ಸಿನಿಮಾ ಅಂದ್ರೆ ಪ್ರತಿಭೆ ಪ್ರದರ್ಶನ: ದೈವದ ಅನುಕರಣೆ ಸಲ್ಲದು!

ಇತ್ತೀಚೆಗೆ ಗೋವಾದ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ ಸಮಾರೋಪ ವೇದಿಕೆಯಲ್ಲಿ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜ್ಯದ ಚಿತ್ರಪರಿಸರದಲ್ಲಿ ಚರ್ಚೆ ಏರ್ಪಡಿಸಿದೆ. ‘ಕಾಂತಾರ’ ಚಿತ್ರ ಮತ್ತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಸನ್ಮಾನ ಮಾಡುವ ಸಂದರ್ಭದಲ್ಲಿ, ಬಾಲಿವುಡ್ ನಟ ರಣವೀರ್ ಸಿಂಗ್ ವೇದಿಕೆಯಲ್ಲಿ ದೈವದ ಅನುಕರಣೆ ಮಾಡಿದ್ದರು.

ಈ ಸಂದರ್ಭ ವೇದಿಕೆಯ ಮುಂಭಾಗ ಕುಳಿತಿದ್ದ ರಿಷಬ್ ಶೆಟ್ಟಿಯವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣ ಮತ್ತು ಸಾರ್ವಜನಿಕ ವಲಯದಲ್ಲಿ ಬಾಲಿವುಡ್ ನಟನ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ರಣವೀರ್ ಸಿಂಗ್ ನಂತರ ಕ್ಷಮೆ ಕೇಳಿದ್ದರು.

ಇದೀಗ ಜಾಲತಾಣದಲ್ಲಿ ಪ್ರಚಾರಕ್ಕಾಗಿ ರೀಲ್ಸ್, ವಿಡಿಯೋಗಳು, ನೃತ್ಯ ಹಾಗೂ ವೇದಿಕೆಯ ಕಾರ್ಯಕ್ರಮಗಳಲ್ಲಿ ದೈವದ ವೇಷ ಧರಿಸುವುದು ಹೆಚ್ಚಾಗುತ್ತಿದೆ. ಈ ರೀತಿಯ ಪ್ರದರ್ಶನ ಮತ್ತು ಅನುಕರಣೆಯನ್ನು ದೈವಾರಾಧಕರು ಹಾಗೂ ಭಕ್ತರು ನಿರಂತರವಾಗಿ ವಿರೋಧಿಸುತ್ತಿದ್ದಾರೆ. ದೈವದ ಅನುಕರಣೆ ಮಾಡುವುದು ಸರಿಯಲ್ಲ.

ಸಿನಿಮಾ ಎಂದರೆ ಪ್ರತಿಭೆಯ ಪ್ರದರ್ಶನ, ದೈವಗಳು ನಮಗೆ ತುಂಬಾ ಸೂಕ್ಷ್ಮ ಹಾಗೂ ಪವಿತ್ರವಾದುವು. ಯಾವ ವೇದಿಕೆಯಾಗಲಿ, ದೈವದ ಅನುಕರಣೆ ಮಾಡಬೇಡಿ. ದೈವಾರಾಧನೆಯು ಭಾವನಾತ್ಮಕವಾಗಿ ನಮ್ಮಲ್ಲಿ ಬೇರೊರಿದೆ ಎಂದು ರಿಷಬ್ ಶೆಟ್ಟಿ ತಾವು ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ. ಇದರ ಮೂಲಕ ಸಮಾಜಿಕ ಜಾಗೃತಿ ಮತ್ತು ಸಾಂಸ್ಕೃತಿಕ ಭಾವನೆಗಳ ಮಾನ್ಯತೆ ಕುರಿತಾಗಿ ಚರ್ಚೆ ಆರಂಭವಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author