www.karnatakatv.net : ಚಾಮರಾಜನಗರ: ಅ.7 ರಂದು ಯಳಂದೂರು ತಾಲೂಕಿನ ಇತಿಹಾಸ ಪ್ರಸಿದ್ದ ಬಿಳಿಗಿರಿರಂಗನ ಬೆಟ್ಟಕ್ಕೆ ಆಗಮಿಸಲಿರುವ ರಾಷ್ಟ್ರಪತಿಗಳು ಬಳಿಕ ದೇವರ ದರ್ಶನ ಪಡೆದು ಚಾಮರಾಜನಗರಕ್ಕೆ ಆಗಮಿಸಲಿದ್ದಾರೆ.
ನಗರದ ಹೊರವಲಯದಲ್ಲಿ ನೂತನವಾಗಿ ನಿರ್ಮಾಣವಾದ ಜಿಲ್ಲಾಸ್ಪತ್ರೆ ಉದ್ಘಾಟನೆಗೆ ರಾಜ್ಯದ ಸಿಎಂ ಬರ್ತಾರಾ ಎಂಬುದು ಜಿಲ್ಲೆಯಾದ್ಯಂತ ಚರ್ಚೆ ಜೋರಾಗಿದೆ. ಆದರೆ ಸಿಎಂ ಬರುವದಾಗಿ ಬಿಜೆಪಿ ಕಾರ್ಯಕರ್ತರು ತಿಳಿಸಿದ್ದಾರೆ. ಆದರೆ ಚಾಮರಾಜನಗರ ಜಿಲ್ಲಾಕೇಂದ್ರಕ್ಕೆ ಸಿಎಂ ಆದವರು ಬಂದ್ರೆ ತಮ್ಮ ಅಧಿಕಾರವನ್ನು ಕಳೆದುಕೊಳ್ತಾರೆ ಎಂಬುದು ಮೂಡನಂಬಿಕೆ ಇದ್ದು ಹಾಗಾಗಿ ಹಿಂದಿರುವ ಸಿಎಂ ಗಳು ಯಾರು ಈ ಜಿಲ್ಲೆಯ ಜಿಲ್ಲಾಕೇಂದ್ರಕ್ಕೆ ಬರಲು ಹಿಂದೇಟು ಹಾಕುತಿದ್ದರು.
ಮೂಡನಂಬಿಕೆಗೆ ಸೆಡ್ಡು ಹೊಡೆದು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಜಿಲ್ಲಾಕೇಂದ್ರಕ್ಕೆ ಬಂದಿದ್ದ ಎಚ್.ಡಿ.ಕುಮಾರಸ್ವಾಮಿ ನಂತರ ಕಾಕತಾಳೀಯವೆಂಬಂತೆ ಜಿಲ್ಲಾಕೇಂದ್ರಕ್ಕೆ ಭೇಟಿ ಕೊಟ್ಟ ಆರು ತಿಂಗಳಲ್ಲೆ ಅಧಿಕಾರ ಕಳೆದುಕೊಂಡರು. ಅಧಿಕಾರವಾಧಿ ಮುಗಿಯುವ ಮುನ್ನ ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಬಳಿಕ ಚಾಮರಾಜನಗರಕ್ಕೆ ಹಲವು ಬಾರಿ ಭೇಟಿ ಕೊಟ್ಟರು. 5 ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರವಧಿ ಮುಗಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದು ಕೊಳ್ಳುತ್ತಾರೆ ಎನ್ನುವ ಅಪನಂಬಿಕೆ ತೊಡೆದು ಹಾಕಿದ್ದ ಮಾಜಿ ಸಿಎಂ ಸಿದ್ದು, ಬಳಿಕ ಮತ್ತೆ ಜಿಲ್ಲೆಗೆ ಭೇಟಿ ಕೊಡದೆ ಮೂಡನಂಬಿಕೆಗೆ ಜೋತು ಬಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ.
ಬಿಎಸ್ವೈ ಸರ್ಕಾರದ ವೇಳೆ ಆಕ್ಸಿಜನ್ ದುರಂತ ಸಂಭವಿಸಿದ್ರು ಜಿಲ್ಲೆಗೆ ಬರಲಿಲ್ಲ. ಇದೀಗ ಸಿಎಂ ಬೊಮ್ಮಾಯಿ ಚಾಮರಾಜನಗರಕ್ಕೆ ಬರ್ತಾರಾ ಅನ್ನೋ ಚರ್ಚೆ ಜೋರಾಗಿದ್ದು, ಅದರ ಜೋತೆಗೆ ದಸರಾ ಉದ್ಘಾಟನೆ ನೆಪ ಹೇಳಿ ಚಾಮರಾಜನಗರಕ್ಕೆ ಬರೋದಿಲ್ಲ ಅನ್ನೋ ಚರ್ಚೆ ಕೂಡ ಜೋರಾಗಿದೆ.
162 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ಕಾಮಗಾರಿ ಪೂರ್ಣವಾಗಿದ್ದು 450 ಬೆಡ್ ಸಾಮರ್ಥ್ಯದ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ಇದಾಗಿದೆ ಹಾಲಿ ಇರುವ ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಗಳ ಕೊರತೆ. ನಗರದ ಹೊರವಲಯ ಯಡಬೆಟ್ಟದ ಬಳಿ ನಿರ್ಮಾಣವಾಗಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆ( ಜಿಲ್ಲಾಸ್ಪತ್ರೆ) ಉದ್ಘಾಟನೆ ಸಿದ್ಧವಾಗಿ ನಿಂತಿದ್ದು ಸಿಎಂ ಬರುತ್ತಾರೋ ಇಲ್ಲವೋ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