Monday, December 23, 2024

Latest Posts

ಚೀನಾದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು : ಬೆಂಗಳೂರಿನಲ್ಲಿ ಬೂಸ್ಟರ್ ಡೋಸ್‌ಗಳ ಕೊರತೆ

- Advertisement -

ಬೆಂಗಳೂರು: ಚೀನಾದಲ್ಲಿ ಕೊರೊನಾ ವೈರಸ್‌ನಿಂದಾಗಿ, ಪರಿಸ್ಥಿತಿ ತುಂಬಾ ಹದಗೆಡುತ್ತಿದ್ದು, ವಿಶ್ವದೆಲ್ಲೆಡೆ ಮತ್ತೆ ಕೊರೊನಾ ಭೀತಿ ಹೆಚ್ಚಾಗಿದೆ. ಕೊರೊನ ಹೊಸ ತಳಿ ವೇಗವಾಗಿ ಹರಡುತ್ತಿದ್ದು ಲಸಿಕೆ, ಮಾಸ್ಕ್‌, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದ್ದು, ದೇಶದೆಲ್ಲೆಡೆ ಕೊರೊನಾ ಹರಡುವ ಮತ್ತು ತಡೆಗಟ್ಟುವ ಕ್ರಮಗಳನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಆದರೆ ಹಲವೆಡೆ ಕೋವಿಡ್ ಬೂಸ್ಟರ್ ಡೋಸ್‌ಗಳ ಕೊರತೆ ಎದುರಾಗಿದೆ. ಈಗಾಗಲೇ ಕೊರೋನಾ ಮೂರು ಅಲೆಗಳನ್ನು ದಾಟಿರುವ ಭಾರತಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಸದ್ಯ ಕೊರೋನಾದಿಂದ ಎಚ್ಚರಿಕೆ ಇರುವಂತೆ ಮತ್ತು ಕೊರೋನಾ ನಿಯಮಗಳನ್ನು ಪಾಲಿಸುವಂತೆ ಕೇಂದ್ರ ಸೂಚಿಸಿದೆ.

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಬಂಧನ

ಭಾರತದಲ್ಲಿ ಎರಡು ಡೋಸ್ ಕೊರೋನಾ ಲಸಿಕೆ ಪಡೆದವರಿದ್ದಾರೆ ಆದರೆ ಬೂಸ್ಟರ್​ ಡೋಸ್ ಪಡೆದುಕೊಂಡವರ ಸಂಖ್ಯೆ ಬಹಳ ಕಡಿಮೆ. ಇನ್ನು ಚೀನಾ ಮತ್ತು ಇತರ ದೇಶಗಳಲ್ಲಿ ಮತ್ತೆ ಕೊರೊನಾ ಹೆಚ್ಚಾಗಿದ್ದು, ಬೂಸ್ಟರ್​ ಡೋಸ್​​ ನೀಡಲು ಭಾರತೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೀಗಾಗಿ ಹಲವೆಡೆ ಬೂಸ್ಟರ್‌ ಡೋಸ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಲಸಿಕೆಯನ್ನು ಪಡೆಯಲು ಬೆಂಗಳೂರಿನಲ್ಲಿ ಜನರು ಬೂಸ್ಟರ್ ಡೋಸೇಜ್‌ಗಳ ಕೊರತೆ ಎದುರಿಸುತ್ತಿದ್ದಾರೆ.

ಕೋವಿಡ್ ಭೀತಿಯಿಂದ ಜನರು ಚೀನಾ ತೊರೆಯುತ್ತಿದ್ದಾರೆ, ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ : ಶಾಂಘೈ ಆಸ್ಪತ್ರೆ ವ್ಯೆದ್ಯ ಡಾ. ಸಂಜೀವ್ ಚೌಬೆ

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ನಗರದಲ್ಲಿ ಹೆಚ್ಚುವರಿ ಕೋವಾಕ್ಸಿನ್ ಸ್ಟಾಕ್ ಇದ್ದರೂ, ಕೋವಿಶೀಲ್ಡ್ ಕೊರತೆಯಿದೆ ಎಂದಿದ್ದಾರೆ. ನಮ್ಮಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ನಮ್ಮ ಜನಸಂಖ್ಯೆಯ 90 ಪ್ರತಿಶತದಷ್ಟು ಜನರು ಕೋವಿಶೀಲ್ಡ್‌ನಿಂದ ಲಸಿಕೆಯನ್ನು ಹೊಂದಿದ್ದಾರೆ ಮತ್ತು ಆದ್ದರಿಂದ ಬೇಡಿಕೆ ಹೆಚ್ಚಾಗಿದೆ. ನಮ್ಮಲ್ಲಿ ಸಾಕಷ್ಟು ಕೋವಾಕ್ಸಿನ್ ಡೋಸ್‌ಗಳಿವೆ. ನಾವು ನಮ್ಮ ಅಗತ್ಯವನ್ನು ನಿರ್ಧರಿಸಿದ ನಂತರ ಅವುಗಳನ್ನು ಮರಳಿ ಕಳುಹಿಸಲು ಯೋಜಿಸಿದ್ದೇವೆ ಎಂದು ಗಿರಿನಾಥ್ ಅವರು ಹೇಳಿದರು. ಬಿಬಿಎಂಪಿ ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ ಅವರು ಕೋವಿಶೀಲ್ಡ್ ಬೂಸ್ಟರ್ ಶಾಟ್‌ಗಳ ಕನಿಷ್ಠ ಐದು ಲಕ್ಷ ಡೋಸ್‌ಗಳನ್ನು ತಕ್ಷಣ ಪೂರೈಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ‘ಬೆಂಗಳೂರಿನಲ್ಲಿ ಬೂಸ್ಟರ್ ಡೋಸ್ ಕವರೇಜ್ 20 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ಕಳೆದ ಎರಡು ಮೂರು ದಿನಗಳಿಂದ, ವಿಚಾರಣೆಗಳ ಸಂಖ್ಯೆ ಮತ್ತು ಬೂಸ್ಟರ್ ಶಾಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕನಿಷ್ಠ ಐದು ಲಕ್ಷ ಡೋಸ್ ಬೇಕು’ ಎಂದು ಮನವಿ ಮಾಡಿದ್ದೇವೆ ಎಂದ ತಿಳಿಸಿದರು.

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಬಂಧನ

ಅತ್ಯಂತ ಶಕ್ತಿಶಾಲಿ ಮಂತ್ರ ಪಠಿಸಿದರೆ ಎಲ್ಲಾ ಕಷ್ಟಗಳು ಕಳೆಯುತ್ತದೆ..!

- Advertisement -

Latest Posts

Don't Miss