Thursday, November 27, 2025

Latest Posts

China News: ರಜೆ ತೆಗೆದುಕೊಳ್ಳದೇ 100ಕ್ಕೂ ಹೆಚ್ಚು ದಿನ ಕೆಲಸ ಮಾಡಿದ ವ್ಯಕ್ತಿ ಸಾವು

- Advertisement -

International News: ನಾವೇನೇ ಕೆಲಸ ಮಾಡಿದ್ರೂ ವಾರಕ್ಕೊಮ್ಮೆಯಾದರೂ ಆ ಕೆಲಸಕ್ಕೆ ರಜೆ ಹಾಕ್ತೀವಿ. ಇದರಿಂದ ಮತ್ತೆ ಮರುದಿನ ಕೆಲಸ ಮಾಡಲು ಚೈತನ್ಯ ಬರುತ್ತದೆ. ಆದರೆ ಇಲ್ಲೋರ್ವ ವ್ಯಕ್ತಿ ಬ್ರೇಕ್ ಇಲ್ಲದೇ 104 ದಿನ ಕೆಲಸ ಮಾಡಿ, ಸಾವನ್ನಪ್ಪಿದ್ದಾನೆ.

ಚೀನಾದಲ್ಲಿ ಈ ಘಟನೆ ನಡೆದಿದ್ದು, ಕಂಟಿನ್ಯೂ ಆಗಿ 104 ದಿನ, ದಿನಕ್ಕೆ 8 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿದ್ದಕ್ಕೆ, ಆ ವ್ಯಕ್ತಿಯ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಅಂಗಾಂಗ ವೈಫಲ್ಯದಿಂದ ಬಳಲಿ, ಆ ವ್ಯಕ್ತಿ ಮೃತಪಟ್ಟಿದ್ದಾನೆ. ಆಫೀಸಿನವರು ಅವನನ್ನು ಅಗತ್ಯಕ್ಕಿಂತ ಹೆಚ್ಚು, ಅಮಾನವೀಯ ರೀತಿಯಲ್ಲಿ ಬಳಸಿಕೊಂಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಒಂದು ದಿನ ಒಂದು ಚೂರು ಬ್ರೇಕ್ ತೆಗೆದುಕೊಳ್ಳದೇ, ಸತತ 48ಗಂಟೆಗಳ ಕಾಲ ಅಂದ್ರೆ ಎರಡು ದಿನ ಕೆಲಸ ಮಾಡಿ, ಫ್ಯಾಕ್ಟರಿಯಲ್ಲಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೇ, ಅವರು ಸಾವನ್ನಪ್ಪಿದ್ದಾರೆ.

ವರ ಕುಟುಂಬಸ್ಥರು, ಕಂಪನಿಯವರ ಬಳಿ ಪರಿಹಾರ ಕೇಳಿದರೂ ಕೂಡ, ಕಂಪನಿ ಒಂದು ರೂಪಾಯಿ ಕೊಡುವುದಿಲ್ಲವೆಂದು ವಾದ ಮಾಡಿದೆ. ಈ ಕಾರಣಕ್ಕೆ ಮೃತವ್ಯಕ್ತಿಯ ಕುಟುಂಬಸ್ಥರು, ನ್ಯಾಯಾಲಯದ ಮೊರೆ ಹೋಗಿದ್ದಾರೆ. ಬಳಿಕ, ಕಂಪನಿ ವಿರುದ್ಧ ಆದೇಶ ಬಂದಿದ್ದು, ಮೃತನ ಕುಟುಂಬಕ್ಕೆ ನಾಲ್ಕು ಲಕ್ಷ ಪರಿಹಾರ ನೀಡಬೇಕು ಎಂದು ಹೇಳಲಾಗಿದೆ.

- Advertisement -

Latest Posts

Don't Miss