Thursday, September 19, 2024

Latest Posts

China : ಟೆಸ್ಟ್ ವೇಳೆಯೇ ಚೀನಾ ರಾಕೆಟ್ ಸ್ಫೋಟ!

- Advertisement -

ಚೀನಾದ ಟಿಯಾನ್ಲಾಗ್ 3 ರಾಕೆಟ್ ಪರೀಕ್ಷೆ ಮಾಡುತ್ತಿರುವಾಗಲೇ ಆಕಸ್ಮಿಕವಾಗಿ ಲಾಂಚ್ ಆಗಿ ಕೆಲ ಕ್ಷಣಗಳಲ್ಲಿ ಭೂಮಿಗೆ ಬಿದ್ದಂತಹ ಘಟನೆ ನಡೆದಿದೆ. ಚೀನಾದ ಹೆನಾನ್ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಚೀನಾದ ಈ ಟಿಯಾನ್ಲಾಗ್ 3 ರಾಕೆಟ್‌ನ್ನು ಹೆವನ್ಲಿ ಅಥವಾ ಸಕೈ ಡ್ರ್ಯಾಗನ್ 3 ಎಂದು ಕೂಡ ಕರೆಯಲಾಗುತ್ತಿತ್ತು. ರಾಕೆಟ್‌ನ ದೇಹ ಹಾಗೂ ಟೆಸ್ಟ್ ಬೆಂಚ್ ನಡುವಣ ರಚನಾತ್ಮಕ ವೈಫಲ್ಯದಿಂದಾಗಿ ಘಟನೆ ನಡೆದಿದ್ದು, ಲಾಂಚ್ ಪ್ಯಾಡ್‌ನಿಂದ ಇದ್ದಕ್ಕಿದ್ದಂತೆ ಕಳಚಿಕೊಂಡ ರಾಕೆಟ್ ಲಾಂಚ್ ಆಗಿದೆ ಎಂದು ಸ್ಪೇಸ್ ಪಾಯೋನಿಯರ್ ಹೇಳಿದೆ.

ಈ ಟಿಯಾನ್ಲಾಂಗ್ 3 ರಾಕೆಟ್, 3.8 ಮೀಟರ್ ಸುತ್ತಳತೆಯನ್ನು ಹೊಂದಿದ್ದು, 590 ಟನ್‌ಗಳಷ್ಟು ದ್ರವ್ಯರಾಶಿಯನ್ನು ಹೊತ್ತೊಯ್ಯುವ ದೊಡ್ಡಮಟ್ಟದ ದ್ರವ ಉಡಾವಣಾ ವಾಹನವಾಗಿದೆ. ಇದರ ಲೋ ಅರ್ಥ್ ಆರ್ಬಿಟ್(LEO) ಟ್ರಾನ್ಸ್‌ಪೋರ್ಟ್ ಸಾಮರ್ಥ್ಯವೂ 17 ಟನ್, ಹಾಗೆಯೇ ಸನ್ ಸಿಂಕ್ರೋನಸ್ ಆರ್ಬಿಟ್‌ ಸಾಮರ್ಥ್ಯ 14 ಟನ್. ಈ ಎರಡನೇ ಹಂತದ ರಾಕೆಟ್ ಅನ್ನು ಬಹುತೇಕ ಮರುಬಳಕೆ ಮಾಡಬಹುದಾಗಿದೆ. ಇದನ್ನು ಚೀನಾದ ಉಪಗ್ರಹ ಇಂಟರ್ನೆಟ್‌ ಜಾಲಕ್ಕಾಗಿ ಕಸ್ಟಮೈಸ್ ಮಾಡಲಾಗಿತ್ತು.

ಚೀನಾದ ಗೋಂಗಿ ನಗರದಲ್ಲಿರುವ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ ಟಿಯಾನ್‌ಲಾಂಗ್ 3 ರಾಕೆಟ್‌ ಪರೀಕ್ಷಾರ್ಥ ಲಾಂಚ್‌ ನಡೆಸಲು ಯೋಜನೆ ಸಿದ್ಧವಾಗಿತ್ತು. ಆದರೆ ವಿಜ್ಞಾನಿಗಳು ಕ್ಲೂ ಕೊಡುವ ಮೊದಲೇ ಚೀನಾ ರಾಕೆಟ್ ತನ್ನಷ್ಟಕ್ಕೇ ತಾನೇ ಲಾಂಚ್ ಆಗಿ ಸ್ವಲ್ಪ ಮೇಲೆ ಹೋಗಿ ನಂತರ ನೆಲಕ್ಕೆ ಅಪ್ಪಳಿಸಿದೆ. ಜನರಹಿತ ಸುರಕ್ಷಿತ ಪ್ರದೇಶದಲ್ಲಿ ರಾಕೆಟ್ ಬಿದ್ದಿದ್ದರಿಂದ ಯಾರಿಗೂ ಯಾವುದೇ ಅನಾಹುತವಾಗಿಲ್ಲ, ಈ ರಾಕೆಟ್ ಕ್ರ್ಯಾಶ್ ಆಗಿದ್ದರಿಂದ ಪರೀಕ್ಷಾ ಸ್ಥಳದ ಒಂದೂವರೆ ಕಿಲೋಮೀಟರ್ ದೂರದಲ್ಲಿ ಸಣ್ಣ ಮಟ್ಟಿನ ಬೆಂಕಿ ಹೊತ್ತಿ ಉರಿಯಿತು ಎಂದು ಚೀನಾ ಮಾದ್ಯಮಗಳಲ್ಲಿ ವರದಿ ಆಗಿದೆ.

 

- Advertisement -

Latest Posts

Don't Miss