ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾಂಗ್ರೆಸ್ ವಿರುದ್ದ ಗುಡುಗಿದ್ದಾರೆ. ರಾಜ್ಯದಲ್ಲಿ ಜಾತಿ ಗಣತಿ ವಿಚಾರ ಇಟ್ಟುಕೊಂಡು, ಹಿಂದೂ ಧರ್ಮ ಒಡೆಯುವ ಷಡ್ಯಂತ್ರ ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನವರು ಮಹಾನ್ ಕಳ್ಳರು ದುಷ್ಟರು ಇದ್ದೀರಿ, ರಾಜ್ಯದ ಸಿಎಂ ಓರ್ವ ಅಲ್ಟಾ ಲೆಪ್ಟಿಸ್ಟ್ ಇದ್ದಾರೆ. ಕಾಣದ ಮತಾಂದ ಶಕ್ತಿಗಳಿಗೆ ಪ್ರೇರಣೆ ನೀಡ್ತಿರೋರೆ ಅವರೇ ಎಂದು ದೂರಿದ್ದಾರೆ. ಯಾವ ಆಧಾರದ ಮೇಲೆ ಜಾತಿ ಗಣತಿ ಮಾಡುತ್ತಿದ್ದಾರೆ, ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಅಂತಾರೆ, ಮತಾಂತರವಾದವರಿಗೆ ಮೀಸಲಾತಿ ಇಲ್ಲಾ ಅನ್ನುವುದು ಸಂವಿಧಾನದಲ್ಲಿ ಸ್ಪಷ್ಟವಾಗಿದೆ ಎಂದು ಹೇಳಿದರು.
ಹಿಂದೂ ಧರ್ಮದ ಮೂಲದಲ್ಲಿ ಅಸ್ಪೃಶ್ಯತೆ ಇರಲಿಲ್ಲಾ, ಯಾವದೋ ಸಮಯದಲ್ಲಿ ಅದು ನಮ್ಮ ಧರ್ಮದಲ್ಲಿ ಸೇರಿತು. ಹಿಂದೂ ಧರ್ಮದಲ್ಲಿ ಇದ್ದ ಅಸ್ಪಶ್ಯರಿಗೆ ಮೀಸಲಾತಿ ನೀಡಲಾಗಿತ್ತು ಎಂದು ಹೇಳಿದರು. ಕಾಂಗ್ರೆಸ್‌ನವರೂ ಮತಾಂತರ ವಾದವರಿಗೂ ಮೀಸಲಾತಿ ನೀಡಲು ಮುಂದಾಗಿದ್ದಾರೆ. ನಕಲಿ ಗಾಂಧಿ ಕುಟುಂಬದ ಸೂಚನೆಯಂತೆ ಈ ರೀತಿ ಕೆಲಸ ಮಾಡುತ್ತಿದ್ದಾರೆ ಎಂದಯ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರ್ಕಾರ ದೇಶವನ್ನು ಅಶಕ್ತಗೊಳಿಸೋ ಷಂಡ್ಯಂತ್ರದಲ್ಲಿ ಬಾಗಿಯಾಗುತ್ತಿದೆ. ರಾಜ್ಯದ ಸಮೀಕ್ಷೆಗೆ ಅರ್ಥವಿಲ್ಲಾ, ಮೊದಲು ನಾಲ್ಕು ನೂರು ಕೋಟಿ ಕಳೆದಿದ್ದಾರೆ ಮತ್ತು ಇದೀಗ ಮತ್ತೆ ನಾಲ್ಕು ನೂರು ಕೋಟಿ ವ್ಯರ್ಥ ಮಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಕೂಡಾ ಇದಕ್ಕೆ ವಿರೋಧ ಮಾಡಿದ್ದಾರೆ ಯಾಕೆಂದ್ರೆ ಅವರಿಗೆ ಗೊತ್ತಾಗಿದೆ ಇದನನು ಮಾಡಿದ್ರೆ ಒಕ್ಕಲಿಗೆ ಸಮುದಾಯದಲ್ಲಿ ಅಲ್ಪ ಸ್ವಲ್ಪ ಲೀಡರಶೀಪ್ ಹೊಗತ್ತೆ ಅಂತಾ ಅದಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದು ಹೇಳಿದರು.
ಬೇಲೂರು ಗಣೇಶ ಮೂರ್ತಿಗೆ ವಿಕೃತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೊಟ್ಟಿರುವ ಜೋಶಿ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ತುಷ್ಟೀಕರಣದ ಪರಾಕಾಷ್ಟೆ ಇದೆ. ಮತೀಯ ಭಾವನೆ ಕೆರಳಿಸೋರಿಗೆ ಕಾಂಗ್ರೆಸ್ ಪ್ರೋತ್ಸಾಹ ನೀಡುತ್ತಿದೆ. ಹೀಗಾಗಿ ಈ ರೀತಿಯ ಘಟನೆಗಳು ರಾಜ್ಯದಲ್ಲಿ ಮೇಲಿಂದ ಮೇಲೆ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಸಿದಿಯಿಂದ ಕಲ್ಲು ಹೊಡೆದ್ರು, ಮಸೀದಿಗೆ ಬುಲ್ಡೋಜರ್ ಹಚ್ಚಿ ಅಂದವರನ್ನು ಇವರು ಅರೆಸ್ಟ್ ಮಾಡ್ತಾರೆ, ಧರ್ಮಸ್ಥಳಕ್ಕೆ ಬುಲ್ಡೋಜರ್ ಹಚ್ಚು ಅನ್ನೋರಿಗೆ ಏನು ಮಾಡಲಿಲ್ಲಾ. ಕಾಂಗ್ರೆಸ್ ಮತಾಂದ ಮುಸಲ್ಮಾನರ ಪರವಾಗಿರೋ ಕೆಟ್ಟ ಪಾರ್ಟಿಯಾಗಿದೆ ಎಂದು ಗುಡುಗಿದರು.
ಇನ್ನು ಮತಗಳ್ಳತನ ವಿಚಾರವಾಗಿ ಪ್ರತಿಕ್ರಿಯಿಸಿರುವ ಜೋಶಿ, ನೋಟಿಸ್ ನೀಡದೆ ಯಾರ ಮತವನ್ನು ಡಿಲಿಟ್ ಮಾಡಲು ಬರಲ್ಲಾ. ಅಮೆರಿಕದಲ್ಲಿ ಕೂಡಾ ನಮ್ಮ ದೇಶದಂತೆ ಚುನಾವಣೆ ಆಗಲ್ವಾ, ಕಾಮನಸೆನ್ಸ್ ಇರಲಾರದ ರಾಹುಲ್ ಗಾಂಧಿ ಸಂವಿಧಾನ ಬದ್ದ ಸಂಸ್ಥೆ ಗಳ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆ ಎಂದು ಹೇಳಿದರು.
ಜನ ತಮಗೆ ಮತ ಹಾಕಲ್ಲಾ ಅಂತ ಈ ರೀತಿ ಮತಗಳ್ಳತನ ಆರೋಪ ಮಾಡುತ್ತಿದ್ದಾರೆ. ಎಸ್ ಐ ಟಿ ಯಿಂದ ಏನು ಆಗಲ್ಲಾ, ಇಲ್ಲಿವರಗೆ ಇವರು ತನಿಖೆ ಮಾಡಿರಲಿಲ್ಲಾ, ಇದೀಗ ರಾಹುಲ್ ಗಾಂಧಿ ಹೇಳಿದ ಮೇಲೆ ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದರು. ಲೋಕಸಭಾ, ವಿಧಾನಸಭೆ ಚುನಾವಣೆಯಲ್ಲಿ ಬ್ಯಾಲೇಟ್ ಪೇಪರ್ ಬಳಸಲು ಸಾಧ್ಯವಿಲ್ಲಾ, ದೇಶ ಡಿಜಿಟಲ್ ಆಗಿ ಮುಂದೆ ಹೋಗುತ್ತಿದ್ದಾಗ, ಪ್ರೋಗಾಮಿ ನಡವಳಿಕೆ ಸರಿಯಲ್ಲಾ, ಜನರು ನೀವು ಹಿಂದಕ್ಕೆ ಹೋಗಿ ಅಂತ ಕಾಂಗ್ರೆಸ್‌ನವರನ್ನು ಹಿಂದಕ್ಕೆನೆ ಕಳುಹಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