ರ ಸಚಿವ ಕುಮಾರಸ್ವಾಮಿ, ಈ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಟಿಕೇಟ್ ನೀಡಬೇಕು ಎಂದು ಹೇಳಿದ್ದರು. ಹಾಗಾಗಿ ಯೋಗೇಶ್ವರ್ ಎಷ್ಟೇ ಪ್ರಯತ್ನ ಪಟ್ಟರೂ ಅವರಿಗೆ ಟಿಕೇಟ್ ಸಿಗುವುದಿಲ್ಲವೆಂದು ಖಾತ್ರಿಯಾದ ಬಳಿಕ, ಅವರು ಕಾಂಗ್ರೆಸ್ ಸೇರ್ಪಡೆಯಾದರು.
ಇದೀಗ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಆಯ್ಕೆಗೆ ಯಾವುದೇ ಅಡ್ಡಿ ಇಲ್ಲದ ಕಾರಣ, ನಿಖಿಲ್ ಕುಮಾರ್ ಮೈತ್ರಿ ಅಭ್ಯರ್ಥಿ ಅನ್ನೋದು ಫಿಕ್ಸ್ ಎಂದು ದೇವೇಗೌಡರು ಹೇಳಿದ್ದಾರೆ. ಅಲ್ಲದೇ, ಜೆಡಿಎಸ್, ಬಿಜೆಪಿ ಕಾರ್‌ಯಕರ್ತರಿಗೂ ನಿಖಿಲ್ ಚುನಾವಣೆಗೆ ನಿಲ್ಲಲು ಯಾವುದೇ ಅಡ್ಡಿಯಿಲ್ಲ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿಖಿಲ್ ಚೆನ್ನಪಟ್ಟಣದ ಮೈತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದಷ್ಟೇ ಬಾಕಿ. ನಾನನು ಕೂಡ ನಾಳೆ ಮೊಮ್ಮಗನ ನಾಮಿನೇಷನ್ ಸಲ್ಲಿಸುವಾಗ ಭಾಗಿಯಾಗಲಿದ್ದೇವೆ ಎಂದು ದೇವೇಗೌಡರು ಹೇಳಿದ್ದಾರೆ.