ಕರ್ನಾಟಕ ಟಿವಿ : ನೇಪಾಳ ಸರ್ಕಾರವನ್ನ ನಡೆಸ್ತಿರೋದು ನೇಪಾಳ ರಾಜಕೀಯ ನಾಯಕರ ಅಥವಾ ಚೀನಾದ ಅಧಿಕಾರಿಗಳ ಅನ್ನುವ ಅನುಮಾನ ಶುರುವಾಗಿದೆ. ಯಾಕಂದ್ರೆ ನೇಪಾಳದಲ್ಲಿರುವ ಚೀನಾ ರಾಯಭಾರಿ ಹೌ ಯಾಂಕಿ ಇದೀಗ ಪತನದ ಅಂಚಿನಲ್ಲಿರುವ ಕೆ.ಪಿ ಶರ್ಮಾ ಒಲಿ ಸರ್ಕಾರ ಉಳಿಸಿಕೊಳ್ಳಲು ಭಾರೀ ಸರ್ಕಸ್ ನಡೆಸ್ತಿದ್ದಾರೆ. ಹೌ ಯಾಂಕಿ ಮೊನ್ನೆಯಷ್ಟೆ ನೇಪಾಳ ಅಧ್ಯಕ್ಷರನ್ನ ಭೇಟಿಯಾಗಿದ್ರು.. ಇದೀಗ ಪ್ರಧಾನಿ ಒಲಿ ಹಾಗೂ ನೇಪಾಳ ಕಮ್ಯೂನಿಸ್ಟ್ ಪಕ್ಷದ ನಾಯಕ ಪುಷ್ಟ ಕಮಲ್ ದಹಲ್ ಪ್ರಚಂಡ ಅವರ ಜೊತೆಗೂ ಮಾತುಕತೆ ನಡೆಸಿದ್ದಾರೆ.. ಒಲಿಯವರ ಭಾರತದ ವಿರೋಧ ನೀತಿಗೆ ಬೇಸತ್ತ. ನೇಪಾಳ ಕಮ್ಯೂನಿಸ್ಟ್ ಪಕ್ಷದ ಸ್ಟ್ಯಾಂಡಿಂಗ್ ಕಮಿಟಿಯ 45 ಜನರಲ್ಲಿ 30 ಜನ ಪ್ರಧಾನಿ ಒಲಿ ಬದಲಾವಣೆಗೆ ಮುಂದಾಗಿದ್ದಾರೆ.. ಆದ್ರೆ ಚೀನಾ ರಾಯಭಾರಿ ಹೌ ಯಾಂಕಿ ಒಲಿಯನ್ನ ಪ್ರಧಾನಿಯಾಗಿ ಮುಂದುವರೆಸಲು ಸರ್ಕಸ್ ಮಾಡ್ತಿದ್ದಾರೆ.. ಹಾಗೆಯೇ ಈ ಹೌ ಯಾಂಕಿ ಮಾತು ಕೆಳಿಕೊಂಡು ಪ್ರಧಾನಿ ಒಲಿ ಭಾರತದ ಭೂ ಪ್ರದೇಶವನ್ನ ಸೇರಿಸಿಕೊಂಡು ಹೊರ ನೇಪಾಳ ಭೂಪಟವನ್ನ ಸಂಸತ್ತಿನಲ್ಲಿ ಅಂಗೀಕಾರ ಪಡೆದುಕೊಂಡಿದ್ದಾರೆ.. ಇದೀಗ ನೇಪಾಳ ಸರ್ಕಾರವನ್ನ ಚೀನಾದ ರಾಯಭಾರಿ ಹೌ ಯಾಂಕಿ ನಡೆಸ್ತಿದ್ದಾರೆ ಅಂತ ನೇಪಾಳ ವಿರೋಧ ಪಕ್ಷಗಳು ಆರೋಪಿಸಿವೆ.
ನ್ಯಾಷನಲ್ ಡೆಸ್ಕ್, ಕರ್ನಾಟಕ ಟಿವಿ,
ನೀವೂ ಚೀನಾ ಆ್ಯಪ್ ಗಳನ್ನ ಬಹಿಷ್ಕಾರ ಮಾಡಿದ್ದೀರಾ..? ಕಾಮೆಂಟ್ ಮಾಡಿ