ಮನೆ ಕೆಲಸದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯಾಗಿದೆ. ಪರಪ್ಪನ ಅಗ್ರಹಾರದಲ್ಲಿರುವ ಪ್ರಜ್ವಲ್‌ಗೆ ಕೈದಿ ನಂಬರ್ 15,528ನೇ ನಂಬರ್ ನೀಡಲಾಗಿದೆ. ಜೊತೆಗೆ ಕಾರಾಗೃಹದಲ್ಲಿರುವ ಗ್ರಂಥಾಯದಲ್ಲಿ ಕ್ಲರ್ಕ್ ಕೆಲಸವನ್ನೂ ನೀಡಲಾಗಿದೆ.
ವಿಚಾರಣಾಧೀನ ಕೈದಿಗಳು ಹಾಗೂ ಸಜಾಬಂದಿಗಳಿಗೆ, ಜೈಲಿನ ಗ್ರಂಥಾಲಯದಿಂದ ಪುಸ್ತಕ ವಿತರಣೆ ಮಾಡುವುದು. ಯಾವ ಕೈದಿಗೆ ಯಾವ ಪುಸ್ತಕ ನೀಡಲಾಗಿದೆ ಎಂಬ ಮಾಹಿತಿಯನ್ನು, ಪುಸ್ತಕದಲ್ಲಿ ಎಂಟ್ರಿ ಮಾಡಿಕೊಳ್ಳುವುದು. ಈ ಕೆಲಸವನ್ನು ಪ್ರಜ್ವಲ್‌ಗೆ ನೀಡಲಾಗಿದ್ದು, ಕ್ಲರ್ಕ್ ಕೆಲಸಕ್ಕೆ ಪ್ರತಿ ದಿನ 524 ರೂಪಾಯಿ ಕೂಲಿ ನಿಗದಿ ಮಾಡಲಾಗಿದೆ.
ಇನ್ನು, ಬೆಂಗಳೂರಿನಲ್ಲಿ ದೇಗುಲವೊಂದಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವ್ರನ್ನು, ಮಾಧ್ಯಮಗಳು ಪ್ರಜ್ವಲ್ ರೇವಣ್ಣ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಆ ವೇಳೆ ಅದರ ಬಗ್ಗೆ ಇವತ್ಯಾಕೆ ರಿಯಾಕ್ಟ್ ಮಾಡ್ಲಿ. ಅದೆಲ್ಲಾ ಆಗುತ್ತೆ ಬಿಡಿ. ಅದನ್ನ ಅವರು ಮಾಡ್ತಾರೆ ಎಂದಷ್ಟೇ ಹೇಳಿ, ಕಾರು ಹತ್ತಿ, ಹೊರಟೇ ಬಿಟ್ರು.
ಇದಕ್ಕೂ ಮುನ್ನ ಧರ್ಮಸ್ಥಳದ ಪ್ರಕರಣದ ಬಗ್ಗೆಯೂ ರೇವಣ್ಣ ಪ್ರತಿಕ್ರಿಯಿಸಿದ್ದಾರೆ. ಎಲ್ಲಾ ಸಮಾಜದವರಿಗೂ ಆಶೀರ್ವಾದ ಮಾಡುವ ದೇವಸ್ಥಾನವಿದ್ರೆ, ಅದು ಮಂಜುನಾಥ ಸ್ವಾಮಿ ಮಾತ್ರ. ರಾಜಕಾರಣಿಗಳು ಹೋಗ್ತಾರೆ. ಸಾರ್ವಜನಿಕರೂ ಹೋಗ್ತಾರೆ. ಧರ್ಮಸ್ಥಳದ ಬಗ್ಗೆ ನಾವ್ಯಾರು ಮಾತನಾಡೋಕೆ ಆಗಲ್ಲ. ಅದಕ್ಕೊಂದು ಇತಿಹಾಸ ಇದೆ. ಮಂಜುನಾಥ ಸ್ವಾಮಿಯನ್ನು ಯಾರೂ ಏನೂ ಮಾಡೋಕೆ ಆಗಲ್ಲ. ಯಾರು ತೊಂದರೆ ಕೊಡ್ತಾರೋ ಅವರಿಗೆ, ಮಂಜುನಾಥಸ್ವಾಮಿ ಶಿಕ್ಷೆ ಕೊಡ್ತಾನೆ. ಯಾರನ್ನಾದ್ರೂ ಮಗಿಸೋಕೆ ಆಗುತ್ತಾ. ದೇವರ ಅನುಗ್ರಹ ಇರೋವರೆಗೆ ಏನೂ ಮಾಡೋಕೆ ಆಗಲ್ಲ ಅಂತಾ, ರೇವಣ್ಣ ಹೇಳಿದ್ರು.
ಒಟ್ನಲ್ಲಿ, ಪುತ್ರ ಪ್ರಜ್ವಲ್ ರೇವಣ್ಣ ವಿಚಾರದಲ್ಲಿ, ಹೆಚ್.ಡಿ. ರೇವಣ್ಣ ತೀವ್ರವಾಗಿ ಮುಜುಗರಕ್ಕೀಡಾಗಿದ್ದಾರೆ.

