Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಸಿಎಂ ಆಪ್ತ ಸಲಹೆಗಾರ ಬಿ.ಆರ್.ಪಾಟೀಲ್, ಸಿಎಂ 5 ವರ್ಷ ಇರ್ತಾರೋ, ಇಲ್ವೋ ಗೊತ್ತಿಲ್ಲ ಅನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಐದು ವರ್ಷ ಇರ್ತಾರೋ ಇರಲ್ವೋ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಐದು ವರ್ಷ ಇರಬೇಕು ಅಂತ ಬಯಸುತ್ತೆವೆ. ಆದರೆ ಹೈಕಮಾಂಡ್ ಏನು ನಿರ್ಧಾರ ಮಾಡುತ್ತೆ ಗೊತ್ತಿಲ್ಲ. ಹೈಕಮಾಂಡ್ ಬೇರೆ ನಿರ್ಧಾರ ತೆಗೆದುಕೊಂಡರೇ ನಾವೇನು ಮಾಡದಕ್ಕೆ ಆಗುತ್ತೆ. ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಇನ್ನೂ ದೊಡ್ಡ ಜವಾಬ್ದಾರಿ ನೀಡಬಹುದು. ಆದರೆ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕು ಅಂತ ಯಾವ ಶಾಸಕರ ಮನಸ್ಸಿನಲ್ಲಿ ಇಲ್ಲ ಎಂದು ಪಾಟೀಲ್ ಹೇಳಿದ್ದಾರೆ.
ದೊಡ್ಡ ಕನಸನ್ನು ಕಂಡು ಬಡವರ ಪರವಾಗಿ ಕಾರ್ಯಕ್ರಮ ಹಮ್ಮಿಕೊಂಡಾಗ ಭೌತಿಕ ಅಭಿವೃದ್ಧಿಗೆ ಹೊಡೆತ ಬಿಳುತ್ತೆ. ಈ ಬಾರಿಯ ಬಜೆಟ್ನಲ್ಲಿ ಗ್ಯಾರಂಟಿ ನಿಂದ ಆರ್ಥಿಕ ಹೊರ ಆಗದಂತೆ ಹೊಸ ಆರ್ಥಿಕ ನೀತಿ ಸಿಎಂ ನೀಡ್ತಾರೆ. ನಮಗೆ ಮೊದಲೇ ಗೊತ್ತಿತ್ತು ಇಷ್ಟು ಖರ್ಚು ಆಗುತ್ತೆ ಅಂತ. ಆರ್ಥಿಕ ಸಮಸ್ಯೆ ನಮಗೆ ಮಾತ್ರವಲ್ಲಾ ಎಲ್ಲಾ ರಾಜ್ಯಗಳಿಗಿದೆ. ಆಗುತ್ತೆ ಸಮಸ್ಯೆ ಆಗುತ್ತಿದೆ ಸ್ವಲ್ಪ ಹೊರೆ ಆಗುತ್ತೆ. ದೊಡ್ಡ ಸಮಸ್ಯೆಗೆ ಕೈ ಹಾಕಿದಾಗ ಸ್ವಲ್ಪ ಸಮಸ್ಯೆ ಉದ್ಭವ ಆಗುತ್ತೆ. ಕಲ್ಯಾಣ ರಾಜ್ಯದ ಪರಿಕಲ್ಪನೆ ಕಾಣುತ್ತಿದ್ದೆವೆ ಎಲ್ಲರಿಗೂ ಸಮಪಾಲು ಸಮಬಾಳು. ಐದು ಗ್ಯಾರಂಟಿಗಳು ಬಹಳಷ್ಟು ಯಶಸ್ವಿಯಾಗಿ ಅನುಷ್ಠಾನ ಆಗುತ್ತಿವೆ. ಇದರಿಂದ ಬಹಳಷ್ಟು ರಾಜಕೀಯ ಲಾಭ ಆಗುತ್ತಿದೆ.
