ಆರ್ಆರ್ಆರ್ ಸಿನಿಮಾ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರದ ಸ್ಕ್ರೀನ್ ಪ್ಲೇ ಬಗ್ಗೆ ಎಲ್ಲರೂ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟ- ನಟಿ ಬಂದ್ರೂ ಕೂಡ ಇದು ಬಾಹುಬಲಿಯ ರೇಂಜಿಗೆ ಇರಲಿಲ್ಲ. ಆದ್ರೂ ಸಿನಿಮಾ ಅಭಿಮಾನಿಗಳಿಗೆ ಇಷ್ಟವಾಗಿದೆ. ಆದ್ರೆ ಇದರಲ್ಲಿ ಅಭಿನಯಿಸಿರುವ ಆಲಿಯಾ ಭಟ್ಗೆ ಮಾತ್ರ ರಾಜಮೌಳಿ ಬಗ್ಗೆ ಕೋಪ ಬಂದಿದೆ. ಹಾಗಾಗಿ ಇನ್ಸ್ಟಾಗ್ರಾಮ್ನಲ್ಲಿ ರಾಜಮೌಳಿಯನ್ನ ಅನ್ಫಾಲೋ ಮಾಡುವ ಮೂಲಕ ಈ ಅಸಮಾಧಾನವನ್ನ ಹೊರಹಾಕಿದ್ದಾರೆ ಆಲಿಯಾ. ಅಷ್ಟೇ ಅಲ್ಲದೇ, ಚಿತ್ರದ ಪ್ರಮೋಷನ್ಗಾಗಿ ಅಪ್ಲೋಡ್ ಮಾಡಿದ್ದ ಕೆಲ ಪೋಸ್ಟ್ ಗಳನ್ನ ಕೂಡ ಆಲಿಯಾ ಡಿಲೀಟ್ ಮಾಡಿದ್ದಾರೆ.
ಇನ್ನು ಆಲಿಯಾ ಅಸಮಾಧಾನಕ್ಕೆ ಕಾರಣವೇನಂದ್ರೆ, ಆಕೆಯನ್ನ ಪರದೆ ಮೇಲೆ ಕೆಲವು ನಿಮಿಷಗಳ ಕಾಲವಷ್ಟೇ ತೋರಿಸಲಾಗಿದೆ. ಆಕೆ ಈ ಬಗ್ಗೆ ತುಂಬಾ ನಿರೀಕ್ಷೆಯಿಂದ ಇದ್ದು, ಸಿನಿಮಾ ನೋಡಿದ ಬಳಿಕ ನಿರಾಶರಾಗಿದ್ದಾರೆ. ಸಿನಿಮಾ ರಿಲೀಸ್ಗೂ ಮುನ್ನ ಪ್ರಮೋಷನ್ಗೆ ಬರುತ್ತಿದ್ದ ಆಲಿಯಾ, ಸಿನಿಮಾ ರಿಲೀಸ್ ಬಳಿಕ, ಕೆಲವೇ ಕೆಲವು ವೇದಿಕೆಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ರಾಮ್ಚರಣ ಮತ್ತು ಜೂ. ಎನ್ಟಿಆರ್ ಅವರನ್ನ ಮಾತ್ರ ಫಾಲೋ ಮಾಡುತ್ತಿರುವ ಆಲಿಯಾ, ಈ ಸಿನಿಮಾದ ಕೆಲ ಪೋಸ್ಟ್ಗಳನ್ನ ತಮ್ಮ ಇನ್ಸ್ಚಾ ಖಾತೆಯಿಂದ ಡಿಲೀಟ್ ಮಾಡಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ನೆಟ್ಟಿಗರು ಆಲಿಯಾಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಆಲಿಯಾ ಇನ್ಸ್ಟಾ ಅಕೌಂಟ್ನಲ್ಲಿ RRR ಸಿನಿಮಾ ಪೋಸ್ಟರ್ ಹುಡುಕಿ ಕಾಮೆಂಟ್ ಮಾಡಿರುವ ನೆಟ್ಟಿಗರು, ರಾಜಮೌಳಿ ಸಿನಿಮಾದಲ್ಲಿ ಅಭಿನಯಿಸೋಕ್ಕೆ ನಟ ನಟಿಯರು ಲೈನ್ನಲ್ಲಿ ನಿಂತಿರ್ತಾರೆ, ಅಂಥದ್ರಲ್ಲಿ ನಿನಗೆ ಇಷ್ಟು ಒಳ್ಳೆ ಅವಕಾಶ ಸಿಕ್ಕಿತ್ತು. ಅದಕ್ಕೆ ತೃಪ್ತಿ ಪಡೋದು ಬಿಟ್ಟು ಅಹಂಕಾರ ತೋರಿಸಿದ್ದಿಯಾ ಎಂದು ಒಬ್ಬರು ಹೇಳಿದ್ದಾರೆ.
ಅಲ್ಲದೇ, ನಿನಗಿಂತ ಕತ್ರೀನಾ ಕೈಫ್ ಬೆಸ್ಟ್. ಅವಳಿಗೆ ಎಷ್ಟೋ ಸಿನಿಮಾದಲ್ಲಿ ಕಡಿಮೆ ಸಮಯದ ಅಭಿನಯ ಸಿಕ್ಕಿದೆ. ಆದ್ರೆ ಎಲ್ಲ ನಿರ್ದೇಶಕರಿಗೆ ಮರ್ಯಾದೆ ಕೊಟ್ಟು, ತನ್ನ ಪ್ರಯತ್ನವನ್ನು ತಾನು ಮಾಡುತ್ತಾಳೆ ಎಂದು ಹೊಗಳಿದ್ದಾರೆ. ಇನ್ನೋರ್ವರು, ಈ ಸಿನಿಮಾದಲ್ಲಿ ನಿನಗೆ ಬರೀ 5 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ನನಗೆ ನಂಬೋಕ್ಕೆ ಸಾಧ್ಯವಾಗ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಹೆಚ್ಚಿನವರು, ಈ ಪೋಸ್ಟ್ ಡಿಲೀಟ್ ಮಾಡೋಕ್ಕೆ ಮರೆತು ಬಿಟ್ಯಾ..? ಈ ಪೋಸ್ಟ್ ಯಾಕೆ ಡಿಲೀಟ್ ಮಾಡಿಲ್ಲಾ..? ಎಂದು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನು ಆಲಿಯಾ ಅಭಿಮಾನಿಗಳು ಈ ಸಿನಿಮಾದಲ್ಲಿ ನಿಮ್ಮ ಆ್ಯಕ್ಟಿಂಗ್ ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ.




