Friday, November 22, 2024

Latest Posts

7ನೇ ವೇತನ ಆಯೋಗ ರಚನೆಗೆ ಸಿಎಂ ಬೊಮ್ಮಾಯಿ ಭರವಸೆ : ಎರಡು ದಿನದಲ್ಲಿ ಆದೇಶ

- Advertisement -

ಬೆಂಗಳೂರು : ರಾಜ್ಯ ಸರ್ಕಾರ ನೌಕರರ ವೇತನ ಪರಿಷ್ಕರಣೆ ಮಾಡಲು ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ. 7ನೇ ವೇತನ ರಚನೆಗೆ ಬೊಮ್ಮಾಯಿ ಭರವಸೆ ನೀಡಿದ್ದು, 2 ದಿನಗಳಲ್ಲಿ ಆದೇಶ ಹೋರಬಿಳಲಿದೆ.

ಪ್ರಸಕ್ತ ವರ್ಷದ ಅಕ್ಷೋಬರ್ ಅಂತ್ಯದೊಳಗೆ ಆಯೋಗ ರಚನೆ ಮಾಡುವುದಾಗಿ ಈ ಹಿಂದೆ ಸಿಎಂ ಭರವಸೆ ನೀಡಿದ್ದರು. ಈ ಹಿನ್ನೆಲೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರ ನಿಯೋಗ ಸಿಎಂ ಜೊತೆ ಚರ್ಚಿಸಿ, ಎರಡು ದಿನಗಳಲ್ಲಿ ವೇತನ ಆಯೋಗ ರಚಿಸಿ, ತ್ವರಿತವಾಗಿ ಮಧ್ಯಂತರ ವರದಿ ನೀಡಲು ಸೂಚಿಸಲಾಗುವುದು. 2023ರ ಮಾರ್ಚ್ ಒಳಗೆ ಆಯೋಗದ ಶಿಫಾರಸ್ಸುಗಳನ್ನು ಜಾರಿಮಾಲಾಗುವು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು. 5 ವರ್ಷಗಳಿಗೊಮ್ಮೆ ವೇತನ ಆಯೋಗ ರಚನೆ ಮಾಡಲಾಗುತ್ತಿತ್ತು, ಇದೇ ಮೊದಲ ಸಲ 4 ವರ್ಷ 7 ತಿಂಗಳಿಗೆ ರಚನೆ ಮಾಡಲಾಗುತ್ತಿದೆ ಎಂದರು.

ಚುನಾವಣೆ ನೀತಿ ಸಂಹಿತೆ ಘೋಷಣೆಗೂ ಮುನ್ನ ನೌಕರರಿಗೆ ಮೂಲ ವೇತನದಲ್ಲಿ ಹೆಚ್ಚಳವಾಗಲಿದೆ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ರಾಜ್ಯದ ಎಲ್ಲ ನೌಕರರ ಪರವಾಗಿ ನ.10 ರಂದು ರೇಸ್ ಕೋರ್ಸ್ ರಸ್ತೆಯ ಅವರ ನಿವಾಸದಲ್ಲಿ ಸನ್ಮಾನಿಸಲಾಗುವುದು ಎಂದು ಷಡಕ್ಷರಿ ಅವರು ತಿಳಿಸಿದರು.

- Advertisement -

Latest Posts

Don't Miss