ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಪ್ರಶ್ನೆಗಳಲ್ಲಿ ಗಂಭೀರತೆ ತೋರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಲಬುರಗಿಯಲ್ಲಿ ತೊಗರಿ ಪಾರ್ಕ್ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಬೆಲೆ ಪಾಲಿನ ಅನಿಶ್ಚಿತತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಳಿದ ಬೆಳೆಗಳಿಗೆ ಸರಿಯಾದ ಸಮಯಕ್ಕೆ ಖರೀದಿ ಕೇಂದ್ರಗಳನ್ನು ತೆರೆಯುವಲ್ಲಿ ಸರ್ಕಾರ ವಿಫಲವಾಗಿದೆ. ರೈತರು ಸಾಲ ಮಾಡಿ ಬೆಳೆ ಬೆಳೆಸುತ್ತಾರೆ, ಆದರೆ ಮಧ್ಯವರ್ತಿಗಳೇ ಲಾಭ ಪಡೆಯುತ್ತಾರೆ ಎಂದು ಹೇಳಿದರು.
ಎಲ್ಲಾ ರೈತರಿಗೆ ಸಾಲ ನೀಡುವುದರಲ್ಲಿ ಸರ್ಕಾರದ ವಿಫಲತೆ ಬಗ್ಗೆ ಪ್ರಶ್ನಿಸಿದ ಅವರು, ಸರ್ಕಾರ ಸೂಕ್ತ ಸಮಯದಲ್ಲಿ ಯಾವುದೂ ಕ್ರಮ ಕೈಗೊಂಡಿರುವುದನ್ನು ನಾನು ಕಂಡಿಲ್ಲ. ಈಗ ಬೆಳೆ ನಾಶದ ಕುರಿತು ತನಿಖೆ ನಡೆಸುವುದಾಗಿ ಹೇಳುತ್ತಾರೆ. ತನಿಖೆಗೆ ಬಂದರೆ ಏನು ವರದಿ ನೀಡುತ್ತಾರೆ?” ಎಂದು ಪ್ರಶ್ನಿಸಿದರು.
ರಾಜಭವನದ ಹೆಸರನ್ನು ‘ಲೋಕಭವನ’ ಎಂದು ಬದಲಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿ, “ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿ ಹಲವು ವರ್ಷಗಳಾಗಿವೆ. ಆ ಭಾಗ ನಿಜವಾಗಿ ‘ಕಲ್ಯಾಣ’ ಆಗಿದೆಯೇ? ಹೆಸರು ಬದಲಾಯಿಸುವುದರಿಂದ ಯಾವುದೇ ಮಹತ್ವ ಬರುವುದಿಲ್ಲ, ಎಂದು ಹೇಳಿದರು.
ಇವ್ರು ಹಣ ಸಂಪಾದನೆ ಮಾಡೋಕೆ ನಾವು ಹೇಳಿದ ಹಾಗೆ ಕೇಳ್ತಿಲ್ಲಾ ಅಂತ ಜನ ಪ್ರತಿನಿಧಿಗೆ ನೀವು ಕೆಲಸ ಮಾಡೋಕೆ ಬಿಡಲ್ಲ. ಇದು ನೀವು ಮಾಡುತ್ತಿರುವ ಘನಂದಾರಿ ಕೆಲಸ ಅಲ್ವ ನಿಮ್ಮ ಸರ್ಕಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಅಡ್ಡಗಾಲು ಹಾಕ್ತಿರುವ ಬಗ್ಗೆ HD ಕುಮಾರಸ್ವಾಮಿ ಗುಡುಗಿದ್ದಾರೆ. ಸರಿಯಾಗ ಗೌರವಯುತವಾಗಿ ನಡೆದುಕೊಳ್ಳುವುದನ್ನ ಮೊದಲು ಕಲಿತುಕೊಳ್ಳಿ. ಬರಿ ಸುಳ್ಳು ಹೇಳಿಕೊಂಡು ಯಾಕೆ ತಿರುಗಾಡ್ತಾ ಇದ್ದೀರಾ ಎಂದಿದ್ದಾರೆ.
ವರದಿ : ಲಾವಣ್ಯ ಅನಿಗೋಳ



