Monday, October 27, 2025

Latest Posts

ಚಿತ್ತಾಪುರ ಪಥಸಂಚಲನ ವಿಚಾರ ಅಕ್ಟೋಬರ್ 28ಕ್ಕೆ ಶಾಂತಿ ಸಭೆ, RSS ಸೇರಿ 10 ಸಂಘಟನೆಗಳಿಗೆ ನೋಟಿಸ್!

- Advertisement -

 

ಕಲಬುರಗಿ : ಶತಮಾನೋತ್ಸವ ಸಂಭ್ರಮಕ್ಕೆ ಪಥಸಂಚಲನ ಮಾಡೋದಾಗಿ ಹೇಳಿದೆ. ಸದ್ಯ ಕಲಬುರಗಿಯ ಚಿತ್ತಾಪುರದಲ್ಲಿ ನಡೆಯುವ ಈ ಪಥಸಂಚಲನ ಸಂಬಂಧ ಕೇಂದ್ರ ಹೈಕೋರ್ಟ್ ಕಟಕಟೆಯಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಆರ್‌ಎಸ್‌ಎಸ್ ಸೇರಿದಂತೆ 10 ಸಂಘಟನೆಗಳಿಗೆ ನೋಟಿಸ್ ಜಾರಿಗೊಳಿಸಿದ್ದು, ಶಾಂತಿ ಸಭೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದೆ. ಶಾಂತಿ ಸಭೆ ಅಕ್ಟೋಬರ್ 28 ರಂದು ಬೆಳಿಗ್ಗೆ 11.30ಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ.

ಜಿಲ್ಲಾ ಆಡಳಿತದ ಸೂಚನೆಯಂತೆ, ಪ್ರತಿ ಸಂಘಟನೆಯಿಂದ ಮೂವರು ಪ್ರತಿನಿಧಿಗಳು ಸಭೆಗೆ ಹಾಜರಾಗಿದ್ದು, ಲಿಖಿತ ಹೇಳಿಕೆ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ. ಈ ಸಭೆಯು ಪಥಸಂಚಲನವನ್ನು ಶಾಂತಿಯುತವಾಗಿ ಆಯೋಜಿಸಲು ಹಾಗೂ ಸಂಘಟನೆಗಳ ವಿಚಾರಗಳನ್ನು ಕೇಳಲು ಏರ್ಪಡಿಸಲಾಗಿದೆ.

ಸದ್ಯ, ರಾಜ್ಯದ ನಾನಾ ಭಾಗದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ಮಾತ್ರ ವಿಶೇಷ ಗಮನದ ಕೇಂದ್ರವಾಗಿದೆ. ಇದೀಗ ಈ ವಿಷಯದಲ್ಲಿ ಕಾನೂನಿನ ಪ್ರಕ್ರಿಯೆ ಆರಂಭವಾಗಿದ್ದು, ಹೈಕೋರ್ಟ್ ತೀರ್ಮಾನ ಏನಿರಬಹುದು ಅನ್ನೋದು ಈಗ ಕುತೂಹಲವಾಗಿದೆ.

ಇತ್ತ ಆರ್​​​ಎಸ್​​ಎಸ್​ ಮಾತ್ರ ಚಿತ್ತಾಪುರದಲ್ಲಿ ಪಥಸಂಚಲನ ಮಾಡೇ ಮಾಡ್ತೀವಿ ಅಂತಾ ಸೆಡ್ಡು ಹೊಡೆದಿದೆ. ನಿನ್ನೆಯಷ್ಟೇ ಕಲ್ಲಡ್ಕ ಪ್ರಭಾಕರ್ ಭಟ್ ಅಬ್ಬರಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟಿರುವ ಸಚಿವ ಪ್ರಿಯಾಂಕ್ ಖರ್ಗೆ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ಮಾಡಲಿ ನೋಡೋಣ. ಚಿತ್ತಾಪುರದಲ್ಲಿ ಪಥಸಂಚಲನಕ್ಕೆ 11 ಸಂಘಟನೆಗಳು ಅರ್ಜಿ ಹಾಕಿವೆ. ಕೋರ್ಟ್​ ತೀರ್ಮಾನ ಮಾಡುತ್ತೆ ಎಂದಿದ್ದರು.

ಸ್ನೇಹಭಾವಪೂರ್ವಕವಾಗಿ ಜಿಲ್ಲೆ ಮತ್ತು ರಾಜ್ಯದ ಶಾಂತಿ, ಸೌಹಾರ್ದತೆ ಕಾಪಾಡಲು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಸನ್ನದ್ಧರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೂ ಸಹಕಾರಿ ಮತ್ತು ಜವಾಬ್ದಾರಿಯುತ ವರ್ತನೆ ಕಾಯಲಾಗುತ್ತಿದೆ. ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹೈಕೋರ್ಟ್ ನಿರ್ಧಾರ ಹೊರಬರುವಾಗ, ಕಲಬುರಗಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶಾಂತಿಯುತ ಪರಿಸ್ಥಿತಿ ಕಾಪಾಡಲು ಎಲ್ಲರ ಸಹಕಾರ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss