545 ಪಿಎಸ್ಐ ಪರೀಕ್ಷೆ ಅಕ್ರಮದ ಬಗ್ಗೆ ಸಿಐಡಿಯಿಂದ ತನಿಖೆ – ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ಇತ್ತೀಚಿಗೆ ಕರೆಯಲಾಗಿದ್ದಂತ 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮದ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.

ಇಂದು ಈ ಬಗ್ಗೆ ಮಾತನಾಡಿ ಮಾಹಿತಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆ ಸಂಬಂಧ ಈಗಾಗಲೇ ತಾತ್ಕಾಲಿಕ ನೇರ ನೇಮಕಾತಿ ಪಟ್ಟಿ ಬಿಡುಗಡೆ ಆಗಿದೆ. ಈ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರೋದಾಗಿ ಸಾರ್ವಜನಿಕರಿಂದ ದೂರು ಬಂದಿತ್ತು. ಹೀಗಾಗಿ ಸಿಐಡಿ ತನಿಖೆಗೆ ಹಾಕಿದ್ದೇವೆ ಎಂದು ತಿಳಿಸಿದರು.

ಈ ಪ್ರಕರಣ ಸಂಬಂಧ ಈಗಾಗಲೇ ಕಲಬುರ್ಗಿ ಚೌಕ್ ಠಾಣೆಯಲ್ಲಿ ಏಪ್ರಿಲ್ 9ರಂದು ಎಫ್ಐಆರ್ ದಾಖಲಾಗಿದೆ. ಜ್ಞಾನ ಜ್ಯೋತಿ ಶಾಲೆಯಲ್ಲಿ ನಡೆದಂತ ಪರೀಕ್ಷೆ ಅಕ್ರಮ ಸಂಬಂಧ ದಾಖಲಾದಂತ ಕೇಸ್ ಇದಾಗಿದ್ದು, ಸಿಐಡಿ ತಂಡವು ಅಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ ಎಂದರು.

ಪಿಎಸ್ಐ ಅಕ್ರಮ ಪರೀಕ್ಷೆಯ ಬಗ್ಗೆ ನಮಗೆ 7ನೇ ತಾರಿಕಿನಂದು ಮಾಹಿತಿ ಸಿಕ್ಕಿತ್ತು. ಈ ಸಂಬಂಧ ವಿರೇಶ್ ಎಂಬ ಅಭ್ಯರ್ಥಿಯನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ದೊರೆತಿರುವಂತ ಓ ಎಂ ಆರ್ ಶೀಟ್ ಹಾಗೂ ಪರೀಕ್ಷೆಯ ಒರಿಜಿನಲ್ ಶೀಟ್ ಗೂ ವ್ಯತಾಸವೇನು ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. 21 ಮಾರ್ಕ್ಸ್ ಗೆ ಉತ್ತರಿಸದೇ ಇದ್ದರೂ ಆತನಿಗೆ 100 ಅಂಕ ಬಂದಿದ್ದೇಗೆ ಎನ್ನುವ ಸತ್ಯಾಸತ್ಯತೆ ಬಗ್ಗೆಯೂ ವಿಚಾರಣೆಯಿಂದ ಮಾಹಿತಿ ಹೊರಬೀಳಲಿದೆ ಎಂದರು.

About The Author