6-8ನೇ ತರಗತಿ ಮಕ್ಕಳಿಗೆ ತರಗತಿ ಪ್ರಾರಂಭ

ರಾಜ್ಯಾದ್ಯಂತ 6 ರಿಂದ 8ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿ ನಡೆಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಶೇಕಡಾ 2ರಷ್ಟು ಪಾಸಿಟಿವಿಟಿ ರೇಟ್ ಇರೋ ತಾಲೂಕುಗಳ ಶಾಲೆಗಳಿಗೆ ತರಗತಿ ನಡೆಸಲು ಅನುಮತಿ ನೀಡಲಾಗಿದೆ.

ರಾಜ್ಯದಲ್ಲಿ ಒಂದರಿಂದ 8ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿ ಆರಂಭಿಸುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಈ ಕುರಿತ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಬಳಿಕ 6 ರಿಂದ 8 ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿ ನಡೆಸೋದಕ್ಕೆ ಅವಕಾಶ ಕಲ್ಪಿಸಲಾಗಿದೆ, ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿದ ಸಚಿವ ಆರ್. ಆಶೋಕ್ ಕೋವಿಡ್ ಮಾರ್ಗಸೂಚಿ ಅನುಸರಿಸೋ ಮೂಲಕ ಸೆ. 6ರಿಂದ ತರಗತಿಗಳು ನಡೆಯಲಿವೆ ಅಂತ ಮಾಹಿತಿ ನೀಡಿದ್ರು.

ಇನ್ನು ಸೋಮವಾರದಿಂದ ಶುಕ್ರವಾರದ ವರೆಗೂ ತರಗತಿಗಳು ನಡೆಯಲಿದ್ದು 6ರಿಂದ 10ನೇ ತರಗತಿ ವರೆಗೆ ಇನ್ಮುಂದೆ ಶಾಲೆಗಳು ನಡೆಯಲಿವೆ. ಜೊತೆಗೆ ಮಕ್ಕಳ ಹಿತದೃಷ್ಟಿಯಿಂದಾಗಿ ಶೇಕಡಾ 50 ರಷ್ಟು ಮಂದಿ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ತರಗತಿಗಳು ನಡೆಯಬೇಕು. ಶನಿವಾರ ಮತ್ತು ಭಾನುವಾರದಂದು ರಜೆ ಘೋಷಿಸಿ, ಆ ಎರಡೂ ದಿನಗಳಲ್ಲಿ ತರಗತಿಗಳನ್ನು ಸ್ಯಾನಿಟೈಸ್ ಮಾಡಲಾಗುತ್ತೆ ಅಂತ ಇದೇ ವೇಳೆ ಅಶೋಕ್ ತಿಳಿಸಿದ್ರು.

About The Author