- Advertisement -
www.karnatakatv.net : ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮತ್ತು ಜೆಡಿಎಸ್ ಹಿರಿಯ ಮುಖಂಡ ಎಚ್.ಡಿ.ರೇವಣ್ಣ ಸುಮಾರು ಮೂರು ತಾಸು ದೆಹಲಿಯಲ್ಲಿ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ನಾಲ್ಕು ದಿನಗಳ ಹಿಂದೆ ಈ ರಹಸ್ಯ ಸಭೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಯಡಿಯೂರಪ್ಪನವರ ರಾಜೀನಾಮೆಯ ನಂತರ, ಒಂದು ವೇಳೆ ರಾಜಕೀಯ ಬಿಕ್ಕಟ್ಟ ಏನಾದರೂ ಎದುರಾದರೆ, ಅದನ್ನು ಸಂಭಾಳಿಸಲು ಪೂರ್ವಭಾವಿ ಮಾತುಕತೆ ನಡೆದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಬಿಎಸ್ವೈ ರಾಜೀನಾಮೆಯ ನಂತರ ಸಿಎಂ ರೇಸಿನಲ್ಲಿ ಮಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರು ಸಂತೋಷ್ ಅವರದ್ದು. ಈಗಾಗಲೇ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಸಂತೋಷ್ ಅವರಿಗೆ ವರಿಷ್ಠರಿಂದ ಸ್ಪಷ್ಟ ಸಂದೇಶವಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
- Advertisement -