ಬೀಜಿಂಗ್: ಚೀನಾದ ಹನನ್ ಪ್ರಾಂತ್ಯದ ಅನ್ಯಾಂಗ್ ನಗರದ ವಾಣಿಜ್ಯ ವ್ಯವಹಾರ ಸಂಸ್ಥೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿದ್ದು, 38 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ನಂದಿಸಲು ಅಗ್ನಿ ಶಾಮಕ ದಳ ಸ್ಥಳಕ್ಕೆ ದೌಡಾಯಿಸಿ 4 ಗಂಟೆ ಕಾಲ ಬೆಂಕಿ ನಂದಿಸಿದರು ರಾತ್ರಿ 11 ಗಂಟೆಯಲ್ಲಿ ಬೆಂಕಿ ನಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ದುರಂತದಲ್ಲಿ 38 ಜನರು ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಯಿತು. ರಕ್ಷಣಾ ಕಾರ್ಯಕ್ಕಾಗಿ 63 ವಾಹನಗಳನ್ನು ಮತ್ತು 240 ಸಿಬ್ಬಂದಿಯನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿತ್ತೆಂದು ವರದಿ ತಿಳಿಸಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು ಅಗ್ನಿ ದುರಂತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಪ್ರತಿ 11 ನಿಮಿಷಕ್ಕೊಮ್ಮೆ ಜಗತ್ತಿನಲ್ಲಿ ಮಹಿಳೆ ಮೇಲೆ ದೌರ್ಜನ್ಯ : ಸಂಗಾತಿ, ಕುಟುಂಬದ ಸದಸ್ಯರಿಂದಲೇ ಮಹಿಳೆ ಹತ್ಯೆ
ಅಸ್ಸಾಂ-ಮೇಘಾಲಯ ಗಡಿಯಲ್ಲಿ ಗುಂಡಿನ ದಾಳಿ : 6 ಜನರ ಸಾವು, ಇಂಟರ್ನೆಟ್ ಸ್ಥಗಿತ