Chithradurga News:
ಜನರಿಗೆ ಭದ್ರತೆ ವಹಿಸುವ ಕಷ್ಟಗಳಿಗೆ ಧಾವಿಸುವ ಪೊಲೀಸರಿಗೆ ತಮ್ಮ ಪೊಲೀಸ್ ಠಾಣೆಗೆ ಜಲ ದಿಗ್ಬಂಧನ ಏರಿದಂತಾಗಿದೆ . ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು, ನಾಯಕನಹಟ್ಟಿ ಪೊಲೀಸ್ ಠಾಣೆ ಪರಿಸ್ಥಿತಿ ಇದು ಜನರು ತಮ್ಮ ಅಳಲನ್ನು ತೋಡಿಕೊಳ್ಳಲು ಪೊಲೀಸ್ ಠಾಣೆಗೆ ಈ ನೀರನ್ನೇ ದಾಟಿಕೊಂಡು ಮುಂದೆ ಹೋಗುವಂತ ಪರಿಸ್ಥಿತಿ ಎದುರಾಗಿದೆ ಇದೊಂದೇ ಭಾರಿ ಅಲ್ಲ ಕಳೆದ ವರ್ಷಗಳಿಂದಲೂ ಕೂಡ ಇದೇ ಪರಿಸ್ಥಿತಿ ಈ ಠಾಣೆಗೆ ಇದೆ ಅಲ್ಲಿನ ಸಿಬ್ಬಂದಿಗಳು ತಿಳಿಸುವ ಹಾಗೆ ಬಹಳ ಬಾರಿ ಕೂಡ ಮನವಿ ಮಾಡಿಕೊಂಡರು ಅಧಿಕಾರಿಗಳು ಇತ್ತ ಕಡೆ ಗಮನ ಹರಿಸ್ತಿಲ್ಲ ಮಳೆ ಬಂದಮೇಲೆ ಈ ಪರಿಸ್ಥಿತಿ ಇರುತ್ತೆ ಅಂತ ಸುಮ್ಮನಾಗುತ್ತಾರೆ ಈ ಮಳೆ ನೀರು ರಾಜ ಕಾಲವೇ ಮುಖಾಂತರ ಪೊಲೀಸ್ ಠಾಣೆ ಮುಂಭಾಗಕ್ಕೆ ಬಂದು ಸೇರುತ್ತದೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇದಕ್ಕೆ ಸೂಕ್ತವಾದ ಪರಿಹಾರವನ್ನು ಇದುವರೆಗೂ ಕೂಡ ಕಂಡುಕೊಂಡಿಲ್ಲ ಈ ಬಗ್ಗೆ ಠಾಣೆಯ ಅಧಿಕಾರಿಗಳನ್ನು ಕೇಳಿದಾಗ ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದ್ದಾರೆ ಎಂಬ ಮಾತುಗಳನ್ನು ಆಡಿ ಸುಮ್ಮನಾಗುತ್ತಾರೆ ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಹಾರವನ್ನು ಮಾಡಬೇಕೆಂದು ಸಾರ್ವಜನಿಕರ ಮನವಿಯಾಗಿದೆ.
ಬಾಗಲಕೋಟೆ: ಸೆ.7, 8ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ




