Sunday, September 8, 2024

Latest Posts

ಚೀನಾದ 2 ಸುಳ್ಳುಗಳು ಜಗತ್ತನ್ನ ಸ್ಮಶಾನ ಮಾಡಿ ಬಿಡ್ತು.!

- Advertisement -

ಕರ್ನಾಟಕ ಟಿವಿ : ಕೊರೊನಾ ಅಲಿಯಾಸ್ ಕೊವಿಡ್ 19, ಇಡೀ ಜಗತ್ತನ್ನ ಸ್ಮಶಾನ ಮಾಡ್ತಿದೆ. ಕೊರೊನಾ ಗುಣವಾಗುವಂತಹದ್ದೆ, ಆದ್ರೆ, ಕೊರೊನಾ ಬಂದವರು ಆತಂಕದಲ್ಲಿ ನಾವು ಯಾವಾಗ ಸಾಯ್ತಿವೋ ಅಂತ ಭಯದಲ್ಲೇ ಉಸಿರು ನಿಲ್ಲಿಸ್ತಿದ್ದಾರೆ.. ಮತ್ತೆ ಕೆಲವು ಕೊರೊನಾ ಸೋಂಕಿತರು ಇದ್ಯಾವ ಸೀಮೆ ಕಾಯಿಲೆ ಅಂತ ಧೈರ್ಯವಾಗಿ ಚಿಕಿತ್ಸೆಗೆ ಸ್ಪಂದಿಸಿ ಸಾವು ಗೆದ್ದು ಮನೆಗೆ ವಾಪಸ್ಸಾಗ್ತಿದ್ದಾರೆ..  ಮತ್ತೊಂದೆಡೆ ಕೊರೊನಾ ಸೋಂಕಿತರ ಮನೆಯಲ್ಲಿ ನಮಗೆ ಯಾವಾಗ ಕೊರೊನಾ ಪಾಸಿಟಿನ್ ಬಂದು ಬಿಡುತ್ತೋ ಅಂತ ಭಯದಲ್ಲೇ ಒದ್ದಾಡ್ತಿದ್ದಾರೆ.. ನೂರಾರು ಕೋಟಿ ಜನ ಮನೆಯಿಂದ ಹೊರ ಹೋದ್ರೆ ನಮಗೆ ಎಲ್ಲಿ ಕೊರೊನಾ ಅಟ್ಯಾಕ್ ಆಗುತ್ತೋ ಅನ್ನುವ ಭಯದಲ್ಲೇ ಮನೆಯಲ್ಲೇ ಮೂಲೆ ಸೇರಿದ್ದಾರೆ..

ಆದ್ರೆ, ಚೀನಾ ಮಾತ್ರ ನಮ್ಮ ಬಂಡವಾಳ ಎಲ್ಲಿ ಬಯಲಾಗುತ್ತೋ ಅನ್ನುವ ಭಯದಲ್ಲೇ ದಿನ ದೂಡ್ತಿದೆ.. ಈಗಾಗಲೇ ಚೀನಾ ಇಡೀ ವಿಶ್ವದ ವಿಶ್ವಾಸವನ್ನ ಕಳೆದುಕೊಂಡಿದೆ.. ಕಾರಣ ಈ ಕೊರೊನಾ ವೈರಸ್ ಚೀನಾದ ಕುತಂತ್ರದ ಭಾಗ ಅನ್ನೋದು.. ಕಳೆದ ಮೂರ್ನಾಲ್ಕು ತಿಂಗಳ ಬೆಳವಣಿಗೆಯನ್ನ ಗಮನಿಸಿದ್ರೆ ಚೀನಾ ಒಂದು ಸುಳ್ಳನ್ನ ಮುಚ್ಚಿಡಲು ಸಾವಿರ ಸುಳ್ಳನ್ನ ಹೇಳ್ತಿರೋದು ನಮಗೆ  ಕಾಣುತ್ತೆ..

