Sunday, September 8, 2024

Latest Posts

ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆ ಯಾವಾಗ ಸರಿಯಾಗುತ್ತೆ..?

- Advertisement -

ಕರ್ನಾಟಕ ಟಿವಿ ಚಿತ್ರದುರ್ಗ :  ಕೃಷಿ ಪಂಪ್ ಸೆಟ್ ಗಳಿಗೆ ಏಳು ತಾಸು ವಿದ್ಯುತ್ ಕೊಡಬೇಕು ಎಂಬುದು ಸರ್ಕಾರದ ಸೂಚನೆಯಿದೆ. ಆದ್ರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಕೇವಲ ಮೂರು ತಾಸು ವಿದ್ಯುತ್ ಕೊಡುತ್ತಿದ್ದಾರೆ ಎಂಬ ಬಗ್ಗೆ ದೂರು ಕೇಳಿ ಬಂದಿದೆ. ಓವರ್ ಲೋಡ್ ಕಾರಣದಿಂದ ತೊಂದರೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದಷ್ಟು ಬೇಗ ಸಮಸ್ಯೆ ಸರಿಪಡಿಸಿಕೊಳ್ಳು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಲಾಕ್ಡೌನ್‌ನಿಂದ ರೈತರಿಗಾಗಿರುವ ತೊಂದರೆ ಕೃಷಿ ಪರಿಸ್ಥಿತಿ ಅವಲೋಕಿಸುವ ನಿಟ್ಟಿನಲ್ಲಿ ಕಳೆದೊಂದು ವಾರಗಳಿಂದ ರಾಜ್ಯಾದ್ಯಂತ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಚಿವ ಬಿ.ಸಿ.ಪಾಟೀಲ್, ಗುರುವಾರ ಚಿತ್ರದುರ್ಗ ಜಿಲ್ಲೆಗೆ ಪ್ರವಾಸ ಕೈಗೊಂಡು ಇಲ್ಲಿನ ಜಿಲ್ಲಾ ಕೃಷಿ,ತೋಟಗಾರಿಕೆ, ಆರೋಗ್ಯ, ಪೊಲೀಸ್, ಜಿಲ್ಲಾಧಿಕಾರಿ ಸೇರಿದಂತೆ‌ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಪರಿಶೀಲನಾ‌ ಸಭೆ ನಡೆಸಿದರು.

ಬಳಿಕ ಮಾತನಾಡಿದ ಅವರು,ನಷ್ಟವಾಗಿರುವ ಬೆಳೆಗಳ ವಿವರವನ್ನು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಕಳಪೆ ತ್ತನೆ ಬೀಜ ಕೊಡುವುದು ರೈತರನ್ನು ಕೊಲೆ ಮಾಡಿದಂತೆ. ರೈತ ಒಮ್ಮೊಮ್ಮೆ ತನ್ನ ಪತ್ನಿಯ ಮಾಂಗಲ್ಯ ಸರವನ್ನು ಮಾರಾಟ ಮಾಡಿ ಬಿತ್ತನೆ ಬೀಜ ಕೊಂಡು ಬಿತ್ತನೆ ಮಾಡಿದ ಉದಾಹರಣೆಗಳು ಇವೆ. ದೇಶಕ್ಕೆ ಅನ್ನ ನೀಡುವ ರೈತನಿಗೆ ಅನ್ಯಾಯ ಆಗದಂತೆ ತಡೆಯಲು ಬಿತ್ತನೆ ಬೀಜ ಮಾರಾಟ ಮಾಡುವ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಬೇಕು. ಕಳಪೆ ಬೀಜ ಮತ್ತು ಕ್ರಿಮಿನಾಶಕ ಔಷಧಿ ಮಾರಾಟ ಮಾಡಿದರೆ ಅಂತವರ ಪರವಾನಗಿ ರದ್ದು ಮಾಡಿ, ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಪುನರ್‌ ಎಚ್ಚರಿಸಿದರು.

https://www.youtube.com/watch?v=J6T1BB274cs

ಪ್ರತಿಯೊಂದು ಜಿಲ್ಲೆಯ ಎಪಿಎಂಸಿಯಲ್ಲಿ ಶೀಥಲೀಕರಣ ಘಟಕ ತೆರೆಯಲು ಚಿಂತನೆ‌ ನಡೆಸಲಾಗಿದೆ. ಬೆಳೆಗಳಿಗೆ ದರ ಇಲ್ಲ ಎಂಬ ಕಾರಣಕ್ಕೆ ರೈತರು ಬೆಳೆ ನಾಶ ಮಾಡಬಾರದು.ಆತುರದ ನಿರ್ಧಾರ ತೆಗೆದುಕೊಳ್ಳದಂತೆ ರೈತರಲ್ಲಿ‌ ಮನವಿ ಮಾಡಿದರು. ಧಾರ್ಮಿಕ ಸಭೆ ಸಮಾರಂಭಗಳು ನಡೆಯದ ಕಾರಣ ಹೂವಿನ ಬೆಳೆಗಾರರು ನಷ್ಟಕ್ಕೊಳಗಾಗಿದ್ದಾರೆ.ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಪರಿಹಾರ ನೀಡುವ ಬಗ್ಗೆ ತೀರ್ಮಾನ ಮಾಡಲಾಗುವುದು.ಮುಂಗಾರು ಹಂಗಾಮು ಆರಂಭವಾಗಿದ್ದು, ರೈತ ಸಂಪರ್ಕ ಕೇಂದ್ರಗಳ ಬಳಿ ಬೀಜ ಗೊಬ್ಬರ ಪಡೆದುಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

ಕರ್ನಾಟಕ ಟಿವಿ, ಚಿತ್ರದುರ್ಗ

- Advertisement -

Latest Posts

Don't Miss