Chithradurga News:
Feb:17: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರ ಈಗ ಅಭಿವೃದ್ಧಿ ಪಥದತ್ತ ಸಾಗುತ್ತಿದೆ.. ಇದಕ್ಕೆ ಕಾರಣ ನಮ್ಮ ಶಾಸಕರು ಎನ್ನುತ್ತಿದ್ದಾರೆ ಊರ ಜನ.. ಯೆಸ್, ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ , ಜನಪರ ಕಾರ್ಯದಲ್ಲಿ ಸಂಪೂರ್ಣ ತನ್ನನ್ನು ತಾನು ತೊಡಗಿಸಿಕೊಂಡು ಕ್ಷೇತ್ರದ ಚಿತ್ರಣವನ್ನೇ ಬದಲಿಸ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಸುಂದರ ಬೆಟ್ಟಗಳ ನಡುವೆ ವೇದಾವತಿ ನದಿ ದಂಡೆಯ ಮೇಲೆ ನೆಲೆನಿಂತ ಊರು ಹಿರಿಯೂರು. ಒಂದೆಡೆ ಪ್ರಾಕೃತಿಕ ಸೌಂದರ್ಯದಲ್ಲಿ ಊರು ಕಂಗೊಳಿಸುತ್ತಿದ್ದರೆ ಮತ್ತೊಂದೆಡೆ ಅಭಿವೃದ್ಧಿಯೇ ಮರೀಚಿಕೆ ಆಗಿದ್ದ ಹಿರಿಯೂರು, ಈಗ ಅಭಿವೃದ್ಧಿಯತ್ತ ದಾಪುಗಾಲು ಹಾಕ್ತಿದೆ. ಹಿರಿಯೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಗಲಿರುಳು ಸೇವೆ ಮಾಡ್ತಿದ್ದಾರೆ ಹಿರಿಯೂರ ಶಾಸಕಿ ಪೂರ್ಣಿಮಾ ಶ್ರೀನಿವಾಸ್.
ನಿರಂತರ ಅಭಿವೃದ್ಧಿಯತ್ತ ಚಿತ್ತವಿಟ್ಟಿರೋ ಹಿರಿಯೂರು ಇದೀಗ ಅನೇಕ ಯೋಜನೆಗಳನ್ನು ತಮ್ಮದಾಗಿಸಿದೆ. ನೂರು ವರ್ಷಗಳ ಕನಸಾಗಿದ್ದ ಧರ್ಮಪುರ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ 110 ಕೋಟಿ ರೂಗಳ ಕಾಮಗಾರಿ ಈಗ ಮುಗಿಯುವ ಹಂತದಲ್ಲಿದೆ.
25 ಕೋಟಿ ರೂ ವೆಚ್ಚದಲ್ಲಿ ಹಿರಿಯೂರು ತಾಲೂಕಿಗೆ ನೂತನ ಮಲ್ಟಿ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ದೊರೆತಿದ್ದು ಶಾಸಕಿಯ ಶ್ರಮದಿಂದ. ಜನತೆಗಾಗಿ ಕುಡಿಯುವ ನೀರಿನ ಯೋಜನೆ ಕೂಡಾ ವಿಶೇಷವಾಗಿ ನೀಡಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ತಾಲೂಕಿನ ಎಲ್ಲಾ ಹಳ್ಳಿಗಳಿಗೂ ನೀರು ಸಂಪರ್ಕಿಸುವ ಯೋಜನೆ 365 ಕೋಟಿ ಅನುದಾನ ದೊರೆತಿರುವುದು ಕೂಡಾ ಶಾಸಕಿಯ ಶ್ರಮದ ಪ್ರತೀಕ.