ಅಷ್ಟಕ್ಕೂ  ಚೀನಾ ಹೇಳಿದ 2 ಸುಳ್ಳುಗಳು ಯಾವುದು ಅಂತ ನೋಡೋದಾದ್ರೆ

ಚೀನಾ ಸುಳ್ಳು 1 : ಕೊರೊನಾ ವೈರಸ್ ಮಾಂಸ ಮಾರುಕಟ್ಟೆಯಿಂದ ಹರಡಿತು

ನಿಜ ಏನು..? ಚೀನಾದಲ್ಲಿ ಕೊರೊನಾ ಸೋಂಕಿಗೆ ಎರಡು ತಿಂಗಳ ಹಿಂದೆಯೇ ಮೂರು ಸಾವಿರ ಜನ ಸಾವನ್ನಪ್ಪಿದ್ರು.. ಕೊರೊನಾ ಸೋಂಕು ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್ ಪ್ರಾಂತ್ಯದಲ್ಲಿ.. ಕೊರೊನಾ ಸೋಂಕಿಗೆ ಚೀನಾ ಯಾವ ರೀತಿ ಭಯ ಬೀಳ್ತು ಅಂದ್ರೆ ಕೇವಲ ಹತ್ತೇ ದಿನದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ಬೃಹತ್ ಆಸ್ಪತ್ರೆ ನಿರ್ಮಿಸಿ ದಾಖಲೆ ಮಾಡ್ತು.. ಎಲ್ಲರೂ ಚೀನಾ ವೇಗಕ್ಕೆ ಚಪ್ಪಾಳೆ ತಟ್ಟಿ ಭೇಷ್ ಅಂದು ಚೀನಾ ನೋಡಿ ಎಲ್ಲರೂ ಕಲಿಬೇಕು ಅಂತ ತಮ್ಮತಮ್ಮ ದೇಶಗಳನ್ನ ಬೈದುಕೊಂಡಿದ್ರು.. ಬಿಡಿ ಅದು ಹಳೆ ವಿಷಯ.. ಇನ್ನು ಈ ವಿಚಿತ್ರ ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ವುಹಾನ್ ಪ್ರಾಂತ್ಯದ ಮಾಂಸ ಮಾರುಕಟ್ಟೆಯಲ್ಲಿ ಅಂತ.. ಇದನ್ನ ಸ್ವತಃ ಚೀನಾ ಜಗತ್ತಿಗೆ  ತಿಳಿಸಿತ್ತು.. ಒಂದು ವೈರಸ್ ದಿಢೀರನೇ ಹುಟ್ಟಲ್ಲ ಅದಕ್ಕೆ ಮೂಲ ಇದ್ದೇ ಇರುತ್ತೆ.. ಬರೀ ಪ್ರಾಣಿಯಿಂದ ಹುಟ್ಟಿದ್ರೆ ವೈರಸ್ ಬಗ್ಗೆ ಸ್ಟಡಿ ಮಾಡಲು ಅಬ್ಬಬ್ಬ ಅಂದ್ರೆ ವರ್ಷಾನುಗಟ್ಟಲೇ ಬೇಕೆ ಬೇಕು.. ಆದ್ರೆ, ಕೊರೊನಾಗೆ ಸಾವು ನೂರು ದಾಟಿರದ ಸಂದರ್ಭದಲ್ಲೇ ಅಂದ್ರೆ ಒಂದು ವಾರದಲ್ಲೇ ಅದರ ತೀವ್ರತೆ ಅರಿತು ಚೀನಾ ಪ್ರತ್ಯೇಕ ಬೃಹತ್ ಆಸ್ಪತ್ರೆ ನಿರ್ಮಾಣ ಮಾಡಿದಾಗಲೇ ಚೀನಾ ಮೇಲೆ ಅನುಮಾನ ಶುರುವಾಯ್ತು. ಅಂದ್ರೆ ಕೊರೊನಾ ವೈರಸ್ ಎಷ್ಟರ ಮಟ್ಟಿಗೆ ಜೀವಜಗತ್ತನ್ನ ತಿಂದು ಮುಗಿಸುತ್ತೆ ಅಂತ ಚೀನಾಗೆ ಮೊದಲೇ ಗೊತ್ತಿದ್ದು, ಅದಕ್ಕೇ ಪ್ರತ್ಯೇಕ ಆಸ್ಪತ್ರೆ ಮಾಡಿ ಚಿಕಿತ್ಸೆ ಆರಂಭಿಸಿತ್ತು.. ಇದರಿಂದ ಮೊದಲ ಸತ್ಯ ಗೊತ್ತಾಗಿದ್ದು ಏನಂದ್ರೆ ಕೊರೋನಾ ಸೃಷ್ಠಿ ಮಾಡಿದ್ದು ಚೀನಾ ದೇಶವೇ ಅಂತ..  ಯಾಕಂದ್ರೆ, ವುಹಾನ್ ಇನ್ಸಿಟ್ಯೂಟ್ ಆಫ್ ವೈರಾಲಜಿಯ ಕೆಲಸವೇ ಸಂಶೋಧನೆ ಮಾಡೋದು.. ಆದ್ರೆ, ಅದು ಮೇಲ್ನೋಟಕ್ಕೆ ಮಾತ್ರ.. ಆದ್ರೆ, ಕೊರೋನಾ ವೈರಸ್ ಅಂತ ಅಪಾಯಕಾರಿ ವೈರಸ್ ಗಳನ್ನ ವೈರಾಲಜಿಯಲ್ಲಿ ಕ್ರಿಯೇಟ್ ಮಾಡ್ತಿರೋದು ಇದೀಗ ಬಯಲಾಗ್ತಿದೆ.. ಚೀನಾದ ವುಹಾನ್ ನ  ಈ ವೈರಾಲಾಜಿ ಇನ್ಸ್ ಟ್ಯೂಟ್ ನಲ್ಲಿ 1500 ಕೊರೋನಾ ಮಾದರಿಯ ಅಪಾಯಕಾರಿ ವೈರಸ್ ಗಳನ್ನ ಕ್ರಿಯೇಟ್ ಮಾಡಿದೆಯಂತೆ.. ಆ ವೈರಸ್ ಗಳಿಂದ ಹರಡುವ ರೋಗಗಳಿಗೆ ಮೆಡಿಸನ್ ಕೂಡ ಚೀನಾ ಬಳಿಯೇ ಇದೆಯಂತೆ. ವೈರಾಜಿಯ ಸಂಶೋಧನ ವಿಭಾಗದಲ್ಲಿ ಕೊರೊನಾ ವೈರಸ್ ಅಭಿವೃದ್ಧಿಪಡಿಸುವ ವೇಳೆ ಅದು ಆತನ ಕೈನಲ್ಲಿಉಳಿದುಕೊಂಡಿದೆ. ನಂತರ ಆತ ವುಹಾನ್ ಮಾಂಸ ಮಾರುಕಟ್ಟೆಗೆ ತೆರಳಿದ್ದಾನೆ. ಅಲ್ಲಿ ವೈರಸ್ ಆತನ ಕೈಯಿಂದ ಮಹಿಳೆಗೆ ತಗುಲಿದೆ. ಅಲ್ಲಿಂದ ಈ ವೈರಸ್ ಹರಡಲು ಶುರುವಾಗಿದೆಯಂತೆ.. ಇದು ವಾಸ್ತವ ವಿಷಯ.. ಚೀನಾನೆ ಹೇಳುವಂತೆ ಮಾಂಸ ಮಾರುಕಟ್ಟೆಯಿಂದ, ಬಾವಲಿಯಿಂದ, ಚಿಪ್ಪಂದಿಯಿಂದ ಅಂತ ಚೀನಾ ಮಾಧ್ಯಮಗಳ ಕೈಲಿ ಸ್ಟೋರಿ ಹೇಳಿಸಿತ್ತು. ಇದನ್ನ ನಾವು ನಂಬಿದ್ವಿ..

