Health Tips: ನನ್ನ ಮಗುವಿನ ತೂಕ ದಿನದಿಂದ ದಿನಕ್ಕೆ ಅತೀಯಾಗುತ್ತಿದೆ. ಮಗು ತುಂಬಾ ಆಲಸ್ಯದಿಂದಿರುತ್ತಾನೆ. ಹೊರಗೆ ಹೋದಾಗಲೂ, ಆ್ಯಕ್ಟೀವ್ ಇರುವುದಿಲ್ಲ. ಸರಿಯಾಗಿ ನಿದ್ರಿಸುವುದಿಲ್ಲ. ಹೀಗೆ ಕೆಲವು ಅಮ್ಮಂದಿರು ಕಂಪ್ಲೇಂಟ್ ಮಾಡುತ್ತಾರೆ. ಆದರೆ ಈ ಎಲ್ಲ ಸಮಸ್ಯೆಗಳಿಗೆ ಕಾರಣವೂ ಅವರು ಬಳಸುವ ವಸ್ತುವೇ ಆಗಿರುತ್ತದೆ. ಹಾಗಾಗಿ ನಿಮ್ಮ ಮಗುವಿನ ಆರೋಗ್ಯ ಹಾಳು ಮಾಡುವ 5 ವಸ್ತುಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
ಕೆಚಪ್, ಸಿರಿಯಲ್ಸ್, ಚಾಕೋಲೇಟ್ಸ್- ಕುಕೀಸ್- ಬಿಸ್ಕೇಟ್ಸ್- ಇತರ ಪ್ಯಾಕ್ ಮಾಡಿದ ತಿಂಡಿಗಳು, ಇನ್‌ಸ್ಟಂಟ್ ನೂಡಲ್ಸ್, ಇನ್‌ಸ್ಟಂಟ್ ಸೂಪ್. ಇವೆಲ್ಲವೂ ನಿಮ್ಮ ಮಗುವಿನ ಆರೋಗ್ಯವನ್ನನು ಹಾಳು ಮಾಡುತ್ತದೆ. ಮತ್ತು ನಿಮ್ಮ ಮಗುವಿನ ಆರೋಗ್ಯಕರ ಭವಿಷ್ಯವನ್ನು ಕಸಿದುಕೊಳ್ಳುತ್ತದೆ.
ಸೂಪ್ ಮತ್ತು ಸಿರಿಯಲ್ಸ್ ಹೆಲ್ದಿ ಎಂದುಕೊಂಡೇ ನೀವು ಮಾರುಕಟ್ಟೆಯಿಂದ ಅದನ್ನು ಖರೀದಿಸಿರುತ್ತೀರಿ. ಆದರೆ, ಆ ಸೂಪ್ ಆರೋಗ್ಯಕರವಾಗಿರುವುದಿಲ್ಲ. ಏಕೆಂದರೆ ಇವೆರಡರಲ್ಲೂ ಪ್ರಿಸರ್ವೇಟಿವ್ಸ್ ಬಳಸಿರುತ್ತಾರೆ. ಹಾಗಾಗಿ ಅವು ಸುಮಾರು ದಿನದವರೆಗೂ ಹಾಳಾಗುವುದಿಲ್ಲ. ನಿಮಗೆ ಸೂಪ್ ತಿನ್ನಬೇಕು ಎನ್ನಿಸಿದ್ದಲ್ಲಿ, ಮಾರುಕಟ್ಟೆಯಿಂದ ಫ್ರೆಶ್ ಆಗಿರುವ ತರಕಾರಿ, ಸೊಪ್ಪು ತಂದು, ಚೆನ್ನಾಗಿ ಕ್ಲೀನ್ ಮಾಡಿ, ಅದರಿಂದ ಸೂಪ್ ಮಾಡಿ ಸೇವಿಸಿ. ಇದು ರುಚಿಯಾಗಿರುವುದರ ಜೊತೆಗೆ, ಆರೋಗ್ಯಕ್ಕೂ ಅತ್ಯುತ್ತಮವಾಗಿರುತ್ತದೆ.
ಇನ್ನು ಬೆಳಗ್ಗಿನ ತಿಂಡಿಯಲ್ಲಿ ಕೆಲವರು ಶೋಕಿಗಾಗಿ ಸಿರಿಯಲ್ಸ್ ತಿನ್ನಿಸುತ್ತಾರೆ. ಆದರೆ ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಬದಲು ನೀವು ಮಗುವಿಗೆ ಮನೆಯಲ್ಲೇ ಪ್ರತಿದಿನ ತಯಾರಿಸಬಹುದಾದ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ, ದೋಸೆಯಂಥ ಸಾಧಾರಣ ತಿಂಡಿಯನ್ನೇ ಕೊಡಿ. ಇದು ಮಾರುಕಟ್ಟೆಯಲ್ಲಿ ಸಿಗುವ ಸಿರಿಯಲ್ಸ್ ಗಿಂತ ಎಷ್ಟೋ ಪಟ್ಟು ಉತ್ತಮ.
ಇನ್ನು ಕೆಚಪ್ ಹೇಗೆಲ್ಲಾ ತಯಾರಾಗುತ್ತದೆ ಎಂದು ನೀವೇ ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೀರಿ. ನಿಮ್ಮ ಮಗುವಿಗೆ ಕೆಚಪ್ ಅಂದ್ರೆ ಅಷ್ಟು ಇಷ್ಟಾ ಅಂತಾದ್ರೆ, ನೀವೇ ಟೊಮೆಟೋ ತಂದು, ಅಪರೂಪಕ್ಕೆ ಮನೆಯಲ್ಲೇ ಕೆಚಪ್ ತಯಾರಿಸಿ ಕೊಡಿ.
ಚಾಕೋಲೇಟ್ಸ್- ಕುಕೀಸ್- ಬಿಸ್ಕೇಟ್ಸ್- ಇತರ ಪ್ಯಾಕ್ ಮಾಡಿದ ತಿಂಡಿಗಳು, ಇನ್‌ಸ್ಟಂಟ್ ನೂಡಲ್ಸ್ ಇವೆಲ್ಲವೂ ರೋಗಗಳ ಭಂಡಾರ ತುಂಬಿರುವ ಆಹಾರಗಳು. ನೂಡಲ್ಸ್ ಬದಲು ಮನೆಯಲ್ಲೇ ಶ್ಯಾವಿಗೆ ತಯಾರಿಸಿ, ಅದಕ್ಕೊಂದು ಮಾಡರ್ನ್ ಟೇಸ್ಟ್ ಕೊಡಲು ಪ್ರಯತ್ನಿಸಿ. ಇನ್ನು ಚಾಕೋಲೆಟ್ಸ್, ಕುಕೀಸ್ ಬದಲು, ಮನೆಯಲ್ಲೇ ನಿಪ್ಪಟ್ಟು, ಚಕ್ಕುಲಿ ತಯಾರಿಸಿ ಕೊಡಿ. ಏಕೆಂದರೆ ಇಲ್ಲಿ ನಿಷೇಧವೆಂದಿರುವ ಎಲ್ಲ ಆಹಾರಗಳು ಮಗುವಿನ ಮೆದುಳಿನ ಬೆಳವಣಿಗೆ, ದೇಹದ ಬೆಳವಣಿಗೆ ಎರಡಕ್ಕೂ ಹಾನಿಕಾರಕವಾಗಿದೆ.