ಜೀ ಕನ್ನಡದಲ್ಲಿ ಪ್ರಸಾರಗೊಂಡ ಭರ್ಜರಿ ಬ್ಯಾಚುಲರ್ಸ್, ಸೀಸನ್ 2, ಪ್ರೇಕ್ಷಕರಿಗೆ ಒಂದು ಹೆಚ್ಚಿನ ಮನರಂಜನೆ ನೀಡಿದ ರಿಯಾಲಿಟಿ ಶೋ. ಭಾನುವಾರ ಜುಲೈ 27 ಈ ಶೋನ ಫಿನಾಲೆ ಸಂಜೆ 6ಗಂಟೆಯಿಂದ ಪ್ರಸಾರವಾಗಿತ್ತು. ಎಲ್ಲಾ ಸ್ಪರ್ಧಿಗಳು ವಿವಿಧ ರೀತಿಯಲ್ಲಿ ಮನರಂಜನೆ ನೀಡಿದರು. ಶೋನ ಕೊನೆಯಲ್ಲಿ ವಿನ್ನರ್ ಹೆಸರನ್ನು ಘೋಷಿಸಿದ್ದಾರೆ.
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಜಿ ಕನ್ನಡದಲ್ಲಿ ಪ್ರಸಾರವಾಗುತ್ತಿತ್ತು. ಪ್ರತಿ ಪುರುಷ ಸ್ಪರ್ಧಿಗೆ ಒಬ್ಬರು ಮಹಿಳಾ ಸ್ಪರ್ಧಿ ಮೆಂಟರ್ ಇರುತ್ತಿದ್ದರು. ಈ ಬಾರಿ ರವಿಚಂದ್ರನ್ ಹಾಗೂ ರಚಿತಾ ರಾಮ್ ಅವರು ಜಡ್ಜ್ ಸ್ಥಾನವನ್ನ ವಹಿಸಿಕೊಂಡಿದ್ದರು. ನಿರಂಜನ್ ದೇಶಪಾಂಡೆ ಶೋನ ನಡೆಸಿಕೊಟ್ಟಿದ್ದಾರೆ. ಎಲ್ಲಾ ಸ್ಪರ್ಧಿಗಳು ಸಾಕಷ್ಟು ಮನರಂಜನೆ ನೀಡಿದ್ದಾರೆ.
ವಿವಿಧ ಡ್ಯಾನ್ಸ್‌ಗಳ ಮೂಲಕ, ಎಮೋಶನಲ್ ಪರ್ಫಾರ್ಮೆನ್ಸ್, ಟಾಸ್ಕ್‌ನಲ್ಲಿ ತೋರಿಸಿದ ಕೌಶಲ್ಯಗಳು ಎಲ್ಲವನ್ನು ಎಂಟರ್‌ಟೈನ್‌ಮೆಂಟ್ ಮೂಲಕ ಪ್ರೇಕ್ಷಕರ ಮನ ಗೆದ್ದಿದೆ. ಇನ್ನು ಶೋನ ಫಿನಾಲೆಯ ಕೊನೆಯಲ್ಲಿ ಥ್ರಿಲ್ಲಿಂಗ್ ಘೋಷಣೆಯೊಂದಿಗೆ ಸುನೀಲ್ ಮತ್ತು ಅಮೃತಾ ಜೋಡಿ ಈ ಬಾರಿಯ ವಿನ್ನರ್ ಆಗಿ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಟ್ರೋಫಿ ಎತ್ತಿದ್ದಾರೆ. ಕಪ್ ಜೊತೆಗೆ 15 ಲಕ್ಷ ರೂಪಾಯಿ ನಗದು ಬಹುಮಾನ ಕೂಡ ಸಿಕ್ಕಿದೆ.
ಪ್ರಥಮ ರನ್ನರ್ ಅಪ್ ಆಗಿ ರಕ್ಷಕ್ ಮತ್ತು ರಮೋಲಾ ಜೋಡಿ ಹೊರಹೊಮ್ಮಿದೆ. ಇವರಿಗೆ ಸಿಕ್ಕದು 10 ಲಕ್ಷ ರೂಪಾಯಿ. ಅವರ ಕನೆಕ್ಷನ್, ಟಾಸ್ಕ್ ಗಳಲ್ಲಿನ ದಕ್ಷತೆ ಎಲ್ಲವನ್ನೂ ಜಡ್ಜ್‌ಗಳು ಹೊಗಳಿದ್ದಾರೆ.
ದ್ವಿತೀಯ ರನ್ನರ್ ಅಪ್ ಆಗಿ ಆಯ್ಕೆಯಾದ ಡೋನ್ ಪ್ರತಾಪ್ ಮತ್ತು ಗಗನಾ ಜೋಡಿಗೆ 3 ಲಕ್ಷ ರೂ ಬಹುಮಾನ ಸಿಕ್ಕಿದೆ. ಇನ್ನೊಂದು ಗಮನಾರ್ಹ ವಿಷಯವೇನೆಂದರೆ ಪ್ರತಾಪ್ ತಮ್ಮ ಪಾಲಾದ ಹಣದ ಅರ್ಧವನ್ನು ಗಗನಾಗೆ ಕೊಡುವುದಾಗಿ ಘೋಷಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ವರದಿ: ಲಾವಣ್ಯ ಅನಿಗೋಳ