ಇದೆಲ್ಲದರ ನಡುವೆ ವುಹಾನ್ ನಲ್ಲಿ ಮತ್ತೆ ಮಾಂಸ ಮಾರುಕಟ್ಟೆ ಪುನರಾರಂಭಗೊಂಡಿದ್ದು ಚೀನಾ ಕುತಂತ್ರವನ್ನ ಸಾಬೀತು ಮಾಡಲು ಮತ್ತೊಂದು ಸಾಕ್ಷ್ಯವಾಯ್ತು.. ಇದು ಗೊತ್ತಾಗ್ತಿದ್ದ ಹಾಗೆಯೇ ಚೀನಾ ಕೊರೊನಾ ಸಂಬಂಧಿಸಿದ ಇನ್ವೇಸ್ಟಿಗೇಷನ್ ವರದಿ ಮಾಡದಂತೆ ಅಲ್ಲಿನ ಮಾಧ್ಯಮಗಳಿಗೆ ಸೂಚನೆ ಕೊಟ್ಟಿದೆ.. ಇದನ್ನ ಸ್ವತಃ ಅಮೆರಿಕಾದ ಫಾಕ್ಸ್ ನ್ಯೂಸ್ ವರದಿ ಮಾಡಿದೆ.. ಯಾವಾಗ ಚೀನಾದ ಈ ಚಿಲ್ಲರೆ ಬುದ್ಧಿ ಗೊತ್ತಾಯ್ತೋ ಆ ಕ್ಷಣದಿಂದಲೇ ಟ್ರಂಪ್ ಚೀನಾ ವಿರುದ್ಧ ಎಗರಿ ಬೀಳ್ತಿದ್ದಾರೆ.. ಪ್ರೆಸ್ ಮಿಟ್ ನಲ್ಲಿ ಟ್ರಂಪ್ ಗೆ ಪತ್ರಕರ್ತನೊಬ್ಬ ಈ ರೀತಿ ಪ್ರಶ್ನೆ ಮಾಡ್ತಾರೆ. ಕೊರೊನಾ ವಿಚಾರದಲ್ಲಿ ಚೀನಾ ಕೈವಾಡ ಇದೆ ಅಂತ ಗೊತ್ತಾದ್ರು ನೀವ್ಯಾಕೆ ಸುಮ್ಮನಿದ್ದೀರಾ ಅಂತ.. ಆಗ ಟ್ರಂಪ್ ಉತ್ತರ ಕೊಡೋದು ನಿಮಗ್ಯಾರು ಹೇಳಿದ್ದೂ ನಾವು ಸುಮ್ಮನೆ ಕೂತಿದ್ದೇವೆ ಅಂತ ನೋಡ್ತಾಯಿರಿ ಅಂತ ಹೇಳುವ ಮೂಲಕ ಚೀನಾಗೆ ಮೂಂದೈತೆ ಮಾರಿ ಹಬ್ಬ ಅನ್ನುವ ಸೂಚನೆ ಕೊಟ್ಟಿದ್ದಾರೆ..

ಚೀನಾ ಸುಳ್ಳು 2 : ಎರಡು ತಿಂಗಳ ಹಿಂದೆಯೇ ಸಾವು, ಸೋಂಕು ಸ್ಟಾಪ್

ನಿಜ ಏನು..? – ಉತ್ತರ ಇಲ್ಲಿದೆ ನೋಡಿ..

