Saturday, June 21, 2025

Latest Posts

ಕಿಮ್ಸ್ ನಲ್ಲಿ ಸಿಟಿ ಸ್ಕ್ಯಾನ್ ಬಂದ್: ದುರಸ್ತಿ ಕಾರ್ಯ ಕೈಗೊಳ್ಳದ ಆಡಳಿತ ಮಂಡಳಿ..!

- Advertisement -

Hubli News: ಹುಬ್ಬಳ್ಳಿ: ಬಡವರ ಸಂಜೀವಿನಿಯಲ್ಲಿಯೇ ಬಡವರಿಗೆ ಸರಿಯಾಗಿ ಸಿಗುತ್ತಿಲ್ಲ ಚಿಕಿತ್ಸೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಬಂದ್ ಆಗಿದ್ದರೂ ಇದುವರೆಗೂ ದುರಸ್ತಿ ಕಾರ್ಯ ನಡೆದಿಲ್ಲ. ಕಿಮ್ಸ್ ಸೇವೆ ನಂಬಿಕೊಂಡಿದ್ದವರಿಗೆ ಈಗ ನಿರಾಸೆಯಾದಂತಾಗಿದೆ.

ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಹುಟ್ಟಿಕೊಳ್ಳುತ್ತಲೇ ಇವೆ. ಕಿಮ್ಸ್ ಆಸ್ಪತ್ರೆಯಲ್ಲಿ ಕಳೆದೆರಡೂ ತಿಂಗಳಿಂದ ಸಿಟಿ ಸ್ಕ್ಯಾನ್ ಕ್ಲೋಸ್ ಆಗಿದ್ದು, ಬಡ ರೋಗಿಗಳಿಗೆ ಖಾಸಗಿ ಸ್ಕ್ಯಾನ್‌ಗೆ ಹೋಗಿ ಎನ್ನುತ್ತಿದ್ದಾರೆ ಕಿಮ್ಸ್ ಆಡಳಿತ ಮಂಡಳಿ.  ಸಿಟಿ ಸ್ಕ್ಯಾನ್‌ ಮಷಿನ್‌ಗಳು ಕೆಟ್ಟು ನಿಂತರು ಅವರಗಳನ್ನ ರಿಪೇರಿ ಮಾಡುವ ಗೋಜಿಗೆ ಹೋಗಿಲ್ಲ ಕಿಮ್ಸ್. HITACHI 128 SLICE ಸಿಟಿ ಸ್ಕ್ಯಾನ್ ಮಷಿನ್ ಕೆಟ್ಟು ನಿಂತರೇ GE 16 SLICE ಸಿಟಿ ಸ್ಕ್ಯಾನ್ ಮಷಿನ್ ಕಳೆದ ಒಂದು ವಾರದಿಂದ ಕೆಲಸ ಮಾಡುತ್ತಿಲ್ಲ. ಎರಡೂ ಸಿಟಿ ಸ್ಕ್ಯಾನ್ ಮಷಿನ್‌ಗಳು ಕೆಟ್ಟ ನಿಂತರು ಅವುಗಳನ್ನು ರಿಪೇರಿ ಮಾಡದೆ ಬಡವರ ಜೀವನದ ಜೊತೆಗೆ ಕಿಮ್ಸ್ ಚೆಲ್ಲಾಟವಾಡುತ್ತಿದೆ. ಇನ್ನೊಂದು ಕಡೆ ಎಮ್‌ಆರ್‌ಐ ಸ್ಕ್ಯಾನ್ ಮಾಡಿಸಿಕೊಳ್ಳಬೇಕಾದ್ರೆ 20 ದಿನ ಕಾಯಬೇಕು. ಅಷ್ಟರಲ್ಲಿ ಏನಾದ್ರೂ ಅನಾಹುತ ಆದ್ರೆ ದೇವರೇ ಗತಿ. ಹೀಗಿದ್ದರೂ ಎಚ್ಚೆತ್ತುಕೊಂಡಿಲ್ಲ ಕಿಮ್ಸ್‌ನ ಕೆಲ ವೈದ್ಯರು ಹಾಗೂ ಕಿಮ್ಸ ಆಡಳಿತ ಮಂಡಳಿ.

ಬರೊಬ್ಬೊರಿ 12.5 ಕೋಟಿ ಖರ್ಚು ಮಾಡಿ ಕಿಮ್ಸ್‌‌ನಲ್ಲಿ ಎಮ್‌ಆರ್‌ಐ ಸ್ಕ್ಯಾನ್ ಮಷಿನ್ ಅಳವಡಿಕೆ ಮಾಡಲಾಗಿದೆ. ಇದೇ ಎಮ್‌ಆರ್‌ಐ ಮಷಿನ್‌ನಲ್ಲಿ ಸ್ಕ್ಯಾನ್ ಆಗಬೇಕಾದ್ರೇ 20 ದಿನ ಕಾಯಬೇಕು. ದೇಹದಲ್ಲಿ ಅನಾರೋಗ್ಯ ಕಂಡು ಬಂದ್ರೆ ಎಮ್‌ಆರ್‌ಐ ಸ್ಕ್ಯಾನ್ ಮಾಡಿಸಿ ಎಂದು ವೈದ್ಯರು ಹೇಳುತ್ತಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಸ್ಕ್ಯಾನ್ ಮಾಡಿಸಿಕೊಳ್ಳಲು ಹೋದ್ರೆ 20 ದಿನ ಬಿಟ್ಟು ಬನ್ನಿ ಎಂದು ಹೇಳುವ ಸಿಬ್ಬಂದಿಗಳು, ಇಪ್ಪತ್ತು ದಿನ ಬಿಟ್ಟ ಬಂದ್ರೆ ನಿಮ್ಮ ಸರದಿ ಬರುತ್ತದೆ, ಅವಾಗ ಬನ್ನಿ ಎಂದು ಉಡಾಪೆ ಉತ್ತರ ನೀಡುತ್ತಿದ್ದಾರೆ. ಇದರಿಂದಾಗಿ ಯಾವುದೇ ಸ್ಕ್ಯಾನ್ ಮಾಡಿಸಿಕೊಳ್ಳಲು ರೋಗಿಗಳು ಪರದಾಟ ನಡೆಸುವಂತಾಗಿದೆ. ಈ ಬಗ್ಗೆ ಕಿಮ್ಸ್ ನಿರ್ದೇಶಕರ ಉತ್ತರ ಮಾತ್ರ ಹೀಗಿದೆ.

ಒಟ್ಟಿನಲ್ಲಿ ಕಿಮ್ಸ್ ನೆಚ್ಚಿಕೊಂಡು ಬರುವ ಬಡವರು, ಒಂದಿಲ್ಲೊಂದು ಸಮಸ್ಯೆ ಅನುಭವಿಸುತ್ತಲೇ ಇದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ಕ್ರಮಗಳನ್ನು ಜರುಗಿಸಿ ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡಬೇಕಿದೆ.

ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

- Advertisement -

Latest Posts

Don't Miss