hubballi news express:
ಹುಬ್ಬಳ್ಳಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪ್ರಲ್ಹಾದ್ ಜೋಶಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದದ್ದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಜೊತೆಗೆ ಸಾವರ್ಕರ್ ಭಾವಚಿತ್ರವನ್ನು ಮುಸ್ಲಿಂ ಏರಿಯಾದಲ್ಲಿ ಏಕೆ ಹಾಕಬೇಕಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆಯನ್ನ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಂಡಿಸಿದ್ದಾರೆ.
“ಸಾವರ್ಕರ್ ಗುರುತಿಸಲ್ಪಡುವ ಭಾರತದ ಸುಪುತ್ರ” ಎಂದು ಸ್ವತಃ ಇಂದಿರಾಗಾಂಧಿ ಅವರು ಹೇಳಿದ್ದರು. ಮಹಾತ್ಮ ಗಾಂಧಿಜೀ ಸೇರಿದಂತೆ ಅಂದಿನ ಕಾಂಗ್ರೆಸ್ ನಾಯಕರು ಸಾವರ್ಕರ್ ಬಿಡುಗಡೆಗೆ ಬ್ರಿಟೀಷ್ ಸರ್ಕಾರಕ್ಕೆ ಆಗ್ರಹಿಸಿದ್ದರು. ಅವರೆಲ್ಲ ಒರಿಜಿನಲ್ ಕಾಂಗ್ರೆಸಿಗರು. ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಸಾವರ್ಕರ್ ಅವರ ಹೋರಾಟ, ವ್ಯಕ್ತಿತ್ವಕ್ಕೆ ಗೌರವ ಕೊಡುತ್ತಿದ್ದರು. ಈಗಿರುವವರು ನಕಲಿ ಕಾಂಗ್ರೆಸಿಗರು ಇವರೆಲ್ಲಾ ಡೂಬ್ಲಿಕೇಟ್. ಇವರು ಸಾವರ್ಕರ್ ವಿರುದ್ಧ ಮಾತನಾಡುತ್ತಿದ್ದಾರೆ. ಇವರು ಒರಿಜಿನಲ್ ಕಾಂಗ್ರೆಸಿಗರಲ್ಲ ಎಂದು ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
“ನಿಮ್ಮ ಕಾರ್ಯಕರ್ತರನ್ನು ನಿಯಂತ್ರಣದಲ್ಲಿಟ್ಟರೆ ಸರಿ…” ಬಿಜೆಪಿಗೆ ಡಿಕೆಶಿ ಎಚ್ಚರಿಕೆ
ನಾವು ಶಶಿಕಲಾ ಜೊಲ್ಲೆಗೆ ಹುಟ್ಟಿದವರಲ್ಲ: ಫೇಸ್ ಬುಕ್ ಲೈವ್ ನಲ್ಲಿ ನಲಪಾಡ್ ವಿವಾದಾತ್ಮಕ ಹೇಳಿಕೆ
ಸಿದ್ದರಾಮಯ್ಯನವರಿಗೆ ಹೆಚ್ಚಿನ ಭದ್ರತೆ ನೀಡುವಂತೆ ಯತೀಂದ್ರ ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