- Advertisement -
ಕರ್ನಾಟಕ ಟಿವಿ : ಚೀನಾದ ಬಾವಲಿಗಳ ಮಹಾತಾಯಿ ಎಂದೇ ಕರೆಸಿಕೊಳ್ಳುವ ವುಹಾನ್ ಇನ್ಸಿಟ್ಯೂಟ್ ಆಫ್ ವೈರಾಲಜಿಯ ವಿಜ್ಞಾನಿ ಶೀ ಜ್ಯೆಂಗ್ಲಿ ಇದೀಗ ನಾಪತ್ತೆಯಾಗಿರೋದು ಬಹಳ ಅನುಮಾನಗಳಿಗೆ ಕಾರಣವಾಗಿದೆ. ಕೊರೊನಾ ವೈರಸ್ ಸಂಬಂಧ ಶಿ ಜ್ಯೆಂಗ್ಲಿ ಸಂಶೊಧನೆ ನಡೆಸ್ತಿದ್ರು.. ಅಲ್ಲದೇ ಬಾವಲಿ ಜಗತ್ತಿನ ಎಲ್ಲಾ ಮಾದರಿಯ ಬಾವಲಿ ಕುರಿತು ಶಿ ಜ್ಯೆಂಗ್ಲಿ ಅಧ್ಯಯನ ಮಾಡಿದ್ದಾರೆ.. ವಿಶ್ವಮಟ್ಟದಲ್ಲಿ ಕೊರೊನಾ ವೈರಸ್ ಹರಡಲು ಚೀನಾ ಕಾರಣಅ ನ್ನುವ ಆರೋಪ ಗಟ್ಟಿಯಾಗ್ತಿರುವ ನಡುವೆ ವುಹಾನ್ ಇನ್ಸಿಟ್ಯೂಟ್ ಆಫ್ ವೈರಾಜಲಿಯ ಸಂಶೋಧಕಿ ನಾಪತ್ತೆ ಯಾಗಿರೋದು ಚೀನಾ ಮೇಲೆ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಜೊತೆಗೆ ಈಕೆಯೇ ವುಹಾನ್ ಇನ್ಸಿಟ್ಯೂಟ್ ಆಫ್ ವೈರಾಜಿಯ ಮುಖ್ಯಸ್ಥೆ ಅಂತನೂ ಹೇಳಲಾಗ್ತಿದೆ.. ಶಿ ಜ್ಯೆಂಗ್ಲಿ ಪತ್ತೆಯಾದ್ರೆ ಕೊರೊನಾದ ಬಹುತೇಕ ಸತ್ಯ ಹೊರಬರುತ್ತೆ..
- Advertisement -