ಮಂಡ್ಯ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪ್ರತಿಮೆಗೆ ಮಂಡ್ಯ ರೈತರಿಂದ ರಕ್ತಾಭಿಷೇಕ ಮಾಡಿ, ವಿಚಿತ್ರ ರೀತಿಯಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸುವಂತೆ ಅಹೋರಾತ್ರಿ ಧರಣಿಯನ್ನು ರೈತರು ಮಾಡುತ್ತಿದ್ದಾರೆ. ಕಳೆದ 50 ದಿನದಿಂದ ರೈತರು ಧರಣಿ ನಡೆಸುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ಆಲಿಸದೆ, ಬೇಡಿಕೆಯನ್ನ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ.
ಕ್ರಿಸ್‌ಮಸ್ ನಂತರ ಚರ್ಚ್ ಧ್ವಂಸ, ಬೇಬಿ ಜೀಸಸ್ ಪ್ರತಿಮೆಗೂ ಹಾನಿ
ಸರ್ಕಾರದ ನಡೆ ಖಂಡಿಸಿ ಇಂದು ವಿಭಿನ್ನ ರೀತಿಯಲ್ಲಿ ಕೈಯಿಂದ ರಕ್ತ ಬಸಿದುಕೊಂಡು ಬಸವರಾಜ ಬೊಮ್ಮಾಯಿ ಪ್ರತಿಮೆಗೆ ರಕ್ತಾಭಿಷೇಕ ಮಾಡುತ್ತಿದ್ದಾರೆ. 30ಕ್ಕೂ ಹೆಚ್ಚು ರೈತರ ರಕ್ತದಿಂದ ಸಿಎಂಗೆ ರಕ್ತಾಭಿಷೇಕ ಮಾಡಲಾಗುತ್ತಿದೆ. ಇಂಜೆಕ್ಷನ್ ಟ್ಯೂಬ್ ನಲ್ಲಿ ರಕ್ತ ಬಸಿದು ರಕ್ತಾಭೀಷೇಕ ಮಾಡುತ್ತಿರುವ ರೈತರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತು ರಕ್ತದ ಅಭಿಷೇಕಕ್ಕೆ ಒಳಗಾದ ಸಿಎಂ ಪ್ರತಿಮೆಯನ್ನು ಪೊಲೀಸರು ವಶಕ್ಕೆ ಪಡೆದರು.
ಮುಖದಲ್ಲಿ ವೃದ್ಧಾಪ್ಯ ಕಾಣಬಾರದು ಎಂದರೆ ಇಂದಿನಿಂದ ಈ ಆಹಾರಗಳನ್ನು ತಿನ್ನಲು ಪ್ರಾರಂಭಿಸಿ..!




