ಬೆಂಗಳೂರು: ಯಾವಾಗ ಬೇಕಾದ್ರು ಮಕ್ಕಳನ್ನು ಶಾಲೆಗೆ ಕಳಿಸಬಹುದು ಅಂತ ಕೆರ್ ಲೇಸ್ ಆಗಿದ್ದೀರಾ.. ಆಗಿದ್ರೆ ತಡ ಮಾಡದೆ ಶಾಲೆಗೆ ಸೇರಿಸಿ.. ಅಲ್ಲದೇ ಹೋದ್ರೆ ನಿಮ್ಮ ಮಕ್ಕಳ ಓದಿ ಭವಿಷ್ಯಕ್ಕೆ ಕಲ್ಲು ಬಿದ್ದಂತೆ ಆಗುತ್ತೆ.. ಎಲ್ ಕೆಜಿ, ಯುಕೆಜಿ ಮತ್ತು 1 ನೇ ತರಗತಿಗೆ ಮಕ್ಕಳ ಪ್ರವೇಶಕ್ಕೆ ಎದುರಾಗುತ್ತಿದ್ದ ಗರಿಷ್ಠ ವಯೋಮಿತಿ ಗೊಂದಲಗಳಿಗೆ ಶಿಕ್ಷಣ ಇಲಾಖೆ ತೆರೆ ಎಳೆದಿದೆ. ಇನ್ಮುಂದೆ 8 ವರ್ಷ ಮೀರಿದರೆ 1 ನೇ ತರಗತಿಗೆ ಪ್ರವೇಶ ನಿರ್ಬಂಧಿಸಲಾಗಿದೆ.. ವಯಸ್ಸಿಗೆ ಅನುಗುಣವಾಗಿ ಬೇರೆ ತರಗತಿಗೆ ಪ್ರವೇಶ ನೀಡಲು ಇಲಾಖೆ ನಿರ್ಧರಿಸಿದೆ.
ಈ ಶೈಕ್ಷಣಿಕ ವರ್ಷ ಈಗಾಗಲೇ ಮುಕ್ತಾಯವಾಗಿದ್ದರೂ 2023-24 ರಿಂದ 2025-26ನೇ ವರ್ಷದವರೆಗೆ ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ನಿಗದಿ ಮಾಡಿ ಗೊಂದಲಕ್ಕೆ ಈ ಶಿಕ್ಷಣ ಇಲಾಖೆ ಮುಕ್ತಿ ಕೊಟ್ಟಿದೆ..
ಆಗಿದ್ರೆ ಎಷ್ಟು ವಯಸಾಗಿದ್ರೆ ಶಾಲೆಗೆ ಸೇರಿಸಬೇಕು ಅಂತ ಡಿಟೇಲ್ಸ್ ಎಲ್ಲಿದೆ ನೋಡಿ?
ಸರ್ಕಾರದ ಆದೇಶದಲ್ಲಿ ಶಿಕ್ಷಣ ಹಕ್ಕು ಕಾಯ್ದೆ-2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರಂತೆ ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗಧಿಪಡಿಸಲಾಗಿರುತ್ತದೆ.