ಚೀನಾದಲ್ಲಿ ಮೊದಲು ಶುರುವಾದ ಕೊರೊನಾ ಸೊಂಕು 81 ಸಾವಿರ ಜನಕ್ಕೆ ತಗುಲಿ 3300 ಜನ ಸಾವನ್ನಪ್ಪಿದ್ದು 77 ಸಾವಿರ ಜನ ಗುಣಮುಖರಾಗಿ ಹೋದ್ರು.. ಈ ಲೆಕ್ಕವನ್ನ ಚೀನಾ ಜಗತ್ತಿನ ಮುಂದೆ ಇಡ್ತು.. ಚೀನಾದಲ್ಲಿ 81000 ರ ಸೋಂಕಿತರಿದ್ದಾಗ ಇಡೀ ಜಗತ್ತಿನಲ್ಲಿ ಸೋಂಕಿತರ ಸಂಖ್ಯೆ 8 ಸಾವಿರವೂ ದಾಟಿರಲಿಲ್ಲ.. ಆ ಸಂದರ್ಭದಲ್ಲಿ ಟ್ರಂಪ್ ಭಾರತ ಪ್ರವಾಸದಲ್ಲಿ ಇದ್ರು.. ಅಮೆರಿಕಾದಲ್ಲಿ ಕೇವಲ 80-100 ಸೋಂಕಿತರು ಮಾತ್ರ ಇದ್ರು.. ಆದ್ರೆ, ಇದಾದ ಒಂದೂವರೆ ತಿಂಗಳ ನಂತರವೂ ಚೀನಾದಲ್ಲಿ ಅದೇ ನಂತರ 81 ಸಾವಿರ ಸೋಂಕಿತರು, 3300 ಸಾವು, 77 ಸಾವಿರ ಗುಣಮುಖ.. ಒಂದೂವರೆ ತಿಂಗಳು ಸೇಮ್ ನಂಬರ್.. ಈ ವೇಳೆಗಾಗಲೇ ಅಮೆರಿಕಾದಲ್ಲಿ 7 ಲಕ್ಷ ಸೋಂಕಿತರು 37 ಸಾವಿರ ಸಾವು ಸಂಭವಿಸಿತ್ತು.. ಚೀನಾ ಬಳಿ ಕೊರೊನಾಗೆ ಔಷಧಿ ನೀಡುವಂತೆ ಟ್ರಂಪ್ ಕೇಳಿಕೊಂಡ್ರು. ಔಷಧಿ ಕೊಡದಿದ್ರೂ ಪರವಾಗಿಲ್ಲ ಏನ್ ಚಿಕಿತ್ಸೆ ನೀಡಿ ಅಂತ ಕೇಳಿದ್ರು ಚೀನಾ ಕ್ಯಾರೆ ಅನ್ನಲಿಲ್ಲ.. ಆದ್ರೆ, ಈ ವೇಳೆ ಚೀನಾ ಮಾಸ್ಕ್, ವೆಂಟಿಲೇಟರ್ ಹಾಗೂ ಕೊರೊನಾ ಟೆಸ್ಕ್ ಕಿಟ್, ವೈದ್ಯರ ರಕ್ಷಾ ಕವಚವನ್ನ ಕೋಟಿ ಕೋಟಿ ರಫ್ತು ಮಾಡಲು ಮುಂದೆ ಬಂತು.. ಈ ಬೆಳವಣಿಗೆಯಿಂದ ಇಡೀ ವಿಶ್ವ ಚೀನಾದ ಮೇಲೆ ಅನುಮಾನ ಪಡಲು ಶುರುವಾಯ್ತು.. ಇಡೀ ಜಗತ್ತು ತನ್ನ ವಿರುದ್ಧ ತಿರುಗಿ ಬೀಳ್ತಿದ್ದ ಹಾಗೆಯೇ ಚೀನಾ ತನ್ನ ನಂಬರ್ ಅನ್ನ ಏರಿಕೆ ಮಾಡಿಕೊಳ್ತು.. 82719 ಸೋಂಕಿತರು, 4632 ಸಾವು, 1100 ಮಂದಿಗೆ ಚಿಕಿತ್ಸೆ ಮುಂದುವರಿಕೆ ಎಂದು.. ಒಂದೂವರೆ ತಿಂಗಳ ನಂತರ ನಂಬರ್ ಏರಿಕೆ ಮಾಡುವ ಮೂಲಕ ಚೀನಾ ಮತ್ತೆ ಜಗತ್ತಿನ ಬೆತ್ತಲಾಯ್ತು..

