BREAKING NEWS: PSI ನೇಮಕಾತಿ ಅಕ್ರಮ: ಮಾಜಿ ಸಚಿವ ಪ್ರಿಯಾಂಕ್ ಖರ್ಗೆಗೆ ಸಿಐಡಿಯಿಂದ ಮತ್ತೊಂದು ನೋಟಿಸ್

ಬೆಂಗಳೂರು: ಮಾಜಿ ಸಚಿವ ಪ್ರಿಯಾಂಕ್ ಖರ್ಗೆಗೆ ಸಿಐಡಿ ಪೊಲೀಸರು, ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಸಂಬಂಧ ತಮ್ಮ ಬಳಿಯಲ್ಲಿರುವಂತ ದಾಖಲೆಗಳನ್ನು ಸಲ್ಲಿಸುವಂತೆ ಈಗಾಗಲೇ ಎರಡು ಬಾರಿ ನೋಟಿಸ್ ನೀಡಿತ್ತು. 2ನೇ ನೋಟಿಸ್ ಗೆ ಲಿಖಿತ ಉತ್ತರ ನೀಡಿದ್ದರು. ಆದ್ರೇ.. ಇದರಲ್ಲಿ ಸರಿಯಾದ ಮಾಹಿತಿ ನೀಡಿಲ್ಲ ಎಂಬುದಾಗಿ ಸಿಐಡಿ ಪೊಲೀಸರು ಈಗ ಮತ್ತೊಂದು ನೋಟಿಸ್ ಜಾರಿಗೊಳಿಸಿ, ದಾಖಲೆ ಸಲ್ಲಿಸುವಂತೆ ಸೂಚಿಸಿದ್ದಾರೆ.

545 ಪಿಎಸ್ಐ ನೇಮಕಾತಿ ಅಕ್ರಮದ ತನಿಖೆ ನಡೆಸುತ್ತಿರುವಂತ ಸಹಾಯ ತನಿಖಾಧಿಕಾರಿ ಈ ನೋಟಿಸ್ ಜಾರಿಗೊಳಿಸಿದ್ದು, ನೀವು ನೀಡಿರುವಂತ ಉತ್ತರದಲ್ಲಿ ಕೆಲ ಸಂಬಂಧವಿಲ್ಲದ ಸಂಗತಿಗಳಿದ್ದಾವೆ. ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ವಿಷಯಗಳು, ಬಿಡುಗಡೆ ಮಾಡಿದಂತ ಆಡಿಯೋ ಕ್ಲಿಬ್ ಬಗ್ಗೆ ನಾವು ಗಮನಿಸಿದ್ದೇವೆ ಎಂದಿದ್ದಾರೆ.

ನಿಮ್ಮ ಬಳಿಯಲ್ಲಿರುವಂತ ಸಂಬಂಧ ಪಟ್ಟಂತ ದಾಖಲೆಗಳು, ಸಾಕ್ಷ್ಯಗಳನ್ನು ಈ ನೋಟಿಸ್ ನೀಡಿದಂತ ಎರಡು ದಿನಗಳೊಳಗಾಗಿ ತನಿಖಾಧಿಕಾರಿಯ ಮುಂದೆ ಹಾಜರುಪಡಿಸುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.

About The Author