ಹಿರಿಯೂರು ನಗರಕ್ಕೆ 210 ಕೋಟಿ ರೂ ವೆಚ್ಚದಲ್ಲಿ ಯುಜಿಡಿ ಕಾಮಗಾರಿ, ಮಾರಿಕಣ್ಣುವೆ ಸುತ್ತ ಮುತ್ತ ಇರುವ ಕಾಡನ್ನು ಉತ್ತರಗುಡ್ಡ ವನ್ಯಜೀವಿ ಧಾಮವನ್ನಾಗಿಸಿದ ಕೀರ್ತಿ, ಬಹುದಿನಗಳ ಕನಸಾಗಿದ್ದ ಕೆಎಸ್ಆರ್ಟಿಸಿ ಡಿಪೋ ಹಿರಿಯೂರು ತಾಲೂಕಿಗೆ ಆರು ಕೋಟಿ ರು ವೆಚ್ಚದಲ್ಲಿ ದೊರೆತಂತಹ ಭಾಗ್ಯ, ಯಾರು ಮಾಡದ ಸಾಹಸಕ್ಕೆ ಕೈಹಾಕಿ, ಹಿರಿಯೂರು ನಗರದ ಹುಲಿಯರು ರಸ್ತೆ ಅಗಲೀಕರಣದ ಕಾಮಗಾರಿ ನಿರ್ಮಾಣವೂ ಶಾಸಕಿ ಪೂರ್ಣಿಮಾ ಶ್ರೀನಿಮಾಸ್ ಅವರ ಕೊಡುಗೆ ಎಂದೇ ಹೇಳಬಹುದು.
ಇಷ್ಟು ಮಾತ್ರವಲ್ಲದೆ, ಹಿರಿಯೂರು ತಾಲೂಕಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಒಟ್ಟು 12,000 ಮನೆಗಳನ್ನು ಮಂಜೂರು ಮಾಡಿಸಿದ್ದಾರೆ.. ಒಂದು ಕ್ಷೇತ್ರಕ್ಕೆ ಇಷ್ಟು ಮನೆಗಳನ್ನು ತಂದ ಕೀರ್ತಿ ನಮ್ಮ ಶಾಸಕಿ ಪೂರ್ಣಮಾ ಅವರಿಗೆ ಸಲ್ಲುತ್ತೆ ಅನ್ನೋದು ಜನತೆಯ ಅಭಿಮಾನದ ಮಾತು. ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಈ ಹಿಂದೆ ಕೇವಲ ಎರಡರಿಂದ ಮೂರು ವೈದ್ಯರಿದ್ದರು, ಈಗ 10 ರಿಂದ 12 ಜನ ವಿವಿಧ ಸ್ಪೆಷಾಲಿಟಿ ಡಾಕ್ಟರ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ..
ಮತ್ತೊಂದೆಡೆ ಶಾಸಕರ ಸರಳತೆಯನ್ನು ಊರಿಗೆ ಊರೇ ಕೊಂಡಾಡುತ್ತಿದೆ. ಇವರು ಜನಸ್ನೇಹಿ ಶಾಸಕರು ಹಾಗೂ ಇವರನ್ನು ಸಂಪರ್ಕಿಸಲು ಯಾವುದೇ ಲೀಡರ್ಗಳ ಅವಶ್ಯಕತೆ ಇಲ್ಲ.ಶಾಸಕರೇ ಜನರ ಬಳಿ ಬಂದು ಜನರ ಸಮಸ್ಯೆ ಆಲಿಸೋದು ಇವರ ಮತ್ತೊಂದು ಮುತ್ತಿನಂತಹ ಗುಣ. ಫೇಸ್ಬುಕ್ ವಾಟ್ಸಾಪ್ ಫೋನ್ ಕರೆಗಳ ಮೂಲಕ ಕೂಡಾ ಜನರಿಗೆ ಪ್ರತಿಕ್ರಿಯೆಸುವ ಸರಳ ಸಜ್ಜನಿಕೆಯ ಜನಪರ ಶಾಸಕಿ.