ಚೀನಾ ಜಗತ್ತಿನ ಮೇಲೆ ವೈರಸ್ ದಾಳಿ ಮಾಡಿ ಪ್ರಪಂಚದಲ್ಲಿ ತಾನೇ ನಂಬರ್ ಓನ್ ಆಗುವ ಕುತಂತ್ರ ಬುದ್ಧಿಯನ್ನ ತೋರಿಸುತ್ತಿದೆ.. ಕೊರೊನಾ ಮೂಲವನ್ನ ಹುಡುಕುತ್ತಾ ಹೊರಟಾಗ ಚೀನಾ ನರಿ ಬುದ್ಧಿ ಬಯಲಾಗಿದೆ.. ಈಗಾಗಲೇ ಜಪಾನ್, ದಕ್ಷಿಣ ಕೊರಿಯಾ ದೇಶಗಳು ಚೀನಾದಲ್ಲಿರುವ ಫ್ಯಾಕ್ಟರಿಗಳನ್ನ ಭಾರತಕ್ಕೆ ಶಿಫ್ಟ್ ಮಾಡಲು ಮುಂದಾಗಿವೆ.. ಇದೆಲ್ಲಾದರ ನಡುವೆ, ಚೀನಾ ಮೂಲದ ಜೂಮ್ ಆಪ್ ಭಾರತದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.. 5 ಲಕ್ಷಕ್ಕೂ ಅಧಿಕ ಜನರು ಸಂಸ್ಥೆಯ ವಯಕ್ತ್ಇ ಡೇಟಾವನ್ನ ಮಾರಿದೆ ಎಂದು ಕೇಂದ್ರ ಸರ್ಕಾರ ಆರೋಪ ಮಾಡಿದೆ. ಜೂಮ್ ಆಪ್ ಸೇಫ್ ಅಲ್ಲಅಂತ ಕೇಂದ್ರ ಸರ್ಕಾರವೇ ಹೇಳಿದೆ.. ಭಾರತದಲ್ಲಿ ಚೀನಾ ಪ್ರಾಬಲ್ಯ ಸಾಧಿಸಲು ಮುಂದಾಗ್ತಿದೆ.. ಹೆಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಚೀನಾ ಸೆಂಟ್ರಲ್ ಬ್ಯಾಂಕ್ ಷೇರು ಖರೀದಿ ಮಾಡಿದೆ.. ಯಾಕಂದ್ರೆ ಜಗತ್ತಿನಲ್ಲಿ ಕೊರೊನಾ ಹಾವಳಿಗೆ ಇಂದು ಅಮೆರಿಕಾ ಸೇರಿದಂತೆ, ಯೂರೋಪ್ ರಾಷ್ಟ್ರಗಳು ನೆಲಕಚ್ಚಿ ಹೋಗ್ತಿವೆ. ಇಂಥಹ ಸಂದರ್ಭದಲ್ಲಿ ಭಾರತ ಮಾತ್ರ ಬಲಿಷ್ಠವಾಗಿ ಚೀನಾಗೆ ಸೆಡ್ಡು ಹೊಡೆದು ನಿಲ್ತಿದೆ. ಈ ಕಾರಣಕ್ಕಾಗಿ  ನಾವೆಲ್ಲರೂ ಚೀನಾ ವಿರುದ್ಧ ಸಮರ ಸಾರ ಬೇಕಿದೆ. ಹಾಗಂತೆ.. ಗನ್ ಹಿಡಿದು ಯುದ್ಧ ಮಾಡಬೇಕಿಲ್ಲ.. ಬದಲಾಗಿ ಚೀನಾದ ಯಾವುದೇ ಆಪ್ ಗಳು, ವಸ್ತುಗಳು, ವೆಬ್ ಸೈಟ್ ಗಳನ್ನ ಬಳಸಿದಿದ್ರೆ ಸಾವು ಸೇಫ್.. ಇಲ್ಲದಿದ್ರೆ ಭಾರತಕ್ಕೆ ಮುಂದೆ ಗಂಭೀರ ಅಪಾಯ ಎದುರಾಗಲಿದೆ..

ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ, ಬೆಂಗಳೂರು..

https://www.youtube.com/watch?v=W6348HAikMc
- Advertisement -

Latest Posts

Don't Miss