Sunday, November 9, 2025

Latest Posts

ಚೀನಾದ ಡ್ರೋನ್ ಎಡವಟ್ಟಿಗೆ ಪ್ರೇಕ್ಷಕರ ಮೇಲೆ ಬೆಂಕಿಯ ಮಳೆ!

- Advertisement -

ಚೀನಾದ ಹುನಾನ್ ಪ್ರಾಂತ್ಯದ ಲಿಯುಯಾಂಗ್ ನಗರದ ಸ್ಕೈ ಥಿಯೇಟರ್ನಲ್ಲಿ ನಡೆದಿದ್ದ ಡ್ರೋನ್‌ ಚಾಲಿತ ಪಟಾಕಿ ಪ್ರದರ್ಶನವು ತಾಂತ್ರಿಕ ದೋಷದಿಂದ ಭೀಕರ ಘಟನೆಗೆ ಕಾರಣವಾಗಿದೆ. ‘The Sound of Blooming Flowers’ ಹೆಸರಿನ ಈ ಕಾರ್ಯಕ್ರಮದಲ್ಲಿ ನೂರಾರು ಡ್ರೋನ್‌ಗಳು ಹಾಗೂ ಪಟಾಕಿಗಳನ್ನು ಬಳಸಿ ಆಕಾಶದಲ್ಲಿ ತ್ರಿಮಾನದ ದೃಶ್ಯಕಾವ್ಯವನ್ನು ಮೂಡಿಸಲು ಯೋಜನೆ ಮಾಡಲಾಗಿತ್ತು.

ಆದರೆ ನಿರೀಕ್ಷಿತವಾಗಿ ಈ ಪ್ರದರ್ಶನ ಸಾಗದೆ, ಡ್ರೋನ್‌ಗಳಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಪಟಾಕಿಗಳು ಪ್ರೇಕ್ಷಕರ ಮೇಲೆ ಬಿದ್ದು ಬೆಂಕಿಯ ಮಳೆಯಂತಾಗಿ ಪರಿಣಮಿಸಿತು. ಹೌದು ಡ್ರೋನ್‌ಗಳಲ್ಲಿ ಸಂಭವಿಸಿದ ತಾಂತ್ರಿಕ ತೊಂದರೆಯಿಂದಾಗಿ ಪಟಾಕಿಗಳು ಆಕಾಶದಲ್ಲಿ ಚಿತ್ತಾರ ಮೂಡಿಸುವ ಬದಲು ಸೀದಾ ಬಂದು, ಆಕಾಶದಲ್ಲಿ ಬೆಳಕಿನ ಚಿತ್ತಾರ ನೋಡುವುದಕ್ಕಾಗಿ ಕೆಳಗೆ ನಿಂತಿದ್ದವರ ಮೇಲೆ ಬೀಳುವುದಕ್ಕೆ ಶುರು ಮಾಡಿದೆ. ನೂರಾರು ಡ್ರೋನ್‌ಗಳು ಬಿದ್ದು ಜನಸಮೂಹದ ಮೇಲೆಯೇ ಬಿದ್ದು ಸ್ಫೋಟಗೊಂಡವು. ಈ ತೊಂದರೆಯಿಂದಾಗಿ ಪ್ರೇಕ್ಷಕರು ಭೀತಿಗೆ ಒಳಗಾಗಿದ್ದಾರೆ.

ತಾವು ಕುಳಿತುಕೊಂಡಿದ್ದ ಕುರ್ಚಿಗಳನ್ನು ತಲೆಯ ಮೇಲೆ ಎತ್ತಿಕೊಂಡು ಬೆಂಕಿಯಿಂದ ತಮ್ಮನ್ನ ತಾವು ರಕ್ಷಿಸಲು ಯತ್ನಿಸುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆಕಾಶದಿಂದ ಬೆಂಕಿಯ ಉಂಡೆಗಳಂತೆ ಪಟಾಕಿಗಳು ಬಿದ್ದಿರುವ ದೃಶ್ಯಗಳು ಕೆಲವರಿಗೆ ನಕ್ಷತ್ರಗಳ ಮಳೆಯಂತೂ ಭಾಸವಾಗಿವೆ, ಆದರೆ ಪ್ರತ್ಯಕ್ಷದರ್ಶಿಗಳ ಪರ್ವಾಗಿತ್ತು – ಓಡುತೋ ಓಡಿದಂತೆ ಜನರು ಸ್ಥಳ ಬದಲಾಯಿಸಿದರು.

ಘಟನೆಯಲ್ಲಿ ಚೀನಾ ಸರ್ಕಾರದ ಪ್ರಕಾರ ಯಾವುದೇ ಗಾಯಗಳು ವರದಿಯಾಗಿಲ್ಲ. ಆದರೆ ನಿಜವಾಗಿಯೂ ಕೆಲವು ಗಾಯಗಳಿದ್ದರೂ ಸಹ ಅವರು ಗಾಯಗಳನ್ನು ಬಹಿರಂಗಪಡಿಸದಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಚೀನಾ ಪಟಾಕಿಗಳ ಹೊಸತನಕ್ಕೆ ಹೆಸರುವಾಸಿಯಾಗಿದೆ. ಆದರೆ ಇದು ಅತ್ಯಾಧುನಿಕ ತಂತ್ರಜ್ಞಾನವು ಸಹ ಅದರ ಅಪಾಯಗಳನ್ನು ಹೊಂದಿದೆ ಎಂಬುದನ್ನು ನೆನಪಿಸುತ್ತದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss