Chikkamagaluru: ಚಿಕ್ಕಮಗಳೂರಿನಲ್ಲಿ ಮಾಜಿ ಶಾಸಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಮುಸ್ಲಿಂಮರ ಒಲೈಕೆಗಾಗಿ ಸಿಎಂ ವಕ್ಫ್ ಆಸ್ತಿ ತಂತ್ರ ರೂಪಿಸಿದ್ದಾರೆಂದು ಆರೋಪಿಸಿದ್ದಾರೆ.
ಚಿಕ್ಕಮಗಳೂರಿನಲ್ಲೂ ವಕ್ಫ್ ಬೋರ್ಡ್‌ನಿಂದ ಭೂಕಬಳಿಕೆ ಯತ್ನ ನಡೆದಿದೆ ಎಂದು ಸಿ.ಟಿ.ರವಿ ಆರೋಪಿಸಿದ್ದಾರೆ. ದೇವಸ್ಥಾನ, ತಾಲೂಕು ಕಚೇರಿ, ಜಿಲ್ಲಾ ಆಟದ ಮೈದಾನ, ಹೀಗೆ ಹಲವು ಕಡೆ ವಕ್ಸ್ ಭೂ ಕಬಳಿಕೆ ಮಾಡಲು ಯತ್ನಿಸಿದೆ. ಬೇಲೂರು ರಸ್ತೆಯಲ್ಲಿರುವ ಶನೀಶ್ವರ್ ದೇವಾಲಯ ತಮ್ಮ ಆಸ್ತಿ ಎನ್ನುತ್ತಿದ್ದಾರೆ. ಬಿಎಸ್‌ಎನ್‌ಎಲ್ ಬಿಲ್ಡೀಂಗ್ ಕೂಡ ತನ್ನ ಆಸ್ತಿ ಎನ್ನುತ್ತಿದ್ದಾರೆ ಎಂದು ರವಿ ಆರೋಪಿಸಿದ್ದಾರೆ.
ರತ್ನಗಿರಿ ಬೋರೆಯಲ್ಲಿ ಹಳೆಯ ಕಾಾಲದ ದೇವಸ್ಥಾನವಿದೆ. ಈ ಜಾಗವನ್ನ ವಕ್ಸ್ ಆಸ್ತಿ ಎಂದು ನೋಟಿಫಿಕೇಶನ್ ಮಾಡಿಕೊಂಡಿದ್ದಾರೆ. ದೇವಸ್ಥಾನ ಇರುವ ಜಾಗದಲ್ಲಿ ಎಲ್ಲಿದೆ ದರ್ಗಾ..?ಇದು ಲ್ಯಾಂಡ್ ಜಿಹಾದ್‌ನ ಭಾಗವಾಗಿದೆ ಎಂದು ರವಿ ಆಕ್ರೋಶ ಹೊರಹಾಕಿದ್ದಾರೆ.
ಬೋಗಸ್ ಪ್ರೂಫ್ ಇಟ್ಟುಕೊಂಡು ವಕ್ಫ್ ಆಸ್ತಿ ಕಬಳಿಸಲು ಪ್ರಯತ್ನಿಸುತ್ತಿದೆ. ವಕ್ಫ್‌ಬೋರ್ಡ್ ಅಕ್ರಮದ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಕೈವಾಡವಿದೆ. ಅವರು ಸಿದ್ದರಾಮುಲ್ಲಾಖಾನ್ ರೀತಿ ವರ್ತಿಸುತ್ತಿದ್ದಾರೆ. ಹಿಂದೂಗಳ ಓಟ್ ಬೇಕಾದ್ರೆ ಸಿದ್ದರಾಮಯ್ಯ ಮತತ್ತು ಮುಸ್ಲಿಮರ ಓಟ್ ಬೇಕಾದ್ರೆ ಸಿದ್ದರಾಮುಲ್ಲಾ ಖಾನ್ ಆಗಿ ವರ್ತಿಸುತ್ತಾರೆ ಎಂದು ಸಿ.ಟಿ.ರವಿ ಕಿಡಿಕಾರಿದ್ದಾರೆ.