Chocolate : ಮಾದಕ ವಸ್ತು ಮಿಶ್ರಿತ  ಚಾಕೊಲೇಟ್ ವಶಕ್ಕೆ….!

Manglore News : ಮಂಗಳೂರು ನಗರದ ಎರಡು ಕಡೆ ಮಾರಾಟ ಮಾಡಲಾಗುತ್ತಿದ್ದ ಸುಮಾರು 100 ಕೆಜಿಯಷ್ಟು ಮಾದಕ ವಸ್ತು ಮಿಶ್ರಿತ ಚಾಕೊಲೆಟ್‌ಗಳನ್ನು ಪಾಂಡೇಶ್ವರ ಪೊಲೀಸರು ಬುಧವಾರ ಜುಲೈ 20ಕ್ಕೆ  ವಶಪಡಿಸಿಕೊಂಡಿದ್ದಾರೆ.

ನಗರದ ರಥಬೀದಿಯಲ್ಲಿ ಮನೋಹರ್‌ ಶೇಟ್‌ ಮತ್ತು ನಗರದ ಫ‌ಳ್ನೀರ್‌ನ ಗೂಡಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಬೆಚನ್‌ ಸೋನ್ಕರ್‌ ಎಂಬಾತ ಮಾದಕ ವಸ್ತು ಮಿಶ್ರಿತ “ಬಾಂಗ್‌’ ಎಂಬ ಚಾಕೊಲೆಟ್‌ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಒಟ್ಟು ಸುಮಾರು 100 ಕೆಜಿ ಚಾಕೊಲೆಟ್‌ಗಳನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಚಾಕೊಲೆಟ್ ನ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಲಯಕ್ಕೆ ಕಳುಹಿಸಿದ್ದು, ಅದರ ವರದಿ ಆಧಾರದಲ್ಲಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವ  ನಿರ್ಧಾರ ಮಾಡಲಾಗುತ್ತದೆ ಎನ್ನಲಾಗಿದೆ.

Doctorate : ಕೆಮಿಸ್ಟ್ರಿಯಲ್ಲಿ ಡಾಕ್ಟರೇಟ್ ಪಡೆದ ದಿನಕೂಲಿ ಮಹಿಳೆ…!

Ginger: ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಕಳ್ಳತನ

cheetha: ಪ್ರಯಾಣಿಕನ ಕಾರಿಗೆ ಅಡ್ಡ ಬಂದ ಚಿರತೆ

About The Author