ಇತಿಹಾಸದಲ್ಲಿ ಮೊದಲನೆ ಬಾರಿಗೆ 18 ಕ್ಯಾನ್ಸರ್ ರೋಗಿಗಳು ದೋಸ್ಟಾರ್ಲಿಮಾಬ್(Dostarlimab) ಅನ್ನು ತೆಗೆದುಕೊಂಡು ಕ್ಯಾನ್ಸರ್ ರೋಗದಿಂದ ಗುಣಮುಕರಾಗಿದ್ದರೆ.
18 ಕ್ಯಾನ್ಸರ್ ರೋಗಿಗಳು ಪ್ರಾಯೋಗಿಕ ಗುದನಾಳದ ಕ್ಯಾನ್ಸರ್ ಚಿಕಿತ್ಸೆಯನ್ನು ಪಡೆಡಿದ್ದು, ಅವರ ರೋಗವು ಕಣ್ಮರೆಯಾಗಿದೆ ಎಂದು ಸಣ್ಣ ಕ್ಲಿನಿಕಲ್ ಪ್ರಯೋಗವು ಕಂಡುಹಿಡಿದಿದೆ. ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ ನಡೆಸಿದ ಸಮಿತಿ ಕ್ಲಿನಿಕಲ್ ಪ್ರಯೋಗದಲ್ಲಿ 18 ರೋಗಿಗಳು ದೋಸ್ಟಾರ್ಲಿಮಾಬ್ ಎಂಬ ಔಷಧಿಯನ್ನು ಆರು ತಿಂಗಳ ಕಾಲ ತೆಗೆದುಕೊಂಡಿದ್ದು, ತಮ್ಮ ಕ್ಯಾನ್ಸರ್ ಗೆಡ್ಡೆಗಳು ಕರಗುವುದನ್ನು ಗಮನಿಸಿದ್ದರು.
ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಕ್ಲಿನಿಕಲ್ ಪ್ರಯೋಗದಲ್ಲಿರುವ ವ್ಯಕ್ತಿಗಳು ಈ ಹಿಂದೆ ಕಿಮೊಥೆರಪಿ, ವಿಕಿರಣ (Radiation) ಮತ್ತು ಆಕ್ರಮಣಕಾರಿ ಶಸ್ತ್ರಚಿಕಿತ್ಸೆ (Invasive surgery)ಯಂತಹ ಚಿಕಿತ್ಸೆಯನ್ನು ಪಡೆದಿದ್ದರು. ಇವೆಲ್ಲವೂ ಕರುಳು, ಮೂತ್ರ ಸಮಸ್ಯೆಗೆ ಕಾರಣವಾಗಿತ್ತು. ನಂತರ ಸಂಶೋಧನೆಯ ಮುಂದಿನ ಹಂತವಾಗಿ 18 ರೋಗಿಗಳು ಈ ಶಸ್ತ್ರಚಿಕಿತ್ಸೆಗಳ ಮೂಲಕ ಹೋಗಬೇಕೆಂದು ನಿರೀಕ್ಷಿಸಿ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿಲ್ಲ ಎಂದು ತಿಳಿದರು. ಅದಷ್ಟೇ ಅಲ್ಲದೆ ಕೊನೆಯಲ್ಲಿ ಈ ಪ್ರಯೋಗದ ಫಲಿತಾಂಶದಿಂದ ತಜ್ಞರು ಆಶ್ಚರ್ಯಚಕಿತರಾಗಿದ್ದರು.
ವೈದ್ಯರ ಪ್ರಕಾರ, ರೋಗಿಗಳು ಪ್ರಯೋಗದ ಸಮಯದಲ್ಲಿ, ಆರು ತಿಂಗಳವರೆಗೆ ಪ್ರತಿ ಮೂರು ವಾರಗಳಿಗೊಮ್ಮೆ ದೋಸ್ಟಾರ್ಲಿಮಾಬ್ ಅನ್ನು ತೆಗೆದುಕೊಂಡಿದ್ದರು. ಹಾಗೂ ಈ ಸಮಯದಲ್ಲಿ ಯಾವುದೇ ರೋಗಿಗಳು ಕಿಮೊರಾಡಿಯೊಥೆರಪಿಯನ್ನು ಪಡೆದಿಲ್ಲ ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾಗಿರಲಿಲ್ಲವಂತೆ.