Friday, November 28, 2025

Latest Posts

‘ಚೌಕ’ ಪಿಲ್ಲರ್ ತಯಾರಿಸಿ ‘ಕಾಂತಾರ’ ಟ್ರೇಲರ್ ರಿಲೀಸ್‌ಗೆ ರೆಡಿ!

- Advertisement -

ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ ಬಹುನಿರೀಕ್ಷಿತ ಕಾಂತಾರ ಚಾಪ್ಟರ್-1′ ಟ್ರೇಲರ್ 22 ಸೆಪ್ಟೆಂಬರ್ 2025ರಂದು ಬಿಡುಗಡೆ ಆಗಲಿರುವುದು ಗೊತ್ತೇ ಇದೆ. ಈ ಟ್ರೈಲರ್ ಲಾಂಚ್ ಸಾಕಷ್ಟು ವಿಶೇಷವಾಗಿ, ವಿಭಿನ್ನವಾಗಿ ಮೂಡಿಬರಲಿದೆಯಂತೆ. ಕಾಂತಾರ ಪ್ರೀಕ್ವೆಲ್ 22 ಸೆಪ್ಟೆಂಬರ್‌ 2025 ರಂದು ನಡೆಯಲಿದೆ.

ಹಿಂದಿ ಭಾಷೆಯ ಟ್ರೈಲರ್‌ ಬಿಡುಗಡೆಯನ್ನು ಬಾಲಿವುಡ್ ಹ್ಯಾಂಡ್‌ಸಮ್ ನಟ ಹೃತಿಕ್ ರೋಶನ್ ಮಾಡಲಿದ್ದಾರೆ. ಮಲಯಾಳಂ ಟ್ರೈಲರ್‌ ನಟ ಪ್ರಥ್ವಿರಾಜ್ ಸುಕುಮಾರ್ ಮಾಡಲಿದ್ದಾರೆ. ತಮಿಳು ಟ್ರೈಲರ್ ನಟ ಶಿವಕಾರ್ತಿಕೇಯನ್ ಹಾಗೂ ತೆಲುಗು ವರ್ಷನ್ ಟ್ರೈಲರ್‌ ಅನ್ನು ನಟ ಪ್ರಭಾಸ್ ಮಾಡಲಿದ್ದಾರೆ. ಕನ್ನಡದ ಟ್ರೈಲರ್ ರಿಲೀಸ್ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ.

ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣದ ಈ ಸಿನಿಮಾ ಭಾರೀ ಬಜೆಟ್ ಹೊಂದಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ನಾಯಕಿ ನಟಿ ರುಕ್ಮಿಣಿ ವಸಂತ್ ಅವರು ಕೂಡ ಕಾಂತಾರ ಪ್ರೀಕ್ವೆಲ್‌ನಲ್ಲಿ ನಟಿಸಿದ್ದಾರೆ ಎಂಬ ಮಾಹಿತಿಯಿದೆ. ಉಳಿದಂತೆ, ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ತಾರಾಗಣವೇ ಹೆಚ್ಚುಕಡಿಮೆ ಈ ಚಿತ್ರದಲ್ಲಿ ಕೂಡ ಇದೆ ಎನ್ನಲಾಗಿದೆ. ಆದರೆ, ತಾರಾಬಳಗ ಸೇರಿದಂತೆ ಹೆಚ್ಚಿನ ಯಾವುದೇ ಮಾಹಿತಿಯನ್ನು ರಿಷಬ್ ಶೆಟ್ಟಿ ಸಿನಿಮಾ ತಂಡ ಬಹಿರಂಗ ಪಡಿಸಿಲ್ಲ.

- Advertisement -

Latest Posts

Don't Miss