Saturday, July 5, 2025

Latest Posts

ಕರ್ನಾಟಕದ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

- Advertisement -

Banglore News:

ಬೆಂಗಳೂರು, ಜನವರಿ 23: ಸಣ್ಣ ಭಾವನೆಗಳನ್ನು ಬಿಟ್ಟು,ಕರ್ನಾಟಕದ ಬಗ್ಗೆ ಎಲ್ಲರೂ ಒಂದಾಗಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಕರ್ನಾಟಕದ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಬಗ್ಗೆ ಪಾಲ್ಗೊಳ್ಳುವ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷರು ಈ ಕುರಿತು ನೀಡಿರುವ ಹೇಳಿಕೆಗೆ ಉತ್ತರಿಸಿ ನವದೆಹಲಿಯಲ್ಲಿ 2009 ರಲ್ಲಿ ಯು.ಪಿ.ಎ ಸರ್ಕಾರವಿತ್ತು. ರಾಜ್ಯದಿಂದ ಕಳುಹಿಸಿದ ಸ್ಥಬ್ಧಚಿತ್ರವನ್ನು ನಿರಾಕರಿಸಲಾಗಿತ್ತು. ಕರ್ನಾಟಕದ ಬಗ್ಗೆ ಅಷ್ಟು ಸ್ವಾಭಿಮಾನ ಇರುವವರು, ಆಗ ಯಾರ ಮೇಲಾದರೂ ಒತ್ತಡ ಹೇರಿ ಸ್ಥಬ್ಧಚಿತ್ರಕ್ಕೆ ಸ್ಥಾನಪಡೆದುಕೊಳ್ಳಬಹುದಿತ್ತು. ನಂತರ ಸತತ 14 ವರ್ಷ ಸ್ಥಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದೆ. ಕಳೆದ ಬಾರಿ ಪ್ರಶಸ್ತಿ ಪಡೆದವರಿಗೆ ಬೇರೆಯದರಲ್ಲಿ ಅವಕಾಶ ನೀಡಬೇಕೆಂಬ ವಿಚಾರವಿತ್ತು.ಆದಾಗ್ಯೂ ನಾನು ರಕ್ಷಣಾ ಸಚಿವರೊಂದಿಗೆ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯವರೂ ಮಾತನಾಡಿ ಸ್ತಬ್ಧ ಚಿತ್ರಕ್ಕೆ ಅನುಮತಿ ನೀಡಿದ್ದಾರೆ. ಕೇವಲ ಎಂಟು ಹತ್ತು ದಿನಗಳಲ್ಲಿ ನಾರಿ ಶಕ್ತಿ ಎಂಬ ವಿಷಯದ ಕುರಿತು ಸ್ಥಬ್ಧಚಿತ್ರ ತಯಾರಿಸಲಾಗಿದೆ. ಅತ್ಯಂತ ಅದ್ಭುತವಾಗಿ ಸ್ಥಬ್ಧಚಿತ್ರ ಮೂಡಿಬಂದಿದೆ ಎಂದರು.

ಸುಭಾಷ್ ಚಂದ್ರ ಬೋಸ್ ಅವರ ಹೆಸರಿನಲ್ಲಿಯೇ ದೇಶಪ್ರೇಮವಿದೆ: ಸಿ.ಎಂ ಬೊಮ್ಮಾಯಿ

ದಿವಂಗತ ನೇತಾಜಿ ಸುಭಾಷ್‍ಚಂದ್ರ ಬೋಸ್ ಜನ್ಮ ದಿನಾಚರಣೆಯ ಅಂಗವಾಗಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಸಿಎಂ

ಸರಕಾರದ ಧೋರಣೆ ಖಂಡಿಸಿ ಬೀದಿಗಿಳಿಯಲು ಸಜ್ಜಾದ ಸಾರಿಗೆ ನೌಕರರು

- Advertisement -

Latest Posts

Don't Miss