ನಾಳೆ ನಡೆಯಬೇಕಿದ್ದ ಸಿಎಂ ಬೊಮ್ಮಾಯಿ ನೇತೃತ್ವದ ಮಹತ್ವದ ಸಚಿವ ಸಂಪುಚ ಸಭೆ, ಮೇ.11ಕ್ಕೆ ಮುಂದೂಡಿಕೆ

ಬೆಂಗಳೂರು: ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯನ್ನು ನಾಳೆ ನಡೆಸಲು ದಿನಾಂಕ ಫಿಕ್ಸ್ ಮಾಡಲಾಗಿತ್ತು. ಆದ್ರೇ ಇಂದು ದಿಢೀರ್ ವಿದ್ಯಮಾನದಲ್ಲಿ ಮೇ.11ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಾಳೆ ಬೆಳಿಗ್ಗೆ 11.30ಕ್ಕೆ ವಿಧಾನಸೌಧದಲ್ಲಿ ನಡೆಯೋದಾಗಿ ದಿನಾಂಕ ಘೋಷಣೆ ಮಾಡಲಾಗಿತ್ತು. ಇದೀಗ ದಿನಾಂಕ 05-05-2022ರಂದು ನಡೆಯಬೇಕಿದ್ದಂತ ಸಚಿವ ಸಂಪುಟ ಸಭೆಯನ್ನು, ದಿನಾಂಕ 11-05-2022ರಂದು ಬೆಳಿಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ.

About The Author