Saturday, July 27, 2024

Latest Posts

ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಡಿ. 22 ರಿಂದ ಕೇರಳಕ್ಕೆ 51 ರೈಲುಗಳ ಸಂಚಾರ

- Advertisement -

ತಿರುವನಂತಪುರಂ: ಕ್ರಿಸ್‌ಮಸ್‌ ಹಬ್ಬದ ಸಡಗರ ಜೋರಾಗಿದ್ದು, ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಇದೆ. ಇನ್ನು ಹಬ್ಬ ಸಮೀಪಿಸುತ್ತಿದ್ದಂತೆ, ಊರುಗಳತ್ತ ಹೊರಡುವ ಪ್ರಯಾಣಿಕರಿಗೆ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ ಭಾರತೀಯ ರೈಲ್ವೆ ಇಲಾಖೆ 51 ರೈಲುಗಳನ್ನು ಘೋಷಿಸಿದೆ. ಹೊಸವರ್ಷಕ್ಕೆ ಬೇರೆ ಕಡೆಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವವರ ಸಂಖ್ಯೆಯೂ ಕೂಡ ಹೆಚ್ಚುತ್ತಿದೆ. ಅದರಲ್ಲೂ ಹೆಚ್ಚಾಗಿ ಕೇರಳದ ಕಡೆಗೆ ಹೋಗುವವರೇ ಹೆಚ್ಚಾಗಿದ್ದು, ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಡಿಸೆಂಬರ್ 22 ರಿಂದ ಜನವರಿ 2, 2023ರವರೆಗೂ 51 ರೈಲುಗಳು ಸಂಚರಿಸಲಿವೆ ಎಂದು ತಿಳಿಸಿದೆ.

ರಸ್ತೆ ಅಗಲೀಕರಣ ಹಿನ್ನೆಲೆ ಹುಬ್ಬಳ್ಳಿಯಲ್ಲಿ ದರ್ಗಾ ಕಟ್ಟಡ ತೆರವು

ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಕೇರಳದ ವಿವಿಧ ಸ್ಥಳಗಳಿಗೆ 17 ವಿಶೇಷ ರೈಲು ಸೇವೆಗಳನ್ನು ದಕ್ಷಿಣ ರೈಲ್ವೆ ಘೋಷಿಸಿದೆ. ಸೂಚಿಸಲಾದ ವಿಶೇಷ ರೈಲುಗಳ ಹೊರತಾಗಿ, ಇತರ ವಲಯ ರೈಲ್ವೆಗಳು ಕೇರಳಕ್ಕೆ ಒಟ್ಟು 34 ರೈಲುಗಳ ಸೇವೆಗಳನ್ನು ನೀಡುವುದಾಗಿ ಸೂಚಿಸಿವೆ. ದಕ್ಷಿಣ ಮಧ್ಯ ರೈಲ್ವೆಯಿಂದ 22 ವಿಶೇಷ ರೈಲುಗಳು, ನೈಋತ್ಯ ರೈಲ್ವೆಯಿಂದ 8 ವಿಶೇಷ ರೈಲುಗಳು ಮತ್ತು ಪೂರ್ವ ಕರಾವಳಿ ರೈಲ್ವೆಯಿಂದ ನಾಲ್ಕು ವಿಶೇಷ ರೈಲುಗಳ ಸೇವೆಯನ್ನು ನೀಡುವುದಾಗಿ ತಿಳಿಸಿವೆ.

ರಸ್ತೆ ಅಗಲೀಕರಣ ಹಿನ್ನೆಲೆ ಹುಬ್ಬಳ್ಳಿಯಲ್ಲಿ ದರ್ಗಾ ಕಟ್ಟಡ ತೆರವು

ಕೊರೊನಾದಿಂದ ಪಾರಾಗಲು ಕೇಂದ್ರ ಸರ್ಕಾರ ಸಿದ್ಧತೆ : ಪರಿಸ್ಥಿಯ ಕುರಿತು ಇಂದು ಪರಿಶೀಲನಾ ಸಭೆ

- Advertisement -

Latest Posts

Don't Miss