- Advertisement -
ನೇಪಾಳದ ಚುನಾವಣಾ ಆಯೋಗವು ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರನ್ನು ಅಂತರಾಷ್ಟ್ರೀಯ ವೀಕ್ಷಕರನ್ನಾಗಿ ಆಹ್ವಾನ ನೀಡಿದೆ. ಮುಂಬರುವ ಚುನಾವಣೆಗಳಿಗೆ ರಾಜೀವ್ ಕುಮಾರ್ ಅವರನ್ನು ಆಹ್ವಾನಿಸಲಾಗಿದೆ. ನವೆಂಬರ್ 18 ರಿಂದ 22ರವೆರೆಗೆ ರಾಜೀವ್ ಕುಮಾರ್ ಅವರನ್ನು ನೇಪಾಳದಲ್ಲಿ ಅತಿಥಿಗಳಾಗಿ ಭಾರತದ ಚುನಾವಣಾ ಆಯೋಗದ ಅಧಿಕಾರಿಗಳ ನಿಯೋಗವನ್ನು ಮುನ್ನಡೆಸಲಿದ್ದಾರೆ ಎಂದು ಚುನಾವಣಾ ಸಮಿತಿ ಗುರುವಾರ ತಿಳಿಸಿದೆ. ಅವರು ಹತ್ತಿರದ ಪ್ರದೇಶಗಳಿಗೆ ವೀಕ್ಷಕರಾಗಿ ಭೇಟಿ ನೀಡಲಿದ್ದಾರೆ ಎಂದು ಸಮಿತಿ ಹೇಳಿದೆ. ಫೆಡರಲ್ ಸಂಸತ್ತಿನ 275 ಸದಸ್ಯರನ್ನು ಮತ್ತು ಏಳು ಪ್ರಾಂತೀಯ ಅಸೆಂಬ್ಲಿಗಳ 550 ಸ್ಥಾನಗಳನ್ನು ಆಯ್ಕೆ ಮಾಡಲು ನೇಪಾಳ ಚುನಾವಣೆ ನವೆಂಬರ್ 20 ರಂದು ನಿಗಧಿಯಾಗಿದೆ.
- Advertisement -

