Saturday, August 9, 2025

Latest Posts

ಛೂ ಮಂತರ್” ಚಿತ್ರತಂಡದಿಂದ ಬಂತು ಸ್ಪೆಷಲ್ ಗ್ಲಿಂಪ್ಸ್ .

- Advertisement -

“ಛೂ ಮಂತರ್” ಚಿತ್ರತಂಡದಿಂದ ಬಂತು ಸ್ಪೆಷಲ್ ಗ್ಲಿಂಪ್ಸ್ .

ತಮ್ಮ ಅಮೋಘ ಅಭಿನಯದ ಮೂಲಕ ಜನಮನ ಗೆದ್ದಿರುವ ನಟ ಶರಣ್ ಅವರಿಗೆ ಹುಟ್ಟುಹಬ್ಬದ ಸಡಗರ. ಪ್ರಸ್ತುತ ಶರಣ್ ನಾಯಕರಾಗಿ ನಟಿಸಿರುವ “ಛೂ ಮಂತರ್” ಚಿತ್ರತಂಡದಿಂದ ನಾಯಕ ಶರಣ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಸ್ಪೆಷಲ್ ಗ್ಲಿಂಪ್ಸ್(ಟೀಸರ್) ಬಿಡುಗಡೆಯಾಗಿದೆ. ಶರಣ್ ಮೊದಲ ಬಾರಿಗೆ ಸಂಪೂರ್ಣ ಹಾರಾರ್ ಕಥಾಹಂದರ ಹೊಂದಿರುವ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ವಿಷ್ಯುವಲ್ಸ್ ನೋಡಿದರೆ, ಹಾಲಿವುಡ್ ಚಿತ್ರಗಳು ನೆನಪಾಗುತ್ತದೆ. ಟೀಸರ್ ನಲ್ಲೇ ಉತ್ತರ ಕಾಂಡವನ್ನು ಅನುಪ್ ಕಟ್ಟುಕರನ್ ಅದ್ಭುತವಾಗಿ ತೋರಿದ್ದಾರೆ. ಶರಣ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿರುವ ಟೀಸರ್ ಎಲ್ಲರ ಗಮನ ಸೆಳೆಯುತ್ತಿದೆ. ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.

ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ. “ಕರ್ವ” ಖ್ಯಾತಿಯ ನವನೀತ್ ನಿರ್ದೇಶಿಸಿದ್ದಾರೆ.ಶರಣ್, ಮೇಘನಾ ಗಾಂವ್ಕರ್, ಚಿಕ್ಕಣ್ಣ, ಅದಿತಿ ಪ್ರಭುದೇವ ಹಾಗೂ ಪ್ರಭು ಮುಂಡ್ಕರ್ ಚಿತ್ರದ ಪ್ರಮುಖಪಾತ್ರದಲ್ಲಿದ್ದಾರೆ.

- Advertisement -

Latest Posts

Don't Miss