ತಾಲೂಕಿನಾದ್ಯಂತ 90 ಕೋಟಿ ರೂ ವೆಚ್ಚದಲ್ಲಿ ವಿವಿಧ ಹಳ್ಳಿಗಳಲ್ಲಿ ಚೆಕ್ ಡ್ಯಾಮ್ ನಿರ್ಮಾಣ. ಹಿರಿಯೂರು ತಾಲೂಕಿಗೆ ನೂತನ ಮಿನಿವಿಧಾನಸೌಧ ಕಟ್ಟಡ 15 ಕೋಟಿ ರೂ ವೆಚ್ಚದಲ್ಲಿ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ, ಹಿರಿಯೂರು ನಗರಸಭಾ ನೂತನ ಕಟ್ಟಡಕ್ಕೆ ವಿಶೇಷ ಅನುದಾನದಲ್ಲಿ 3 ಕೋಟಿ ರೂಪಾಯಿ ಮಂಜೂರಾಗಿದೆ. ಇನ್ನೂ ಚಿಕ್ಕ ಪುಟ್ಟ ರಸ್ತೆ , ಚರಂಡಿ ರೋಡ್ಗಳು ಹಳ್ಳಿಗೆ ಸಂಪರ್ಕಿಸುವ ರೋಡ್ಗಳ ಒಟ್ಟು ಐದು ವರ್ಷಗಳಲ್ಲಿ ಎರಡು ವರ್ಷ ಕರೋನ ಸಮಯವನ್ನು ತೆಗೆದರೂ, ಒಟ್ಟು 985 ಕೋಟಿ ಅನುದಾನವನ್ನು ಹಿರಿಯೂರು ತಾಲೂಕಿಗೆ ತಂದಿರುತ್ತಾರೆ. 32 ಕೋಟಿ ರೂ ವೆಚ್ಚದಲ್ಲಿ ತಾಲೂಕಿನ ಎಲ್ಲಾ ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಮಾಡಿಸಿದ್ದಾರೆ.
28 ಕೋಟಿ ರೂ ವೆಚ್ಚದಲ್ಲಿ ತಾಲೂಕಿನಾದ್ಯಂತ ಶಾಲಾ ಕೊಠಡಿಗಳು ಹಾಗೂ ನೂತನ ಹಿರಿಯೂರು ನಗರದಲ್ಲಿ bEO ಆಫೀಸ್ ನಿರ್ಮಾಣ, ಭದ್ರಾ ಯೋಜನೆ ಅಡಿ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲು ತ್ವರಿತಗತಿಯಲ್ಲಿ ಕೆಲಸ ಮಾಡಿಸಿ ಭದ್ರೆಯಿಂದ ಒಟ್ಟು 17 ಪಾಯಿಂಟ್ 7 ಟಿಎಂಸಿ ನೀರನ್ನು ವಿವಾಣಿವಿಲಾಸ ಸಾಗರಕ್ಕೆ ತಂದಿರುವುದು.. ನೂರು ಸಂಘಗಳಿಗೆ ಎನ್ಆರ್ಎಂ ಯೋಜನೆ ಅಡಿ ತಲಾ ಒಂದು ಲಕ್ಷದಂತೆ ಸಹಾಯಧನ. ಇವೆಲ್ಲವುಗಳು ಕೂಡಾ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ ಹಿರಿಮೆ.
ಒಟ್ಟಾರೆ ಸ್ವಾರ್ಥ ಸಾಧನೆಗೆ ಅಧಿಕಾರದ ಚುಕ್ಕಾಣಿ ಹಿಡಿಯುವವರ ಮಧ್ಯೆ ಇಂತಹ ಅಪರೂಪದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಜನಪರ ಕಾರ್ಯದಲ್ಲಿ ತೊಡಗಿರುವುದು ನಿಜಕ್ಕೂ ಜನರಿಗೆ ಹಿರಿಯೂರು ಕ್ಷೇತ್ರದ ಜನರ ಸಂಪತ್ತು ಎಂದರೂ ತಪ್ಪಾಗಲಾರದು.
ಸಿದ್ದರಾಮಯ್ಯನವರನ್ನು ಹೊಡೆದು ಹಾಕುವುದಿರಲಿ, ತಾಕತ್ತಿದ್ದರೆ ಅವರನ್ನು ಮುಟ್ಟಿ ನೋಡಿ: ಪಿ.ಎಂ.ನರೇಂದ್ರಸ್ವಾಮಿ ಸವಾಲ್
ಮಂಜುನಾಥನ ದರ್ಶನಕ್ಕೆ ಪಾದಯಾತ್ರೆ ಕೈಗೊಳ್ಳುವ ಯಾತ್ರಿಗಳಿಗೆ ಅನ್ನದಾಸೋಹ ಏರ್ಪಡಿಸಿದ ಪ್ರಿಯಾ ಕೃಷ್ಣ