ಕುರುಕ್ಷೇತ್ರ ನಾಟಕದಿಂದ ಮನಗೆದ್ದ ಪುಟಾಣಿಗಳು

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪೌರಾಣಿಕ ನಾಟಕ ಅಭಿನಯದ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಪೌರಾಣಿಕ ನಾಟಕವನ್ನು ಕಲಿತು ಗ್ರಾಮದ ವೇದಿಕೆಯಲ್ಲಿ ಅದ್ದೂರಿಯಾಗಿ ಪ್ರದರ್ಶಿಸಿದರು. ಕುರುಕ್ಷೇತ್ರ ಆಧಾರಿತ ಪೌರಾಣಿಕ ನಾಟಕವನ್ನು ಪುಟಾಣಿ ಮಕ್ಕಳು ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು.

ಮಕ್ಕಳ ಅದ್ಭುತ ಅಭಿನಯವನ್ನು ಕಂಡ ಪೋಷಕರು ಹಾಗೂ ಊರಿನ ಜನರು ಮೂಕ ವಿಸ್ಮಿತರಾಗಿ ಶಿಳ್ಳೆ, ಚಪ್ಪಾಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷ ಡ್ರಾಮಾ ಸೀನರಿ ಹಾಗೂ ವೇಷಭೂಷಣದೊಂದಿಗೆ ಮಕ್ಕಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಪೌರಾಣಿಕ ನಾಟಕದಲ್ಲಿ ತಮ್ಮ ಮಕ್ಕಳ ಮನೋಜ್ಞ ಅಭಿನಯವನ್ನು ಕಂಡ ಪೋಷಕರು ಸಂಭ್ರಮಗೊಂಡರು. ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳ ಕೈಯಲ್ಲಿ ಪೌರಾಣಿಕ ನಾಟಕ ಮಾಡಿಸಿ ವೇದಿಕೆಗೆ ತಂದುಕೊಟ್ಟಿದ್ದು ಪೋಷಕರಿಂದಲೇ ಚಪ್ಪಾಳೆ ಗಿಟ್ಟಿಸಿ ಬೆನ್ನು ತಟ್ಟಿಸಿಕೊಂಡರು.

ಸರ್ಕಾರಿ ಶಾಲೆಯ ಮಕ್ಕಳ ಈ ಪೌರಾಣಿಕ ನಾಟಕ ಅಭಿನಯಕ್ಕೆ ಊರಿನ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು.

About The Author