Thursday, November 13, 2025

Latest Posts

ಎಲ್ಲರೂ ಕಡ್ಡಾಯವಾಗಿ ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಳ್ಳಿ: ಸಚಿವ ಡಾ.ಸುಧಾಕರ್

- Advertisement -

chikkaballapura:

ಕಡ್ಡಾಯವಾಗಿ ಎಲ್ಲರೂ ಬೂಸ್ಟರ್ ಡೋಸ್ ಪಡೆದುಕೊಳ್ಳಿ ಎಂಬುವುದಾಗಿ ಸಚಿವ ಡಾ.ಸುಧಾಕರ್ [Dr.sudhakar]ಇನತೆಗೆ ಕರೆಕೊಟ್ಟಿದ್ದಾರೆ. ರಾಜ್ಯದಲ್ಲಿ ಶೇ.17ರಷ್ಟು ಜನ ಬೂಸ್ಟರ್ ಡೋಸ್ ಪಡೆದಿದ್ದಾರೆ. ಕೆಲವು ವಾರಗಳಲ್ಲಿ ಸಮರೋಪಾದಿಯಲ್ಲಿ ಲಸಿಕೆ ನೀಡುತ್ತೇವೆ. ಎಲ್ಲರಿಗೂ ಉಚಿತವಾಗಿ ಬೂಸ್ಟರ್ ಡೋಸ್ ವ್ಯಾಕ್ಸಿನ್ ನೀಡುತ್ತೇವೆ. ಎಂದು ತಿಳಿಸಿದ್ದಾರೆ ಜೊತೆಗೆ ಮಾಸ್ಕ್  ಕಡ್ಡಾಯದ  ಮುನ್ಸೂಚನೆಯನ್ನೂ ಸಚಿವರು ನೀಡಿದ್ದಾರೆ. ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಮಾಸ್ಕ್ ಕಡ್ಡಾಯದ ಬಗ್ಗೆ ಸಭೆಯಲ್ಲಿ ಸಿಎಂ ಜೊತೆ ಚರ್ಚೆ ಮಾಡಲಾಗುವುದು. ಗಣೇಶ ಹಬ್ಬ ಹತ್ತಿರವಾಗುತ್ತಿದ್ದ ಕಾರಣ ಕೊವಿಡ್​ ಹೆಚ್ಚಳವಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಚಿವ ಸುಧಾಕರ್ ನೇತೃತ್ವದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ 2,500 ಅಡಿ ಉದ್ದದ ರಾಷ್ಟ್ರಧ್ವಜ ಜೊತೆ ಸಚಿವರ ವಾಕಥಾನ್ ನಡೆಯಿತು. ಚಿಕ್ಕಬಳ್ಳಾಪುರದ ಅಭಿಯಾನದಲ್ಲಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ನಗರದ ರಸ್ತೆಯುದ್ದಕ್ಕೂ ಮುಗಿಲೆತ್ತರದತ್ತ ತ್ರಿವರ್ಣ ಧ್ವಜಗಳು ಹಾರಾಟ ಜೋರಾಗಿತ್ತು. ವಿದ್ಯಾರ್ಥಿಗಳೊಂದಿಗೆ ಬೆಳ್ಳಂಬೆಳಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೆಜ್ಜೆ ಹಾಕಿದರು. ಈ ಸಂದರ್ಭ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

75 ವರ್ಷಗಳ ಅಮೃತ ಮಹೋತ್ಸವಕ್ಕೆ ಹಬ್ಬದ ವಾತಾವರಣ:

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೆಸರಿನಲ್ಲಿ ಕಾಂಗ್ರೇಸ್​ನಿಂದ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಡಾ.ಕೆ.ಸುಧಾಕರ್, ಸ್ವಾತಂತ್ರ್ಯ ಹಾಗೂ ಧ್ವಜ ಮತ್ತು ಭಾರತಾಂಬೆ ವಿಚಾರದಲ್ಲಿ ಗೌರವ ಕೊಡುವುದು ನಮ್ಮೆಲ್ಲರ ಕರ್ತವ್ಯ. ಚಳುವಳಿಯ ರೀತಿಯಲ್ಲಿ ದೇಶದ ಜನರು ಸಂಭ್ರಮಿಸಬೇಕು. ಸ್ವಾತಂತ್ರ್ಯದ ದಿನಗಳನ್ನು ಮೆಲುಕು ಹಾಕಬೇಕು. 75 ವರ್ಷಗಳ ನಂತರ ಹಬ್ಬದ ವಾತವರಣ ಮತ್ತೆ ಬಂದಿದೆ ಎಚ್ಚರಿಕೆಯಿಂದ ಸಂಭ್ರಮಿಸಬೇಕು ಎಂದು ಹೇಳಿದರು.

- Advertisement -

Latest Posts

Don't Miss