ನಮ್ಮ ಕಾಪಿಯನ್ನೆ ಮೋದಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲೊದಿಲ್ಲಾ.
ಇದರಲ್ಲಿ ಯಾವುದೇ ಅನುಮಾನ ಬೇಡ. ಬಿಪಿಎಲ್ ಕಾರ್ಡ್ ವಿವಾದ ಬಿಜೆಪಿ ಹುಟ್ಟಿಸಿದ ಭಯ. ಆದರೆ ಯಾವುದೇ ಗ್ಯಾರಂಟಿ ನಿಲ್ಲೋದಿಲ್ಲಾ. ಇದನ್ನು ಪರಿಹಾರ ಮಾಡುತ್ತೆವೆ. ನಮಗೆ ಕೇಂದ್ರ ಅನ್ಯಾಯ ಮಾಡುತ್ತಿದೆ. ನಮ್ಮ ಪಾಲು ನಮಗೆ ನೀಡುತ್ತಿಲ್ಲ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಧೈರ್ಯ ಇದ್ದ್ರೆ ಮೋದಿಗೆ ಹೇಳಲಿ ನಮಗೆನು ಹೇಳ್ತಾರೆ ಎಂದು ಪಾಟೀಲ್ ಹೇಳಿದ್ದಾರೆ.
ಮೂರು ಚುನಾವಣೆಯಲ್ಲಿ ಜನ ಉತ್ತರ ನೀಡಿದ್ದಾರೆ ಎಲ್ಲಾ ಹಗರಣಗಳು ಕಲ್ಪನೆ. ಮುಡಾ ಹಗರಣ ನೂರಕ್ಕೆ ನೂರರಷ್ಟು ಮುಕ್ತರಾಗಿ ಸಿಎಂ ಹೊರ ಬರ್ತಾರೆ. ಹಗರಣಗಳು ಬರೀ ನಮ್ಮ ಕಾಲದಲ್ಲಿ ಮಾತ್ರವಲ್ಲ ಎಲ್ಲಾ ಸರ್ಕಾರದಲ್ಲಿ ಆಗಿವೆ. ವಕ್ಪ್ ಬೋರ್ಡ್ ವಿಚಾರವಾಗಿ ಬಿಜೆಪಿ ಸಹ ನೋಟಿಸ್ ನೀಡಿತ್ತು. ಇದು ದುರುದೇಶದಿಂದ ನಮ್ಮ ಸರ್ಕಾರಕ್ಕೆ ಗೂಭೆ ಕೂರಿಸುಬೇಕು, ಕೆಟ್ಟ ಹೆಸರು ತರಬೇಕು ಅಂತ ಮಾಡುತ್ತಿದ್ದಾರೆ.
ಬಿಜೆಪಿಯವರು ಒಂದಾಗಿ ವಕ್ಪ್ ಬೋರ್ಡ್ ಜನಜಾಗೃತಿ ಮಾಡಲಿ ಅವರಲ್ಲಯೆ ಒಡಕಿದೆ. ನಮ್ಮನ್ನೇನು ನೋಡ್ತಾರೆ ಇನ್ನೂ ಎಷ್ಟು ಬಣ ಇರುತ್ತೆ ಗೊತ್ತಿಲ್ಲ. ಯಾರ್ಯಾರು ದೆಹಲಿಯಲ್ಲಿ ಕುಳಿತು ಯಾರ್ಯಾರಿಗೆ ಆಪರೇಟಿಂಗ್ ಮಾಡತ್ತಿದ್ದಾರೋ. ಯಾರ್ಯಾರ ಕೈ ಚಳಕ ಎಲ್ಲೆಲಿದೆಯೋ ಗೊತ್ತಿಲ್ಲ. ಮುರಳಿ ಮನೋಹರ ಜೋಶಿ ಅಂತಹವರನ್ನೇ ಮೂಲೆಗುಂಪು ಮಾಡಿದರು ಇವರೆಲ್ಲಾ ಯಾವ ಲೆಕ್ಕ ಎಂದು ಪಾಟೀಲ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.